ಕರಿ ಮೇಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು


Team Udayavani, Sep 2, 2017, 2:27 PM IST

vij-3.jpg

ವಿಜಯಪುರ: ಇಸ್ಲಾಂ ಧರ್ಮೀಯರ ಪವಿತ್ರ ಬಕ್ರೀದ್‌ ಹಬ್ಬಕ್ಕಾಗಿ ವಿಜಯಪುರ ಜಿಲ್ಲೆ ಸಂಪೂರ್ಣ ಸಿದ್ಧವಾಗಿದ್ದು,
ಹಬ್ಬದಲ್ಲಿ ಬಲಿ ಕೊಡಲು ಕುರಿ-ಮೇಕೆಗಳನ್ನು ಕೊಂಡು ಸಾಕುತ್ತಿದ್ದಾರೆ. ಹಬ್ಬದ ಹಿನ್ನೆಲೆ ಆರೇಳು ಸಾವಿರ ರೂ.
ಗೆ ಮಾರಾಟವಾಗುವ ಕುರಿ-ಮೇಕೆಗಳು 50 ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ. ಹಣೆ ಮೇಲೆ ಬಿಳಿ
ಕೂದಲಿರುವ ಕರಿ ಮೇಕೆಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ.

 ದೈಹಿಕವಾಗಿ ಎತ್ತರ, ಉದ್ದನೆಯ ದೇಹ ರಚನೆ, ಅಧಿಕ ಕೊಬ್ಬಿದ ಮೈಮಾಟ ಹೊಂದಿರುವ ಮೇಕೆ, ಹೋತು, ಟಗರು, ಕುರಿಗಳಿಗೆ ಅಧಿಕ ಬೇಡಿಕೆ ಇದೆ. ಇಂತ ಮೇಕೆ-ಕುರಿಗಳು 50 ಸಾವಿರ ರೂ. ವರೆಗೆ ಮಾರಾಟವಾಗಿವೆ. ಇಸ್ಲಾಂ ಧರ್ಮ ಬಕ್ರೀದ್‌ ಹಬ್ಬದಲ್ಲಿ ಅತ್ಯಗತ್ಯ. ಹೀಗಾಗಿ ಹಲವು ರೈತರು ಈ ಹಬ್ಬಕ್ಕೆಂದೇ ಹಬ್ಬೆ ಕೆಲವು ತಿಂಗಳ ಮೊದಲೇ ಮರಿಗಳನ್ನು ಕೊಂಡು, ಅವುಗಳಿಗೆ ಪೌಷ್ಟಿಕ ಆಹಾರ ನೀಡಿ ಟಗರು-ಹೋತುಗಳನ್ನು ಆರೈಕೆ ಮಾಡಿ ಸಾಕಿ, ಮಾರಾಟ ಮಾಡಿದ್ದಾರೆ. 

ವಿಜಯಪುರ ಜಿಲ್ಲೆಯಲ್ಲಿ ಪ್ರತಿ ತಾಲೂಕು ದೊಡ್ಡ ದೊಡ್ಡ ಹೋಬಳಿ ಕೇಂದ್ರಗಳ ಪಟ್ಟಣಗಳಲ್ಲಿ ಕಳೆದ ಎರಡು ವಾರಗಳಿಂದ ಜಾನುವಾರು ಮಾರುಕಟ್ಟೆಯಲ್ಲಿ ಟಗರು, ಕುರಿ, ಮೇಕೆ, ಹೋತುಗಳ ಮಾರಾಟ ಜೋರಾಗಿದೆ. ಬಕ್ರೀದ್‌ ಹಬ್ಬದಲ್ಲಿ ಇಸ್ಲಾಂ ಧರ್ಮೀಯರಿಗೆ ಬಕ್ರಾ (ಕುರಿ) ಬಲಿ ಕೊಟ್ಟು ಅದರ ಪ್ರಸಾದವನ್ನೇ ಅಲ್ಹಾನಿಗೆ ಅರ್ಪಿಸುವುದು ಕಡ್ಡಾಯ ಎಂಬ ಧಾರ್ಮಿಕ ಆಚರಣೆ ಇದೆ. ಹೀಗಾಗಿ ಬಕ್ರೀದ್‌ ಹಬ್ಬದಲ್ಲಿ ಮೇಕೆ-ಕುರಿಗಳನ್ನು ಕೊಳ್ಳಲು ಮುಗಿ ಬೀಳುತ್ತಾರೆ.

ಎತ್ತರ ಗಾತ್ರದ ಅಧಿಕ ತೂಕ ಇರುವ ಇಂತ ಹೋತುಗಳನ್ನು 1 ಲಕ್ಷ ರೂ.ಗೆ ಕೊಳ್ಳುವ ಜನರು ಇದ್ದಾರೆ. ಬಕ್ರೀದ್‌ ಹಬ್ಬಕ್ಕಾಗಿ ನಗರದಲ್ಲಿ ಅಬ್ದುಲ್‌ ಕರೀಂ ಹೊನ್ನುಟಟಗಿ ಎಂಬವರು ವಿಜಯಪುರ ತಾಲೂಕು ಅರಕೇರಿ ರೈತರಿಂದ 55 ಸಾವಿರ ರೂ.ಗೆ ಮೈಗೂದಲು ಬಿಳಿ ಇರುವ ಮೇಕೆ ಖರೀದಿಸಿದ್ದಾರೆ. 

ಮಹ್ಮದ್‌ ಯಾಸೀನ್‌ ತಡವಲಾ ಎಂಬವರು ಬೆಳಗಾವಿ ಜಿಲ್ಲೆಯ ರಾಯಬಾಗನ ರೈತರ ಮನೆಗೆ ನೇರವಾಗಿ ಹೋಗಿ ತಲಾ 30 ಸಾವಿರ ರೂ.ಗೆ ಒಂದರಂತೆ ಎರಡು ಹೋತು ಕೊಂಡು ತಂದಿದ್ದಾರೆ. ಕಳೆದ ಹಲವು ದಿನಗಳ ಹಿಂದೆಯೇ ಈ ಹೋತುಗಳನ್ನು ತಂದಿದ್ದು, ಮನೆಯಲ್ಲಿ ಅವುಗಳಿಗೆ ಹಸಿರು ಹುಲ್ಲು, ಆಹಾರ ಧಾನ್ಯಗಳ ಕೈ ಹಿಂಡಿ ನೀಡು ಮತ್ತಷ್ಟು ಬಲಿಷ್ಠವಾಗಿ ಸಾಕಿದ್ದಾರೆ.

 ಎತ್ತರ ದೇಹ, ಕೊಬ್ಬಿದ ದೈಹಿಕ ಸ್ಥಿತಿ ಇರುವ ಮೇಕೆಗಳನ್ನು ಕೊಳ್ಳುತ್ತೇವೆ. ಆರೋಗ್ಯವಂತ ಮೇಕೆಗಳ ಮಾಂಸ ಸೇವನೆಯಿಂದ ಮನುಷ್ಯರಿಗೂ ಯಾವುದೇ ಬಾಧೆ ಇರುವುದಿಲ್ಲ ಎಂಬ ಸದಾಶಯವೂ ಇದರ ಹಿಂದೆ. ಹೀಗಾಗಿ ಅಧಿಕ ಕೊಬ್ಬಿದ ಆರೋಗ್ಯವಂತ ಮೇಕೆ-ಕುರಿಗೆ ಸಾಮಾನ್ಯವಾಗಿ ಅಧಿಕ ಬೆಲೆ ಇರುತ್ತದೆ. ಸಾಮಾನ್ಯ ದಿನಗಳಿಗಿಂತ ಹಬ್ಬದ ಸಂದರ್ಭದಲ್ಲಿ ಇಂತ ಕುರಿ-ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ, ಬೆಲೆಯೂ ಸಾಮಾನ್ಯವಾಗಿ ದ್ವಿಗುಣ ಇರುತ್ತದೆ ಎನ್ನುತ್ತಾರೆ ಸ್ಥಳೀಯರು. 

„ಜಿ.ಎಸ್‌. ಕಮತರ

ಟಾಪ್ ನ್ಯೂಸ್

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.