ವಿವಿಧೆಡೆ ಆಹಾರ ಧಾನ್ಯ ಕಿಟ್ ವಿತರಣೆ
Team Udayavani, Jun 6, 2021, 8:30 PM IST
ಮುದ್ದೇಬಿಹಾಳ: ಸಾಕಷ್ಟು ಜನರಲ್ಲಿ ಹಣವಿದ್ದರೂ ಸೇವೆ ಮಾಡುವ ಮನೋಭಾವ ಇರುವುದು ಕೆಲವರಲ್ಲಿ ಮಾತ್ರ. ಸ್ವಲ್ಪ ಸಹಾಯ ಮಾಡಿ ಹೆಚ್ಚು ಪ್ರಚಾರ ಪಡೆಯುವವರೇ ಎಲ್ಲೆಡೆ ಕಂಡು ಬರುತ್ತಿದ್ದಾರೆ. ಇಂಥವರ ನಡುವೆ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಜೋಡಿ ಮಾದರಿ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ. ಕುಂಬಾರ ವಕೀಲರು ಹೇಳಿದರು.
ಅಡವಿಸೋಮನಾಳ ಪಿಎಚ್ ಸಿಯಲ್ಲಿ ಶನಿವಾರ ದೇಸಾಯಿ, ಪಾಟೀಲ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರಿಗೆ ದಿನಬಳಕೆ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಭುಗೌಡ ದೇಸಾಯಿ ಮಾತನಾಡಿ, 4-5 ದಿನಗಳಿಂದ ತಾಳಿಕೋಟೆ, ತಮದಡ್ಡಿ, ಕೊಣ್ಣೂರು ಪಿಎಚ್ ಸಿಗಳಲ್ಲಿ ಕಿಟ್ ನೀಡಿದ್ದು ಮುಂದಿನ ದಿನಗಳಲ್ಲಿ ನಾಲತವಾಡ ಸಿಎಚ್‌ಸಿ, ತಂಗಡಗಿ, ಕಾಳಗಿ, ಢವಳಗಿ ಪಿಎಚ್‌ಸಿ, ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಕಿಟ್ ವಿತರಿಸಲಾಗುತ್ತದೆ.
ಅಂದಾಜು 800 ಕಿಟ್ ಸಿದ್ಧಪಡಿಸಿದ್ದು ಅಗತ್ಯ ಬಿದ್ದರೆ ಹೆಚ್ಚಿಸುವುದಾಗಿ ಹೇಳಿದರು. ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕೊರೊನಾ ವಾರಿಯರ್ ಗಳ ಸೇವೆ ಅನನ್ಯವಾದದ್ದು. ಎಷ್ಟು ಜನ್ಮ ಎತ್ತಿದರೂ ಇವರ ಋಣ ತೀರಿಸುವುದು ಸಾಧ್ಯವಿಲ್ಲ ಎಂದರು. ಪಿಎಚ್‌ಸಿ ವೈದ್ಯಾ ಧಿಕಾರಿ ಡಾ| ಸಿ.ಎಚ್. ನಾಗರಬೆಟ್ಟ ಮಾತನಾಡಿದರು.
ಬಿಜೆಪಿ ಧುರೀಣರಾದ ವಿಕ್ರಮ್ ಓಸ್ವಾಲ್, ದೇವೇಂದ್ರ ವಾಲೀಕಾರ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಬಿ.ಬಿ. ಭೋವಿ, ನಿಂಗಣ್ಣ ರಾಮೋಡಗಿ, ಬಿಎಂಟಿಸಿ ನಿರ್ದೇಶಕ ಶ್ರೀಧರ ಕಲ್ಲೂರ, ಢವಳಗಿ ಗ್ರಾಪಂ ಸದಸ್ಯ ಸುರೇಶ ಪಾಟೀಲ, ಅಡವಿಸೋಮನಾಳ ಗ್ರಾಪಂನ ಕೆಲ ಸದಸ್ಯರು, ಪಿಡಿಒ ಎಸ್. ಕೆ. ಹಡಪದ ಇದ್ದರು. ಸಿದ್ದು ಹೆಬ್ಟಾಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.