ರಸ್ತೆ ಅತಿಕ್ರಮಣ ತೆರವಿಗೆ ಅಡ್ಡಿ -ವಾಗ್ವಾದ
Team Udayavani, Jun 10, 2022, 3:41 PM IST
ಮುದ್ದೇಬಿಹಾಳ: ಪಟ್ಟಣದ ಎಂಜಿಎಂಕೆ ಶಾಲೆ ಮುಂಭಾಗದ ಬಿದರಕುಂದಿ-ತಾರನಾಳ ಸಂಪರ್ಕ ರಸ್ತೆ ಅತಿಕ್ರಮಣ ತೆರವಿಗೆ ಮುಂದಾದ ಪುರಸಭೆ ಸಿಬ್ಬಂದಿ ಜೊತೆ ಅತಿಕ್ರಮಣದಾರರು ಗುರುವಾರ ವಾಗ್ವಾದ ನಡೆಸಿದರು.
ರಸ್ತೆಯ ಎರಡೂ ಬದಿ ಹೋಟೆಲ್, ಖಾನಾವಳಿ ಮುಂತಾದ ಅಂಗಡಿ ಹಾಕಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದನ್ನು ಮತ್ತು ಈ ರಸ್ತೆಯಲ್ಲಿ ಕುಡಿವ ನೀರಿನ ಪೈಪ್‌ಲೈನ್ ಅಳವಡಿಸಬೇಕಿರುವುದರಿಂದ ಅತಿಕ್ರಮಣ ತೆರವಿಗೆ ಪುರಸಭೆ ಅಧಿಕಾರಿ ವರ್ಗ ಮುಂದಾಗಿತ್ತು. ಆದರೆ 103 ಮತ್ತು 104 ಸಂಖ್ಯೆಯ ಆಸ್ತಿಗಳ ಮಾಲೀಕರು ತಕರಾರು ತೆಗೆದು ರಸ್ತೆ ಜಾಗ ಕುರಿತು ಮೊದಲಿನಿಂದಲೂ ಗೊಂದಲ ಇದೆ. ಆ ಗೊಂದಲ ಬಗೆಹರಿಯುವವರೆಗೂ ಅತಿಕ್ರಮಣ ತೆರವು ಅಥವಾ ಇತರೆ ಕಾಮಗಾರಿ ನಡೆಸದಂತೆ ಒತ್ತಾಯಿಸಿದರು.
ಆದರೆ ಶಾಲೆ ಮುಂದೆ ಮೊದಲಿನಿಂದಲೂ ರಸ್ತೆ ಇದೆ, ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳನ್ನು ಬೇರೆಯವರು ಖರೀದಿಸಿದ್ದರಿಂದ ರಸ್ತೆ ಬಿಡುವ ಮತ್ತು ಕಟ್ಟಡ ನಿರ್ಮಿಸುವ ಕುರಿತು ತಕರಾರು ಇದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡ ಪುರಸಭೆ ಅಧಿಕಾರಿ ವರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ಕೈ ಬಿಟ್ಟು ಪೈಪ್‌ಲೈನ್ ಕಾಮಗಾರಿ ಬದಲಾಯಿಸಿ ರಸ್ತೆ ಮಧ್ಯೆ ಅಗೆದು ಪೈಪ್‌ಲೈನ್ ಅಳವಡಿಸಲು ಕ್ರಮ ಕೈಗೊಂಡರು.
ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ, ಪುರಸಭೆ ಸಿಬ್ಬಂದಿ ಮತ್ತು ನಿವಾಸಿಗಳಾದ ಮುಖೇಶ ಓಸ್ವಾಲ್, ಜಗದೀಶ ಕಂಚ್ಯಾಣಿ, ವಿನಾಯಕ ಝಿಂಗಾಡೆ, ಗಂಗನಗೌಡರ, ಗೋಪಿ ಮಡಿವಾಳರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.