ಅನ್ನದಾತರ ಭಾವನೆಗೆ ತಕ್ಕಂತೆ ಕೆಲಸ ಮಾಡುವೆ: ನಡಹಳ್ಳಿ
Team Udayavani, Mar 2, 2022, 5:52 PM IST
ತಾಳಿಕೋಟೆ: ನಾನು ಶಾಸಕನಾಗಿದ್ದರೂ ಕೂಡಾ ಸಣ್ಣ ರೈತ ಕುಟುಂಬದಲ್ಲಿ ಹುಟ್ಟಿ ಬಂದವನಾಗಿದ್ದೇನೆ. ರೈತರ ಕಷ್ಟ ಅರಿತುಕೊಂಡವನಾಗಿದ್ದೇನೆ. ನಾನು ಯಾವತ್ತಿದ್ದರೂ ರೈತರ ಭಾವನೆಗೆ ತಕ್ಕಂತೆ ಕೆಲಸ ಮಾಡುತ್ತೇನೆಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಮಂಗಳವಾರ 30 ಲಕ್ಷ ರೂ. ವೆಚ್ಚದ ತಾಳಿಕೋಟೆ ಮುಖ್ಯ ರಸ್ತೆಯಿಂದ ಸಿಡ್ಲಭಾವಿ ರಸ್ತೆ ನಿರ್ಮಾಣ, ಪಟ್ಟಣದ ಹಳೆಯ ಜಾಕ್ವೇಲ್ ಕೊಡಗಾನೂರ ಕೂಡುವ ರಸ್ತೆ ನಿರ್ಮಾಣ, 30 ಲಕ್ಷ ರೂ. ವೆಚ್ಚದ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರೈತರೆಲ್ಲರೂ ಒಗ್ಗಟ್ಟಾಗಿ ನಿಂತು ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿಸಿಕೊಳ್ಳಿ. ಎಷ್ಟೇ ಮಳೆ ಬಂದರೂ ರೈತರುಗಳಿಗೆ ಜಮೀನುಗಳಿಗೆ ಹೋಗಲು ತೊಂದರೆ ಆಗಬಾರದು. ಈ ದೃಷ್ಟಿಯಿಂದ ಉತ್ತಮ ಕೆಲಸ ಮಾಡಿಸಿಕೊಡುತ್ತೇನೆ. ಈ ರಸ್ತೆಗಳ ಕೊನೆಯ ಜಮೀನಿನವರೆಗೂ ರಸ್ತೆ ನಿರ್ಮಾಣವಾಗಲಿದೆ. ಹಾಗೇನಾದರೂ ಕಡಿಮೆ ಬಿದ್ದರೆ ಇನ್ನಷ್ಟು ದುಡ್ಡು ಸರ್ಕಾರದಿಂದ ಬಿಡುಗಡೆಗೊಳಿಸಿ ಕೆಲಸ ಸಂಪೂರ್ಣ ಮಾಡಿಸುತ್ತೇನೆ ಎಂದರು.
ಸಾಧ್ಯವಾದರೆ ಇದೇ ವರ್ಷದ ಬಜೆಟ್‌ನಲ್ಲಿ ಡಾಂಬರೀಕರಣ ಸಹ ಮಾಡಿಸಿ ರೈತರಿಗೆ ಮುಕ್ತವಾಗಿ ಸಂಚರಿಸಲು ಅನುಕೂಲ ಮಾಡಿಕೊಡಲಾಗುವದೆಂದ ಅವರು, ರಸ್ತೆ ನಿರ್ಮಾಣದ ಸಮಯದಲ್ಲಿ ಗುತ್ತಿಗೆದಾರರಿಗೆ ತಾವೆಲ್ಲ ಸಹಕಾರ ನೀಡಬೇಕು. ಈ ರಸ್ತೆ ಜೊತೆಗೆ ಹಳೆಯ ಮಿಣಜಗಿ ರಸ್ತೆಯ ಸುಧಾರಣೆ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಮುಖಂಡರಾದ ವಾಸುದೇವ ಹೆಬಸೂರ, ಅಣ್ಣಾಜಿ ಜಗತಾಪ, ಮಾನಸಿಂಗ್ ಕೊಕಟನೂರ, ಪರಶುರಾಮ ಕಟ್ಟಿಮನಿ, ಮೈಹಿಬೂಬ ಲಾಹೋರಿ, ಸೋಮನಗೌಡ ಕವಡಿಮಟ್ಟಿ, ನಿಂಗಪ್ಪ ಬಪ್ಪರಗಿ, ಕಾಶಿರಾಯ ಮೋಹಿತೆ, ಶಿವಶಂಕರ ಹಿರೇಮಠ, ಈಶ್ವರ ಹೂಗಾರ, ಸನಾ ಕೆಂಭಾವಿ, ಮಲ್ಲು ಮೇಟಿ, ನಿಂಗು ಕುಂಟೋಜಿ, ಕಾಶೀನಾಥ ಮುರಾಳ, ಗಂಗು ಕೊಕಟನೂರ, ಬಿಜ್ಜು ನೀರಲಗಿ, ನಿರಂಜನಾ ಮಕಾಂದಾರ, ಶರಣಗೌಡ ಗೊಟಗುಣಕಿ, ಪ್ರಕಾಶ ಸಾಸಬಾಳ, ಬಸು ಹೊಟ್ಟಿ, ಮುತ್ತುಗೌಡ ಪಾಟೀಲ, ರಾಜೇಸಾಬ ಒಚಿಟಿ, ಹುಸೇನ್ ಮಕಾಂದಾರ, ಕಾಶಿಮ ಅಭಾಲೆ, ಸುಭಾಷ್ ಹಜೇರಿ, ಶಿವು ಅಸ್ಕಿ, ಮಂಜೂರ ಬೇಪಾರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ವಿಜಯಕುಮಾರ ರಾಠೊಡ, ಪ್ರವೀಣ ಬಿರಾದಾರ, ವಿಜಯಕುಮಾರ ನಾಯಕ ಇದ್ದರು.
ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ಪಟ್ಟಣದ ವಿಠuಲ ಮಂದಿರದ ಮುಂದುಗಡೆ ನೂರಾರು ರೈತರು ಸಂತಸದೊಂದಿಗೆ ಹರ್ಷೋದ್ಘಾರ ವ್ಯಕ್ತಪಡಿಸಿ ಸ್ವಾಗತಿಸಿದರಲ್ಲದೇ ಜಯಘೋಷಗಳೊಂದಿಗೆ ಅಲ್ಲಿಂದ ಸುಮಾರು 4 ಕಿ.ಮೀ.ವರೆಗೆ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ಮಾಡಿದರು.
ಮಳೆ ಬಂದಾಗ ರೈತರು ಜಮೀನುಗಳಿಗೆ ಹೋಗಬೇಕೆಂದರೆ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಸ್ಥಿತಿ ಇತ್ತು. ಸುಮಾರು 30 ವರ್ಷಗಳಿಂದಲೂ ಯಾವ ರಾಜಕಾರಣಿಗಳಿಂದಲೂ ಮಾಡಲು ಸಾಧ್ಯವಾಗದಂತಹ ಸದಾ ರೈತ ಪರ ಹೋರಾಟಗಳನ್ನು ಮಾಡುತ್ತ ಬಂದಿರುವ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ರೈತರ ಸಂಕಷ್ಟ ಸ್ಪಂದಿಸಿದ್ದಾರೆ. ನಾವೇಲ್ಲರೂ ಜಾತಿ ಮತ ಪಂಥಗಳನ್ನು ಬಿಟ್ಟು ಶಾಸಕರ ಬೆನ್ನೆಲುಬಾಗಿ ನಿಲ್ಲುತ್ತೇವೆ. -ಮಹ್ಮದಲಿ ಬಡಗಣ, ರೈತ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.