ಡೋಣಿ ನದಿ ಹೂಳು ತೆರವಿಗೆ ಕ್ರಮ: ನಡಹಳ್ಳಿ
Team Udayavani, Nov 13, 2020, 9:10 PM IST
ತಾಳಿಕೋಟೆ: ಡೋಣಿ ನದಿಯಲ್ಲಿ ತುಂಬಿಕೊಳ್ಳುತ್ತಾಬಂದಿರುವ ಹೂಳು ಮತ್ತು ಮುಳ್ಳುಕಂಠಿಗಳನ್ನು ತೆರವುಗೊಳಿಸಿ ಪ್ರವಾಹದಿಂದ ರೈತರಿಗಾಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿ ಯಲ್ಲಿ ಬೆಳೆದಿರುವ ಮುಳ್ಳುಕಂಠಿ ಹಾಗೂ ಹೂಳನ್ನು ಪರಿಶೀಲಿಸಿದ ಅವರು, ತಾಳಿಕೋಟೆ ವ್ಯಾಪ್ತಿಯಲ್ಲಿ ಡೋಣಿ ನದಿ ಪ್ರವಾಹ ಬಂದಾಗಲೆಲ್ಲಾ ಬೊಮ್ಮನಹಳ್ಳಿಗ್ರಾಮದಿಂದ ಬೋಳವಾಡ, ತಾಳಿಕೋಟೆ, ಹರನಾಳ ಗ್ರಾಮದವರೆಗೆ ಸುಮಾರು 500ರಿಂದ 600 ಎಕರೆ ರೈತರ ಜಮೀನುಗಳು ಹಾಳಾಗುತ್ತಾ ಸಾಗಿವೆ. ಇದಕ್ಕೊಂದುಪರಿಹಾರ ಕಂಡುಕೊಳ್ಳಬೇಕೆಂದು ನಾನು ಮತ್ತು ಕೆಬಿಜೆಎನ್ ಎಲ್ ಟೆಕ್ನಿಕಲ್ ಸ್ಪೇಷಾಲಿಸ್ಟ್ ತಾಳಿಕೋಟೆಯ ಸುಧೀರ ಸಜ್ಜನಅವರಿಗೆ ಹೇಳಿದ್ದೇನೆ. ಅವರು ಈ ಪ್ರವಾಹ ಹಾನಿ ತಪ್ಪಿಸಲು ಏನು ಮಾಡಲಿಕ್ಕೆ ಅವಕಾಶಗಳಿವೆ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಪರಂ ಶಿವಯ್ಯ ವರದಿಯಲ್ಲಿ ಒಂದು ರಿಪೋರ್ಟ್ ಕೂಡಾ ಈಗಾಗಲೇ ಆಗಿದೆ. ಈ ಮುಳ್ಳುಕಂಠಿ ಮತ್ತು ಹೂಳು ತೆಗೆಸಬೇಕು. ಡೋಣಿ ಹತ್ತಿರ ಹಳೆಯ ಬ್ರಿಜ್ ಇದೆ. ಅದನ್ನು ತೆರವುಗೊಳಿಸಿದರೆ ರೈತರ ಹೊಲಗಳಿಗೆ ಪ್ರವಾಹ ನುಗ್ಗುವುದನ್ನು ತಡೆಯಬಹುದೆಂಬ ಸಲಹೆ ಕೊಟ್ಟಿದ್ದೇನೆ. ಅದರ ಪ್ರಕಾರ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತರಲಾಗುವುದು. ಈ ಕುರಿತು ಸರ್ಕಾರದಿಂದ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವಂತಹ ಕೆಲಸ ಮಾಡುತ್ತೇನೆಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ರಾಜುಗೌಡ ಗುಂಡಕನಾಳ, ತಾಪಂ ಅಧ್ಯಕ್ಷ ರಾಜುಗೌಡ ಕೊಳೂರ, ಎಂ.ಎಂ. ಪಾಟೀಲ, ಈಶ್ವರ ಹೂಗಾರ, ಮುದಕಣ್ಣ ಬಡಿಗೇರ, ತಾಲೂಕು ತಹಶೀಲ್ದಾರ್ ಅನಿಲಕುಮಾರ ಢವಳಗಿ, ಪಿಎಸ್‌ಐ ಜಿ.ಜಿ. ಬಿರಾದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.