ಪಾಕಿಸ್ತಾನಕ್ಕೆ ಪಾಠ ಕಲಿಸಲು ಆಗ್ರಹ
Team Udayavani, Feb 16, 2019, 8:51 AM IST
ನಿಡಗುಂದಿ: ಮೀಸೆ ಕೆಳಗೆ ಬಿದ್ದರೂ ಮಣ್ಣಾಗಲಿಲ್ಲ ಎನ್ನುವ ಪಾಪಿ ಪಾಕಿಸ್ತಾನ ತನ್ನ ಚಾಳಿ ಮುಂದುವರಿಸಿ ಉಗ್ರರನ್ನು ಭಾರತೀಯ ಸೇನೆ ಮೇಲೆ ಛೂ ಬಿಟ್ಟು 40ಕ್ಕೂ ಹೆಚ್ಚು ಸೈನಿಕರನ್ನು ಕೊಂದ ಪಾಕ್‌ಗೆ ಶೀಘ್ರ ತಕ್ಕಪಾಠ ಕಲಿಸಬೇಕು ಎಂದು ನಿವೃತ್ತ ಸೈನಿಕ ಸಿದ್ರಾಮೇಶ ಅರಮನಿ ಹೇಳಿದರು.
ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್ ಇಸ್ಮಾಯಿಲ್ ಮೂಲ್ಕಿಶಿಫಾಯಿ ಅವರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪುಲಾವಾಮಾ ಜಿಲ್ಲೆಯಲ್ಲಿ ಕೇಂದ್ರಿಯ ಮೀಸಲು ಪಡೆಯಸೈನಿಕರ ಮೇಲೆ ಗುರುವಾರ ಹೇಡಿಯಂತೆ ದಾಳಿ ಮಾಡಿ ಸೈನಿಕರ ಪ್ರಾಣ ತೆಗೆದ ಪಾಕಿಸ್ತಾನವನ್ನು ಭೂಪಟದಲ್ಲಿ ಇರದಂತೆ ನಾಶ ಮಾಡಬೇಕು. ಕಳೆದ ಕೆಲ ದಿನಗಳ ಹಿಂದೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ದಿಂದ ಪಾಠ ಕಲಿಯದ ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಬೇಕು. ಭಯೋತ್ಪಾದನೆಯನ್ನು ಮಟ್ಟಹಾಕದೆ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನ ನೆಲೆಯನ್ನು ಧ್ವಂಸ ಮಾಡುವ ಮೂಲಕ ಪ್ರತ್ಯುತ್ತರ ನೀಡಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯ ವೈ.ಎಸ್. ಭಜಂತ್ರಿ ಮಾತನಾಡಿ, ಪಾಕಿಸ್ತಾನ ಪದೇ ಪದೇ ಉಗ್ರರ ಮೂಲಕ ಸೈನಿಕರ ಪ್ರಾಣ ತೆಗೆಯುತ್ತಿರುವುದು ನೋಡಿದರೆ ಅದೊಂದು ರೀತಿ ಯುದ್ಧ ಸಾರಿದಂತೆ ಕಾಣುತ್ತಿದೆ. ತಾಳ್ಮೆ, ಸಹನೆಯ ಭಾರತ ತನ್ನ ಶಕ್ತಿ, ಸಾಮರ್ಥ್ಯವನ್ನು ಇಡಿ ವಿಶ್ವಕ್ಕೆ ಸಾರುವ ಸಮಯ ಬಂದಿದ್ದು ಕೂಡಲೇ ಪಾಕ್‌ನ ನೆಲೆಯನ್ನು ಸಂಪೂರ್ಣ ನಾಶಪಡಿಸಬೇಕು. 40ಕ್ಕೂ ಅಧಿಕ ಸೈನಿಕರ ಪ್ರಾಣ ಪಡೆದ ಪಾಕ್‌ಗೆ ಮತ್ತೂಂದು ಸರ್ಜಿಕಲ್ ಸ್ಟ್ರೈಕ್‌ದಂತ ಹೊಡೆದ ನೀಡಬೇಕು.
ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಗೆ ನೀಡಿದ ರಕ್ಷಣೆಯನ್ನು ಹಿಂಪಡೆದು ಅವರನ್ನು ಇತರೆ ರಾಜ್ಯಗಳ ಸೆರೆಮನೆಯಲ್ಲಿ ಬಂಧಿಯಾಗಿಸಬೇಕು ಎಂದರು. ನಿವೃತ್ತ ಸೈನಿಕರಾದ ಬಿ.ಡಿ. ವಿಭೂತಿ, ಶಿವಾನಂದ ರೂಢಗಿ, ಬಸವರಾಜ ಗಣಿ, ಸಂಗಮೇಶ ಕೂಡಗಿ, ಸಂತೋಷ ಮಡಿವಾಳರ, ಹಿಂದೂ ಜನಜಾಗೃತಿ ಸಮಿತಿಯ ವೆಂಕಟರಮಣ ನಾಯ್ಕ, ಶಿವಶಂಕ್ರಪ್ಪ ಅಂಗಡಿ, ಬಸಯ್ಯ ಗಣಾಚಾರಿ, ಜಟ್ಟೆಪ್ಪ ಗಣಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.