ರಾಜ್ಯ ವಿಭಜನೆ ಅಪಾಯ ತಪ್ಪಿಸಿದವರು ದೇವರಾಜ ಅರಸು


Team Udayavani, Aug 21, 2020, 6:13 PM IST

ರಾಜ್ಯ ವಿಭಜನೆ ಅಪಾಯ ತಪ್ಪಿಸಿದವರು ದೇವರಾಜ ಅರಸು

ವಿಜಯಪುರ: ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ರಾಜ್ಯ ವಿಭಜನೆಯ ಅಪಾಯವನ್ನು ತಪ್ಪಿಸಿದರು ಎಂದು ಹಿರಿಯ ಪತ್ರಕರ್ತ ಆರ್‌.ಟಿ. ವಿಠ್ಠಲಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ದಿ| ದೇವರಾಜ ಅರಸು ಅವರ 105ನೇ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಏರ್ಪಡಿಸಿದ್ದ ದೇವರಾಜ ಅರಸು-ಸಾಮಾಜಿಕ ನ್ಯಾಯ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಏಕೀಕರಣಕ್ಕಿಂತ ಮುಂಚೆ ಹಳೆ ಮೈಸೂರಿನ ಪ್ರಬಲ ಸಮುದಾಯದವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಿದ್ದರು. ಏಕೀಕರಣದ ನಂತರ ಉತ್ತರ ಕರ್ನಾಟಕದ ಒಂದು ಪ್ರಬಲ ಸಮುದಾಯದವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸತೊಡಗಿದರು. ಇದರಿಂದಾಗಿ ಸಹಜವಾಗಿಯೇ ಎರಡು ಸಮುದಾಯಗಳಲ್ಲಿ ಅಧಿಕಾರಕ್ಕಾಗಿ ಭಿನ್ನಾಭಿಪ್ರಾಯ ಶುರುವಾಯಿತು. ಮುಖ್ಯಮಂತ್ರಿ ಹುದ್ದೆ ತಮಗೆ ದಕ್ಕಬೇಕೆಂದರೆ ಅಧಿಕಾರದಲ್ಲಿ ಹೆಚ್ಚು ಪಾಲು ತಮಗೆ ಸಿಗಬೇಕೆಂದರೆ ವಿಭಜನೆ ಸೂಕ್ತ ಎಂಬ ಅಭಿಪ್ರಾಯಗಳು ಕೇಳಿ ಬರತೊಡಗಿದವು ಎಂದರು.

ಆದರೆ ದೇವರಾಜ ಅರಸರು ಮುಖ್ಯಮಂತ್ರಿಯಾದ ನಂತರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತಂದು ಉಳುವವನೇ ಹೊಲದೊಡೆಯ ಎಂಬ ಕಾರ್ಯಕ್ರಮ ದುರ್ಬಲ ವರ್ಗಗಳಲ್ಲೂ ರಾಜಕೀಯ ಪ್ರಜ್ಞೆಯನ್ನು ಹೆಚ್ಚಿಸಿತು. ರಾಜಕೀಯ ಪ್ರಜ್ಞೆ ಇರುವ ವರ್ಗ ಸಹಜವಾಗಿಯೇ ತಮ್ಮನ್ನು ಆಳುವವರು ಯಾರಿರಬೇಕು ಎಂಬ ಕಡೆ ಗಮನ ಹರಿಸುತ್ತದೆ. ಅದುವರೆಗೆರಾಜಕೀಯ ಪ್ರಜ್ಞೆ ಇಲ್ಲದ ವರ್ಗಗಳು ಯಾವಾಗ ಆ ಪ್ರಜ್ಞೆ ಪಡೆದವೋ ಅದಾದ ನಂತರ ಅಧಿಕಾರ ಪಡೆಯಲು ವಿಭಜನೆಯ ಬಗ್ಗೆ ಒಲವು ತೋರಿಸುತ್ತಿದ್ದ ನಾಯಕರ ಧ್ವನಿ ಕ್ಷೀಣವಾಯಿತು ಎಂದು ವಿಶ್ಲೇಷಿಸಿದರು.

ರಾಜಕೀಯ ಪ್ರಜ್ಞೆ ಇಲ್ಲದ ವರ್ಗಗಳನ್ನು ಹಿಡಿತದಲ್ಲಿಟ್ಟುಕೊಂಡು ಅಧಿಕಾರ ಪಡೆಯಬಹುದು. ಆದರೆ ರಾಜಕೀಯ ಪ್ರಜ್ಞೆ ಬೆಳೆದ ವರ್ಗಗಳನ್ನು ಹಿಡಿತದಲ್ಲಿಟ್ಟುಕೊಂಡು ಆಸೆ ಈಡೇರಿಸಿಕೊಳ್ಳುವುದು ಕಷ್ಟ. ಇದು ಗೊತ್ತಾಗಿದ್ದರಿಂದಲೇ ವಿಭಜನೆ ಮೂಲಕ ಅಧಿಕಾರ ಪಡೆಯುವ ನಿರೀಕ್ಷೆ ಇರಿಸಿಕೊಂಡಿದ್ದವರ ಧ್ವನಿ ಕ್ಷೀಣವಾಯಿತು ಎಂದು ಹೇಳಿದರು.

ಅರಸರ ಬದುಕಿನ ಮುಖ್ಯ ಗುರಿ ಸಂಪತ್ತಿನ ಕೇಂದ್ರೀಕರಣದ ವಿರುದ್ಧ ಹೋರಾಡುವುದೇ ಆಗಿತ್ತು. ಕೆಲವೇ ಪ್ರಮಾಣದ ಜನ ವ್ಯವಸ್ಥೆಯ ಬಹುಪಾಲು ಸಂಪತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಾಗ ಬಹುಸಂಖ್ಯಾತ ವರ್ಗ ಅಸಹಾಯಕವಾಗುತ್ತದೆ. ವಿಪರ್ಯಾಸವೆಂದರೆ ಸಂಪತ್ತನ್ನು ಕೇಂದ್ರೀಕರಿಸಿಕೊಂಡವರಿಗೆ ತಮ್ಮ ವಿರುದ್ಧ ನಿಂತವರನ್ನು ಎದುರಿಸಲು ಸಲಕರಣೆಗಳಿವೆ. ಆದರೆ ಅವರ ವಿರುದ್ಧ ಹೋರಾಡುವವರ ಕೈಲಿ ಯಾವ ಸಲಕರಣೆಗಳೂ ಇರುವುದಿಲ್ಲ .ಹೀಗಾಗಿ ದುರ್ಬಲ ವರ್ಗಗಳನ್ನು ಹಿಂದಿಟ್ಟುಕೊಂಡು ಹೋರಾಟ ನಡೆಸುವುದು ಬಹಳ ಕಷ್ಟ.ಆದರೆ ದೇವರಾಜ ಅರಸರು ಆ ಕೆಲಸ ಮಾಡಿದರು ಎಂದರು.

ಇವತ್ತು ಕೂಡಾ ಸಂಪತ್ತಿನ ಕೇಂದ್ರೀಕರಣದ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ.ಬಹು ಸಂಖ್ಯಾತರು ಅಸಹಾಯಕರಾಗುತ್ತಿದ್ದಾರೆ.ಹೀಗಾಗಿ ಯಾವ ಉದ್ದೇಶವಿಟ್ಟುಕೊಂಡು ದೇವರಾಜ ಅರಸರು ಹೋರಾಡಿದರೋ ಅಂತಹ ಹೋರಾಟ ನೆನಪಿಸಿಕೊಂಡು ವ್ಯವಸ್ಥೆಯ ಬಹುಪಾಲು ಜನರು ಮೇಲೆದ್ದು ನಿಲ್ಲಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿವಿ ಪ್ರಭಾರ ಕುಲಪತಿ ಪ್ರೊ| ಓಂಕಾರಗೌಡ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಕುಲ ಸಚಿವೆ ಪ್ರೊ| ಆರ್‌. ಸುನಂದಮ್ಮ, ಡಾ| ಶ್ರೀನಿವಾಸ್‌ ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.