ಹತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, Oct 6, 2018, 12:23 PM IST
ವಿಜಯಪುರ: ಬುದ್ಧಿಮಾಂದ್ಯ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಬಂಜಾರಾ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ರಾಜು ಪವಾರ, ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ಭಾಗ-2 ತಾಂಡಾದಲ್ಲಿ ಬುದ್ಧಿಮಾಂದ್ಯ ವಿಕಲಚೇತನ ಅಪ್ರಾಪೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿಲಾಗಿದೆ. ಅನಾಮಧೇಯವಾಗಿ ತೊಗರಿ ಜಮೀನಿನಲ್ಲಿ ಸಿಕ್ಕ ಶವವನ್ನು ಪತ್ತೆ ಹಚ್ಚಲಾಗಿದೆ.
ನಿಡಗುಂದಿ ಠಾಣೆ ಪೊಲೀಸರು ಭವಿಷ್ಯದಲ್ಲಿ ಇಂಥ ಕೃತ್ಯಗಳು ಜರುಗದಂತೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು ಎಂದು ಆಗ್ರಹಿಸಿದರು.
ನೀಲಕಂಠ ಚವ್ಹಾಣ, ಸಂತೋಷ ಚವ್ಹಾಣ, ಗೋಪಿಚಂದ ಚವ್ಹಾಣ, ಅನಿಲ ಚವ್ಹಾಣ, ವಿಕಾಸ ಪವಾರ, ತಾರಾಸಿಂಗ್ ರಾಠೊಡ, ಸಂಜೀವ ಚವ್ಹಾಣ, ಶ್ರೀಕಾಂತ ಚವ್ಹಾಣ, ರಾಜು ರಾಠೊಡ, ಸಂಜೀವ ಚವ್ಹಾಣ, ವಿನೋದ ಚವ್ಹಾಣ, ವಿಕಾಸ ಚವ್ಹಾಣ, ಕುಮಾರ ಚವ್ಹಾಣ ಸೇರಿದಂತೆ ಮುಂತಾದವರು ಇದ್ದರು.
ಮುದ್ದೇಬಿಹಾಳ: ಚಿಮ್ಮಲಗಿ ತಾಂಡಾದ ಮಂದಬುದ್ಧಿಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿ ಅಂಗವಿಕಲರು ಶುಕ್ರವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಮರುದಿನ ಸಂಜೆ ಹೊಲವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗ್ರಾಮಸ್ಥರು ಬಾಲಕಿ ಶವ ಮುಂದಿಟ್ಟುಕೊಂಡು ಅಹೋರಾತ್ರಿ ಹೋರಾಟ ನಡೆಸಿದ್ದರು. ಆರೋಪಿಗಳ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಭರವಸೆಯನ್ನು ಪೊಲೀಸರು, ಸರ್ಕಾರಿ ಅಧಿಕಾರಿಗಳು ನೀಡಿದ್ದರಿಂದ ಶವದ ಮರಣೋತ್ತರ ಪರೀಕ್ಷೆಗೆ ಅವಕಾಶ ಒದಗಿಸಿಕೊಡಲಾಗಿತ್ತು. ಘಟನೆ ನಡೆದು 3 ದಿನಗಳಾದರೂ ಇದುವರೆಗೂ ಆರೋಪಿಗಳ ಬಂಧನ ಆಗದಿರುವುದು ಅನುಮಾನ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪೊಲಿಸ್ ಇಲಾಖೆ ಕೂಡಲೇ ಹೆಚ್ಚು ಸಕ್ರಿಯವಾಗಿ ತನಿಖೆ ನಡೆಸುವ ಮೂಲಕ ಆರೋಪಿಗಳು ಯಾರೇ ಆಗಿರಲಿ, ಎಷ್ಟೇ ಪ್ರಭಾವಶಾಲಿಯಾಗಿರಲಿ ಅವರೆಲ್ಲರನ್ನೂ ಬಂಧಿಸಿ ಗಲ್ಲು ಶಿಕ್ಷೆ ದೊರಕುವಂತೆ ನೋಡಿಕೊಂಡು ಹತ್ಯಾಚಾರಿಗಳಿಗೆ ಪಾಠ
ಕಲಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿಅಂಗವಿಕಲರು ಒಂದಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುದ್ದೇಬಿಹಾಳ ತಾಲೂಕು ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂಗಳ ಒಕ್ಕೂಟ, ಅಂಗವಿಕಲರ ಪಾಲಕರ ಒಕ್ಕೂಟ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಕೆ. ಘಾಟಿ, ಪಿ.ಪಿ. ಚಲವಾದಿ, ಈರಯ್ಯ ಹಿರೇಮಠ ಹಿರೇಮುರಾಳ, ಸಂಗಣ್ಣ ಹುಣಶ್ಯಾಳ, ಪ್ರಭುಗೌಡ ಚಿಂಚೋಳಿ, ರುದ್ರಗೌಡ ಗೌಡರ, ಶಶಿಕಾಂತ ಯಾಳಗಿ, ರಾಜು ರಾಠೊಡ, ಎಸ್.ಸಿ. ಮೇಟಿ, ಯಲ್ಲಪ್ಪ ಮಾದರ, ರೇಣುಕಾ ಕೋಳೂರ, ಸಂಗಮ್ಮ ಜಂಬಗಿ, ಸಂಗಣ್ಣ ಮದರಿ, ನಿಂಗಪ್ಪ ಹೊಕ್ರಾಣಿ, ಅಲ್ತಾಫ್ ಮೂಲಿಮನಿ, ಅಡಿವೆಪ್ಪ ಕೊಡಗಾನೂರ, ಈರಮ್ಮ ಮಡಿವಾಳರ, ಸಂಗಮ್ಮ ಕಂಚಲಕಾಯಿ, ಚನ್ನವೀರ ಮಮ್ಮದಕೋಟಿ, ಬಾಲಪ್ಪ ಬಿಸಲದಿನ್ನಿ ಇದ್ದರು.
ಇಂಡಿ: ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ಎಲ್‌ಟಿ ಗ್ರಾಮದಲ್ಲಿ ಬುದ್ಧಿಮಾಂಧ್ಯಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿ ಧಿಸಲು ಆಗ್ರಹಿಸಿ ತಾಲೂಕಿನ ಅಂಗವಿಕರು ಹಾಗೂ ಪಾಲಕರ
ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ. ಮಕಾಂದಾರ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಹಾಗೂ ಕೊಲೆ ಕೃತ್ಯಗಳು ನಡೆಯುತ್ತಿರುವುದು ಖೇದಕರ ಸಂಗತಿ. ಈ ಕಾರ್ಯ ಮಾಡಿದ ಆರೋಪಿಗಳಿಗೆ ಗಲ್ಲಿಗೇರಿಸಬೇಕು. ಆರೋಪಿಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಿವಲಿಂಗಪ್ಪ ನಾಯ್ಕೊಡಿ , ಸೋಮಯ್ಯ ಮೋಮಿನ, ನೀಲಮ್ಮ ಶಿವಶರಣ, ಪಾಂಡು ರಾಠೊಡ, ಭರಮಣ್ಣ ಪೂಜಾರಿ, ಸಂತೋಷ ಚೌಹಾಣ, ಹಸೀನಾ ಬಿರಾದಾರ, ಮುಸ್ತಾಕ ಮೋಮಿನ, ಆನಂದ ತೋಡಕರ,
ರಮೇಶ ರಾಠೊಡ, ಬೀರಪ್ಪ ಡಂಬಳ,ಅಶೋಕ ರಾಠೊಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.