ಕೃಷಿಗೆ ಸ್ವಾಭಿಮಾನ ತಂದು ಕೊಡಲು ಹಲೋ ಬದಲಾಗಿ ಜೈ ಕಿಸಾನ್ ಹೇಳಿ: ಡಿಸಿಎಂ ಸವದಿ

Team Udayavani, Jan 4, 2020, 3:57 PM IST

krishi

ವಿಜಯಪುರ: ನಿರ್ಲಕ್ಷಿತ ಕೃಷಿ ಕ್ಷೇತ್ರಕ್ಕೆ ಸ್ವಾಭಿಮಾನ ತಂದು ಕೊಡಲು ಮೊಬೈಲ್ ಕರೆಯ ವೇಳೆ ಹಲೋ ಎನ್ನುವ ಬದಲು ಜೈಕಿಸಾನ್ ಅಥವಾ ಜೈ ಜವಾನ್ ಎನ್ನುವ ಮೂಲಕ ಅನ್ನದಾತನಿಗೆ ಗೌರವಿಸುವ ಕೆಲಸವಾಗಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಶನಿವಾರ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಷಕಾರಕ ಆಹಾರ ಪೂರೈಕೆ ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವೈಜ್ಞಾನಿಕ ರಾಸಾಯನಿಕ, ಕ್ರಿಮಿನಾಶಕ ಬಳಕೆಗೆ ಕಡಿವಾಣ ಹಾಕಬೇಕಿದೆ. ಹಣ ಗಳಿಕೆಯ ಬದಲಾಗಿ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಪಣ ತೊಡಬೇಕಿದೆ. ಭವಿಷ್ಯದ ದಿನಗಳಲ್ಲಿ ಅನ್ಮದಾತರು ಕೂಡ ಈ ನಿಟ್ಡಿನಲ್ಲಿ ಬದ್ಧತೆ ತೋರಬೇಕು ಎಂದು ಮನವಿ ಮಾಡಿದರು.

ನೀರಿನ‌ ಮಿತ ಬಳಕೆ ಮಾಡದಿದ್ದಲ್ಲಿ ನೀರಾವರಿ ವ್ಯವಸ್ಥೆ ಹದಗೆಡುತ್ತದೆ. ಭೂಮಿ ಸವಳು- ಜವಳು ಆಗದಂತೆ ಮಾಡಬೇಕಿದೆ. ಪೂರ್ವಜರು ಕೊಟ್ಟ ಆರೋಗ್ಯಯುತ ಭೂಮಿಯನ್ನು ಮುಂದಿನ‌ ಪೀಳಿಗೆಗೆ ಬಿಟ್ಟು ಹೋಗುವ ಹೊಣೆ ನಮ್ಮ ಮೇಲಿದೆ. ಜೊತೆಗೆ ವಿಷಮುಕ್ತ ಆಹಾರ ಉತ್ಪಾದನೆಗಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅನ್ನದಾತ ಬೆಳೆಯುವ 26 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಆರು ಕೋಟಿ ಅನ್ನದಾತರಿಗೆ ಕೃಷಿ ಸಮ್ಮಾನ ಯೋಜನೆಯಲ್ಲಿ ಮೊದಲ ಕಂತಿನ 2000 ರೂ. ಹಣದಂತೆ ಪ್ರಧಾನಿ‌ ಮೋದಿ ಅವರು 12000 ಕೋಟಿ ಹಣವನ್ನು ನೇರವಾಗಿ ಅನ್ನದಾತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ನಮ್ಮ ಸರಕಾರ ರೈತರ ಪರವಾದ ನಮ್ಮ ಬದ್ಧತೆ ತೋರಿದೆ ಎಂದರು.

ಇದಕ್ಕಾಗಿ ನಮ್ನ ಸರ್ಕಾರ ಸಾವಯವ ಕೃಷಿ ಉತ್ಪಾದನೆ ಉದ್ಯಮ ಆರಂಭಕ್ಕೆ ರೈತರು ಒಕ್ಕೂಟ‌ ಮಾಡಿಕೊಂಡಲ್ಲಿ 10 ಲಕ್ಷ ರೂ.ನೆರವು ನೀಡುತ್ತಿದೆ.

ವಿಜಯಪುರ ಕೃಷಿಮೇಳ ಆಯೋಜನೆಯ ಅವ್ಯವಸ್ಥತೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಟಾಚಾರದ ಕೃಷಿಮೇಳಗಳಿಂದ ಯಾರಿಗೂ ಉಪಯೋಗವಿಲ್ಲ. ಭವಿಷ್ಯದಲ್ಲಿ ಕೃಷಿಮೇಳಗಳು ರೈತಪರವಾಗಿ ಇರಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚಟ್ಟಿ ಅವರಿಗೆ ಸೂಚನೆ ನೀಡಿದರು.

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.