ಬೇಡುವ ಭಕ್ತರ ಆರೋಗ್ಯದೇವ ಜಾಯವಾಡಗಿ ಶಿವಪ್ಪ ಮುತ್ಯಾ


Team Udayavani, Mar 17, 2018, 3:59 PM IST

vij-1.jpg

ಹೂವಿನಹಿಪ್ಪರಗಿ: ಪಟ್ಟಣದಿಂದ 5 ಕಿ.ಮೀ. ಅಂತರದಲ್ಲಿರುವ ಜಾಯವಾಡಗಿ ಶಿವಶರಣ ಶಿವಪ್ಪ ಮುತ್ಯಾನ ಐಕ್ಯ ತಾಣ ವಿಜಯಪುರ ಜಿಲ್ಲೆಯಲ್ಲಿಯೇ ಐಕ್ಯ ತಾಣವಾಗಿದೆ. ಸೋಮನಾಥ ಮತ್ತು ಶಿವಪ್ಪ ಮುತ್ಯಾನ ಕಟ್ಟಿಯ ಜಾತ್ರಾ ಮಹೋತ್ಸವವು ಮಾ. 17ರಿಂದ ಆರು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಜರುಗುವುದು. ಯುಗಾದಿ ಪಾಡ್ಯ ಮಾ.18 ರಂದು ರಥೋತ್ಸವ ನಡೆಯುವುದು.

ಹಿನ್ನೆಲೆ: ಜಾಯವಾಡಗಿ ಗ್ರಾಮದಲ್ಲಿ ಸುಮಾರು 157 ವರ್ಷಗಳ ಹಿಂದೆ ಇಲ್ಲಿ ಕಾಲಗರ್ಭದಲ್ಲಿ ಹೂತು ಹೋದ ಶಿವಪ್ಪ ಮುತ್ಯಾನ ಚೇತನದ ಆಗೋಚರ ದೈವಿಶಕ್ತಿ ಜಾಯವಾಡಗಿ ಗ್ರಾಮದಲ್ಲಿ ಮತ್ತೆ ಚೇತನಗೊಂಡು ಭಾವಿಕರ ಆಶೋತ್ತರಗಳನ್ನು ನೀಗಿಸುವ ಪುಣ್ಯಕ್ಷೇತ್ರವಾಗಿದೆ.
 
ಶಿವಪ್ಪ ಮುತ್ಯಾನ ಐಕ್ಯತಾಣದಲ್ಲಿ ಯಾವದೋ ಆಗೋಚರ ದೈವಿಶಕ್ತಿ ಇರಬೇಕು. ಈಗ ಗುರು ಶಿಷ್ಯರು ಲಿಂಗೈಕ್ಯರಾಗಿದ್ದು,
ಇವರ ಭಕ್ತರು ಇಬ್ಬರಿಗೂ ತಲಾ ಒಂದು ದೇವಾಲಯಗಳನ್ನು ನಿರ್ಮಿಸಿ ಸ್ಮರಣೆ ಮಾಡುತ್ತಿದ್ದಾರೆ. ಯಾಕೆಂದರೆ ಲಕ್ಷಗಟ್ಟಲೇ ಜನ, ಜಾನುವಾರುಗಳು ಪ್ರತಿ ಅಮಾವ್ಯಾಸೆಗೊಮ್ಮೆ ಬಂದು ತಮಗಾದ ನೋವಿನ ತೊಂದರೆಯನ್ನು ಶಿವಪ್ಪ ಮುತ್ಯಾನ ಕಟ್ಟೆಗೆ ಸುತ್ತು ಹಾಕಿ ನಿವಾರಣೆ ಹೊಂದುವ ವೈಚಿತ್ರಯಮಯವಾದ ಭಕ್ತಿ ಭಾವನೆ ಕಾಣಬಹುದು. ಈ ಒಂದು ಜನ, ಜಾನುವಾರುಗಳು ತೊಂದರೆ ನೀಗಬೇಕಾದರೆ ಸಾಮಾನ್ಯ ಮಾತಲ್ಲ. ಹೀಗಾಗಿ ಜಾಗೃತೆಯ ತಾಣವಾಗಿ ಜನ, ಜಾನುವಾರು ಸಂಕಷ್ಟಗಳನ್ನು ನಿವಾರಣೆಗೊಳಿಸುವ ಪುಣ್ಯ ತಾಣವಾಗಿದೆ. 

ಮುತ್ಯಾನ ತಪೋಬಲದಿಂದ ಅವನ ಅಂತರವಾಣಿ, ಅಂತರಜ್ಞಾನ ಅಥವಾ ಅಂತರಸ್ಪೂರ್ತಿ ಜನ-ಮನ ಆಕರ್ಷಿಸಿ ಅವರಿಗಾದ ತೊಂದರೆ ಮತ್ತು ಯಾತನೆಯ ನೀಗುವ ದೈವಿಶಕ್ತಿ.

ಶಿವಪ್ಪ ಮುತ್ಯಾ ಪಡೆದುಕೊಂಡಿದ್ದರಿಂದಲೇ ಜನ ಶರಣರಲ್ಲಿ ವಿಶ್ವಾಸವಿಟ್ಟು ಭಕ್ತಿ, ಭಾವದಿಂದ ಬೇಡಿಕೊಂಡು ಗ್ರಾಮದ ಸುತ್ತಮುತ್ತಲಿನ ರೈತರ ದನಕರುಗಳಿಗೆ ಯಾವುದಾದರೂ ರೋಗ ಬಂದರೆ ರೈತರು ಅವುಗಳನ್ನು ಮುತ್ಯಾನ ದೇವಾಲಯಕ್ಕೆ ತಂದು ತುಪ್ಪ ಎರೆದು ಹೋಗುತ್ತಾರೆ. ಇದರಿಂದ ಪ್ರಾಣಿಗಳಿಗೆ ಬಂದ ರೋಗವು ಶೀಘ್ರ ವಾಸಿಯಾಗುತ್ತದೆ. ಇದು ಇಲ್ಲಿನ ವೈಶಿಷ್ಟಕ್ಕೆ ಉದಾಹರಣೆ.

ಇದಕ್ಕಾಗಿ ಕ್ಷೇತ್ರಕ್ಕೆ ದೂರದ ಊರುಗಳಿಂದ ಭಕ್ತರು ದಂಡು ದಂಡಾಗಿ ಬಂದು ಹುಣ್ಣು ಗಡ್ಡೆ, ಗರಸುಗಳ ಯಾತನೆಯಿಂದ ನಿವಾರಣೆ ಹೊಂದುತ್ತಾರೆ. ಆ ಒಂದು ದೈವಿಶಕ್ತಿ ಸಹಜ ಪಡೆದಿದ್ದನೆಂಬುವುದಕ್ಕೆ ಅಲ್ಲಿ ನೆರೆಯುವ ಜನಸ್ತೋಮವೇ ಸಾಕ್ಷಿಯಾಯಾಗಿದೆ. 

ಭಾವೈಕ್ಯ ಪ್ರತೀಕ: ಗುರು ಶಿಷ್ಯರ ಸಮ್ಮಿಲನವಾದ ಸುಕ್ಷೇತ್ರ ಜಾಯವಾಡಗಿ ಸಮಾನತೆ ಹಾಗೂ ಭಾವೈಕ್ಯತೆ ಪ್ರತೀಕವಾಗಿದೆ. ಈ ದೇವಾಲಯಗಳು ಕೇವಲ ಹಿಂದೂಗಳಿಗೆ ಸೀಮಿತವಾಗಿಲ್ಲ. 

ಮುಸ್ಲಿಮರೂ ಭೇಟಿ ನೀಡಿ ದೇವಾಲಯಕ್ಕೆ ತುಪ್ಪ ನೀಡುತ್ತಾರೆ. ತಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯ ಕಾಡುತ್ತಿದ್ದರೆ (ದೇಹದಲ್ಲಿ ಗಡ್ಡೆ, ಕಿವಿ ಸೋರುವಿಕೆ ಸೇರಿದಂತೆ ಇನ್ನೀತರ ಅನಾರೋಗ್ಯ) ದೇವಾಲಯದಲ್ಲಿ ಸಿಗುವ ತುಪ್ಪವನ್ನು ತೆಗೆದುಕೊಂಡು ಹೋಗಿ ಗಾಯದ ಮೇಲೆ ಲೇಪನ ಮಾಡುತ್ತಾರೆ. ನಿಷ್ಠೆಯಿಂದ ಗುರು ಶಿಷ್ಯರಿಗೆ ಹರಕೆ ಇಡುತ್ತಾರೆ. ಇದರಿಂದ ತಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ ಎಂಬ ಪ್ರತೀತಿಯಿದೆ.
 
ಜಾತ್ರೆಯಲ್ಲಿ ಏನೇನು: ರಾಜ್ಯದ ಹಾಗೂ ಹೊರ ರಾಜ್ಯದಿಂದ ಲಕ್ಷಗಟ್ಟಲೇ ಭಕ್ತರು ಜಾತ್ರೆಗೆ ಆಗಮಿಸುವರು. ಜಾತ್ರಾ ನಿಮಿತ್ತ ನಾಟಕ, ಕೃಷ್ಣ ಪಾರಿಜಾತ, ಜಾನುವಾರುಗಳ ಪ್ರದರ್ಶನ. ಯುಗಾದಿ ದಿನದಂದು ರಥೋತ್ಸವ, ದನಗಳ ಜಾತ್ರೆ, ಭಾರವಾದು ಗುಂಡು , ಸಂಗ್ರಾಣಿ ಕಲ್ಲು, ಭಾರವಾದ ಚೀಲ ಎತ್ತುವ ಶಕ್ತಿ ಪ್ರದರ್ಶನ, ಜಂಗೀ ಕುಸ್ತಿಗಳು ಸೇರಿದಂತೆ ಭಕ್ತಿ ಭಾವದ ಸಲೀಲ ಸಂಗಮವಾಗಿ ಹಲವಾರು ರಚನ್ಮಾತಕ ಕಾರ್ಯಕ್ರಮ ಈ ತಾಣದಲ್ಲಿ ನಡೆಯುತ್ತವೆ. ಇಂದು ಈ ಭಕ್ತಿ ಭಾವನಳಿಸುವ ಈ ವಿಜ್ಞಾನ ಯುಗದಲ್ಲಿ ಭಕ್ತಿ ಭಾಗದ ಕೃಷಿ ತಾಣದಲ್ಲಿ ನಡೆಯಬೇಕಾದರೆ ಶಿವಪ್ಪ ಮುತ್ಯಾನ ಆತ್ಮ ಒಲುಮೆಯ ವೈಚಿತ್ರಮಯವಾದ ದೈವಿಶಕ್ತಿಯಾಗಿದೆ. 

ಗುರುರಾಜ ಕನ್ನೂರ

ಟಾಪ್ ನ್ಯೂಸ್

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.