ಕೆಎಚ್‌ಡಿಸಿ ನಿಗಮದಿಂದ ಅಭಿವೃದ್ದಿ ಯೋಜನೆ: ಶಾಸಕ ಸವದಿ
Team Udayavani, Jan 4, 2022, 12:55 PM IST
ರಬಕವಿ-ಬನಹಟ್ಟಿ: ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳು ಇದಕ್ಕೆ ಸ್ಪಂದಿಸಿದ್ದಾರೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.
ನಗರದಲ್ಲಿ ಕೆಎಚ್‌ಡಿಸಿ ನೇಕಾರಿಗೆ, ಕೂಲಿ ಕಾರ್ಮಿಕರಿಗೆ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ಕಿಟ್ ವಿತರಿಸಿ ಅವರು ಮಾತನಾಡಿದರು.
ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೆಎಚ್‌ಡಿಸಿ ಅಭಿವೃದ್ಧಿಗೆ ಏನು ಮಾಡಬೇಕು ಎಂದು ನೂತನ ಯೋಜನೆ ಕೈಗೊಂಡಿದ್ದೇವೆ. ಕೆಎಚ್‌ಡಿಸಿಯ 110 ಕೋಟಿ ಸಾಲವಿದ್ದು, ಇಲ್ಲಿಯವರೆಗೆ 100 ಕೋಟಿ ಎಫ್‌ಡಿ ಇದ್ದು, ಅದನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಲು ತಿಳಿಸಿದ್ದು ಇದರಿಂದ ಬಡ್ಡಿ ಹಣದ ಉಳಿತಾಯವಾಗುತ್ತದೆ. ನೇಕಾರರ ವೇತನವನ್ನು ಸರಕಾರವೇ ಭರಿಸಲು ಹೇಳಿದ್ದು, ಅದಕ್ಕೂ ಒಪ್ಪಿಕೊಂಡಿದ್ದಾರೆ. 40 ಕೋಟಿ ಹಾಗೂ 23 ಕೋಟಿಯ ಸಾಲವಿತ್ತು ಅದನ್ನು ಶೇರಾಗಿ ಪರಿವರ್ತಿಸಲು ಹೇಳಿದ್ದೇವೆ. ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ ಎಂದು ಸಿದ್ದು ಸವದಿ ಹೇಳಿದರು.
ಕೆಎಚ್‌ಡಿಸಿ ನೇಕಾರರ ಶೇ. 15 ವೇತನವನ್ನು ಹೆಚ್ಚು ಮಾಡಿದ್ದು, ನಿರಂತರ ಉದ್ಯೋಗ ನೀಡುವತ್ತ ಕ್ರಮ ತೆಗೆದುಕೊಳ್ಳಲಾಗಿದೆ. ನಿರಂತರವಾಗಿ ಕಚ್ಚಾ ಮಾಲು ಪೂರೈಕೆಯಾಗುತ್ತಿದೆ. ವಿದ್ಯಾವಿಕಾಸ ಬಟ್ಟೆ ವಿತರಣೆಯಿಂದ ಆಗಿರುವ ಸುಮಾರು 10 ಕೋಟಿ ರೂಪಾಯಿಗಳಲ್ಲಿ 5 ಕೋಟಿ ರೂ. ಸರಿದೂಗಿಸಲು ಹಾಗೂ 6.5 ಕೋಟಿ ದಂಡ ಮರಳಿಸಲು ಸರಕಾರ ಒಪ್ಪಿಗೆ ನೀಡಿದೆ. ಈಗಾಗಲೇ ಹಲವಾರು ನಿಗಮಗಳು ಪೆಟ್ರೋಲ್ ಬಂಕ್ ಸ್ಥಾಪಿಸಿ ಉತ್ತಮ ಆದಾಯ ಗಳಿಸುತ್ತಿದ್ದು, ನಿಗಮದಿಂದ ಸುಮಾರು 10 ಕಡೆ ಪೆಟ್ರೋಲ್ ಬಂಕ್ ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಈಗಾಗಲೇ ಹುಬ್ಬಳಿಯಲ್ಲಿ ಒಂದು ಸ್ಥಾಪನೆ ಮಾಡುತ್ತಿದ್ದು, ಏಕಕಾಲಕ್ಕೆ 10 ಬಂಕ್‌ಗಳ ಬೇಡಿಕೆಯಿದೆ. ಪರಿಶೀಲನೆ ಹಂತದಲ್ಲಿದ್ದು, 5-6 ತಿಂಗಳಲ್ಲಿ ಆರಂಭವಾಗುತ್ತವೆ ಎಂದರು.
ನಗರಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಮಹಾದೇವ ಆಲಕನೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.