ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ
Team Udayavani, May 27, 2020, 7:02 AM IST
ಹೂವಿನಹಿಪ್ಪರಗಿ: ಎರಡು ತಿಂಗಳಿನಿಂದ ಕೋವಿಡ್ ವಿರುದ್ಧ ತಮ್ಮ ಜೀವನದ ಹಂಗು ತೊರೆದು ಮನೆ ಮಠ ಬಿಟ್ಟು ಹಗಲು ರಾತ್ರಿ ಎನ್ನದೆ ಹೊರಾಡುತ್ತಿರುವ ಕೋವಿಡ್ ಸೈನಿಕರಿಗೆ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಹಾರ ಕಿಟ್ ವಿತರಿಸಿದರು.
ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಮತ್ತು ಬೂದಿಹಾಳ ಗ್ರಾಮದಲ್ಲಿ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಬದುಕು ನಡೆಸಲು ಮಕ್ಕಳನ್ನು ಲೆಕ್ಕಿಸದೆ ಪರ ರಾಜ್ಯಕ್ಕೆ ಸಂಸಾರದ ಬಂಡಿ ಕಟ್ಟಿಕೊಂಡು ಹೋಗಿ ಬಂದವರಿಗೆ ಈಗ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಸರಕಾರ ಅದಕ್ಕೆ ತಕ್ಕ ಸಿದ್ಧತೆ ಮಾಡಿ ಅವರ ಆಹಾರ ಜತೆಗೆ ಆರೋಗ್ಯ ಸಹ ಕಾಪಾಡುತ್ತಿದೆ ಎಂದರು.
ರೇಷನ ಕಾರ್ಡ್ ಇಲ್ಲ ಎಂದರೆ ಅಂತವರು ನಮ್ಮ ಗ್ರಾಮ ಲೆಕ್ಕಾ ಧಿಕಾರಿಗಳ ಬಳಿ ತಮ್ಮ ಅಗತ್ಯ ದಾಖಲಾತಿಯೊಂದಿಗೆ ಸಂರ್ಪಕಿಸಲು ತಿಳಿಸಿದ ಅವರು, ನಾವು ಅದಕ್ಕೆ ಸರಕಾರದ ಮಟ್ಟದಲ್ಲಿ ಈಗಾಗಲೇ ಪಡಿತರ ನೀಡಬೇಕು ಎಂದು ಚರ್ಚಿಸಲಾಗಿದೆ ಎಂದರು.
ಮೇ 31ರ ಬಳಿಕ ಲಾಕ್‌ಡೌನ್ ಇನಷ್ಟು ಸಡಿಲಗೊಳಿಸಿ ಎಲ್ಲ ಕೆಲಸ ಕಾರ್ಯಗಳನ್ನು ನಡೆಯುವಂತೆ ಮುಖ್ಯಮಂತ್ರಿಗಳು ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಆರೋಗ್ಯವಂತರಾಗಿ ಜೀವನ ನಡೆಸೋಣ ಎಂದರು.
ಹುಣಿಶ್ಯಾಳ, ಪಿ.ಬಿ. ಕುದರಿ ಸಾಲವಾಡಗಿ, ಕಾಮನಕೇರಿ, ದಿಂಡವಾರ, ಸಾತಿಹಾಳ, ಬೈರವಾಡಗಿ, ಯಾಳವಾರ, ವಡವಡಗಿ ಗ್ರಾಮಗಳಲ್ಲಿ ದಿನಸಿ ಕಿಟ್ ವಿತರಿಸಲಾಯಿತು. ಬಿಜೆಪಿ ಮಂಡಲ ಕಾರ್ಯದರ್ಶಿ ರಮೇಶ ಮಸಬಿನಾಳ, ಭೀಮನಗೌಡ ಸಿದರೆಡ್ಡಿ, ಸುರೇಶಗೌಡ ಪಾಟೀಲ ಸಾಸನೂರ, ಸಾಹೇಬಗೌಡ ಪಾಟೀಲ ಸಾಸನೂರ, ಜಿಪಂ ಸದಸ್ಯರಾದ ಕಲ್ಲಪ್ಪ ಮಟ್ಟಿ, ಬಸವರಾಜ ಅಸ್ಕಿ, ಓತಗೇರಿ, ಬಿಇಒ ಬಸವರಾಜ ತಳವಾರ, ತಾಪಂ ಇಒ ಭಾರತಿ ಚಲುವಯ್ಯ, ಪಿಎಸ್‌ಐ ಚಂದ್ರಶೇಖರ ಹೆರಕಲ್ಲ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.