ಬೆಳೆ ಹಾನಿ ಪರಿಹಾರ ಒದಗಿಸಲು ಆಗ್ರಹ


Team Udayavani, Jul 26, 2022, 6:02 PM IST

21crop

ತಾಳಿಕೋಟೆ: ಕೃಷಿ ಹಾಗೂ ಕೂಲಿಯನ್ನೆ ನಂಬಿರುವ ರೈತರು ಸಾಲ ಮಾಡಿ ಸತತ ಕಳೆದ ಮೂರು ವರ್ಷದಿಂದ ವಿಮೆ ಕಂತು ತುಂಬಿದ್ದಾರೆ. ಇತ್ತ ಬೆಳೆಯೂ ಬಂದಿಲ್ಲ, ಮತ್ತೂಂದೆಡೆ ಪರಿಹಾರವೂ ಬಂದಿಲ್ಲ. ಕೂಡಲೇ ಫಸಲ್‌ ಬೀಮಾ ಯೋಜನೆ ಮೇಲೆ ರೈತರು ನಂಬಿಕೆ ಕಳೆದುಕೊಳ್ಳುವ ಮುಂಚೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದರು.

ಸೋಮವಾರ ಉಪ ತಹಶೀಲ್ದಾರ್‌ ಗೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಕೆಲವು ಕಡೆಗಳಲ್ಲಿ ಒಂದು ಪ್ರದೇಶದ ಕೆಲವು ರೈತರಿಗೆ ಫಸಲ್‌ ಬೀಮಾ ಯೋಜನೆ ಹಣ ಜಮೆಯಾದರೆ ಇನ್ನೊಂದು ಪ್ರದೇಶದ ರೈತರಿಗೆ ಹಣ ಜಮೆಯಾಗಿಲ್ಲ. ಕೆಲವು ಪ್ರದೇಶದ ರೈತರಿಗೆ ಹೆಚ್ಚಿಗೆ ಹಣ ಜಮೆಯಾದರೆ ಇನ್ನೊಂದು ಪ್ರದೇಶದ ರೈತರಿಗೆ ಕಡಿಮೆ ಹಣ ಜಮೆಯಾಗಿದೆ ಎಂದರು.

ವಿಮೆ ಕಂಪನಿಯವರು ಅವೈಜ್ಞಾನಿಕವಾಗಿ ವರದಿ ಸಲ್ಲಿಸಿದ ಅಧಿಕಾರಿಗಳ ಕುಮ್ಮಕ್ಕಿನಿಂದ ವಿಮೆ ಹಣ ಗೋಲಮಾಲ್‌ ಮಾಡಲು ನಡೆದಿರುವ ಕುತಂತ್ರವೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ವೀಕ್ಷಣೆ ಮಾಡುವವರು ಬೇರೆ ಕಡೆ ಕುಳಿತು ಅಂದಾಜು ವರದಿ ಸಲ್ಲಿಸಿದಾಗಲೂ ಈ ಘಟನೆ ನಡೆದಿರಲು ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಫಸಲ್‌ ಬಿಮಾ ಯೋಜನೆ ಬಗ್ಗೆ ರೈತರು ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೂ ಮುಂಚೆ ಜನರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಅದೇ ರೀತಿ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈ ಕೊಟ್ಟು ರೈತರು ಬೀಜ ಗೊಬ್ಬರ ಭೂಮಿಗೆ ಚೆಲ್ಲಿ ಮುಗಿಲಿನತ್ತ ಮುಖ ಮಾಡಿದ್ದಾರೆ. ಅದಕ್ಕೆ ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿದ್ದಾರೆ. ಆದಷ್ಟು ಬೇಗ ಹಳೆಯ ವಿಮೆ ಜಮಾ ಆಗುವಂತೆ ಮತ್ತು ಈ ವರ್ಷದ ಮುಂಗಾರು ವಿಫಲ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಕಲಕೇರಿ ಪಟ್ಟಣದ ಅಧ್ಯಕ್ಷ ಶಾಂತಯ್ಯ ಗಣಾಚಾರಿ, ಹೋಬಳಿ ಅಧ್ಯಕ್ಷ ಮೆಹಬೂಬ ಭಾಷಾ ಮನಗೂಳಿ, ಉಪಾಧ್ಯಕ್ಷ ಪುಂಡಲೀಕ ಚವ್ಹಾಣ ಇದ್ದರು.

ಟಾಪ್ ನ್ಯೂಸ್

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.