ರಕ್ತದಾನ ಮಾಡಿ ಮತ್ತೂಂದು ಜೀವ ಉಳಿಸಲು ನೆರವಾಗಿ
Team Udayavani, Sep 16, 2018, 2:25 PM IST
ವಿಜಯಪುರ: ವಿಶ್ವವಿಖ್ಯಾತ ಇಂಜಿನೀಯರ್ ಸರ್ ಎಂ. ವಿಶ್ವೇಶ್ವರಯ್ಯನ ಅವರ ಜಯಂತೋತ್ಸವ ಪ್ರಯುಕ್ತ
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ ಇಂಜಿನಿಯರ್ ದಿನಾಚರಣೆ ಸ್ಮರಣಗಾಗಿ ಲಯನ್ಸ್
ಕ್ಲಬ್ ಸಹಯೋಗದಲ್ಲಿ ರಕ್ತದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಸಕ್ರಿ ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದೆ. ದೇಶದಲ್ಲಿ 2 ಸೆಕೆಂಡ್‌ಗೆ ರಕ್ತದ ಅವಶ್ಯಕತೆ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಉತ್ತಮ ಹಾಗೂ ಸಮಾಜಕ್ಕೆ ಒಂದು ಸೇವೆ ನೀಡಿದಂತಾಗುತ್ತದೆ ಎಂದರು.
ಸರ್.ಎಂ. ವಿಶ್ವೇಶ್ವರಯ್ಯ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದ ಮೇಧಾವಿ, ಇಂಜನಿಯರ್. ಭಾರತದ ವಿವಿಧ ಕಡೆಗಳಲ್ಲಿ ವಿವಿಧ ಭಾಗಗಳಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅನನ್ಯ. ಅಭಿಯಂತರಾಗಿ, ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆ ಸ್ಮರಣಾರ್ಹ, ಪ್ರತಿಯೊಬ್ಬರು ಅವರಲ್ಲಿದ್ದ ಕರ್ತವ್ಯ ನಿಷ್ಠೆ, ದೇಶಾಭಿಮಾನದ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಎ.ಎಸ್. ಜಾಲಗೇರಿ, ಡಾ| ಎ.ಎಸ್. ತಮಗೊಂಡ, ಡಾ| ವಿವೇಕಾನಂದ ಚಿನಿವಾಲ, ಪ್ರಾದೇಶಿಕ ವಿಭಾಗದ ಅಧ್ಯಕ್ಷೆ ಅನುಜಾ ತಾಳಿಕೋಟೆ, ಎನ್.ಬಿ. ಬಿರಾದಾರ, ಫಯಾಜ ಅಲಿ, ಸುಧೀರ ಟಂಕಸಾಲಿ, ಅಶೋಕ ರುಣವಾಲ, ಎಸ್.ಎಸ್.ಹಿರೇಮಠ, ಎಸ್.ಸಿ.ತೇಲಿ, ಎನ್.ಡಿ.ಉಸ್ತಾದ, ಎಂ.ಎಸ್.ಅಂಗಡಿಮಠ, ಆರ್.ಜಿ.ನಾಲಾ, ಪಿ.ಜಿ.ಕಾರಜೋಳ, ಮಹೇಶ ರಾಮಪೂರ, ಎ.ಆರ್.ಜಮಖಂಡಿ, ತಾಳಿಕೋಟೆ ದಂಪತಿ, ಫಯಾಜ
ಕುಡಚಿ, ಅಶ್ರಫ್ ಕುಡಚಿ, ಆನಂದ ಪಟ್ಟೇದ, ಮಹೇಶ ಅಂಗಡಿ, ಎಸ್. ಎಚ್.ಜಾಂಬೋರೆ, ಮುಸ್ತಾಕ ಅಖ್ತರ, ಮುಕುಂದ ಕುಲಕರ್ಣಿ, ಎ.ಎಸ್. ಮಠ, ಎಸ್.ಬಿ. ಜಾಗೀರದಾರ ಇತರರು ಇದ್ದರು.
ಶಾಂತಿ ನಿಕೇತನ ಶಿಕ್ಷಣ ಸಂಸ್ಥೆ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರ್ ದಿನ ಆಚರಿಸಲಾಯಿತು.
ಸರ್. ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ನಂತರ ಸರ್. ಎಂ.ವಿಶ್ವೇಶ್ವರಯ್ಯ ದೇಶಕ್ಕೆ ಹಲವು ರಂಗಗಳ ಮೂಲಕ ನೀಡರುವ ಕೊಡುಗೆಗಳ ಅನನ್ಯ ಎಂದರು. ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಶಾಂತ ಸಂಖ, ಮಧುಕುಮಾರ ಸಾವಳಗಿ, ಸಾಕ್ಷಿ ಗಲಗಲಿ, ಸ್ನೇಹಾ ಪಾಟೀಲ ಇವರು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.
ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ, ಪ್ರವೀಣಕುಮಾರ ಗೆಣ್ಣೂರ, ಎ.ಎಚ್. ಸಗರ, ಭಾರತಿ ಪಾಟೀಲ, ಎಸ್.ಆರ್. ಕಟ್ಟಿಮನಿ, ಸುಮಿತಾ ಸಕ್ಷೆನಾ, ಎಸ್.ಎ. ಹುಗ್ಗಿ, ಗಿರಿಜಾ ಕರಡಿ, ಸರೋಜಾ ಕರ್ಕಳ್ಳಿ, ಸೀಮಾ ಸದಲಗಾ, ಶೋಭಾ ಕೂಡಗಿ, ಮೊಹಸೀನಾ, ವಿವೇಕ ವೈಶಂಪಾಯನ, ದೀಪಾ ತಿಳಗೋಳ, ಮಿನಾಕ್ಷಿ ಹಿಪ್ಪರಗಿ, ಅವಟಿ.ಕೆ, ಕಡೇಮನಿ. ಆರ್, ಉಪಸ್ಥಿತರಿದ್ದರು.
ಅಭಿಯಂತರರು ದೇಶದ ಅಭಿವೃದ್ಧಿಗೆ ಶ್ರಮಿಸಲಿ
ಆಲಮಟ್ಟಿ: ಜಾಗತೀಕರಣದ ಪರಿಣಾಮವಾಗಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಅದನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ನೂತನ ತಂತ್ರಜ್ಞಾನ ಬಳಸಿ ಜನರಿಗೆ ಅತೀ ಕಡಿಮೆ ವೆಚ್ಚದಲ್ಲಿ ಬೃಹತ್ ಯೋಜನೆ ಪೂರ್ಣಗೊಳಿಸಲು ಅಭಿಯಂತರುಗಳು ಶ್ರಮಿಸಬೇಕು ಎಂದು ಮುಖ್ಯ ಅಭಿಯಂತರ ಎಸ್.ಎಚ್. ಮಂಜಪ್ಪ ಹೇಳಿದರು.
ಶನಿವಾರ ಸ್ಥಳೀಯ ಕೃಷ್ಣಾಭಾಗ್ಯಜಲನಿಗಮದ ಮುಖ್ಯ ಅಭಿಯಂತರರ ಕಚೇರಿಯಲ್ಲಿ ನಡೆದ ಇಂಜಿನಿಯರ್ ಡೇ ಹಾಗೂ ಭಾರತರತ್ನ ಡಾ| ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿಯಂತರುಗಳೆಂದರೆ ಕೇವಲ ರಸ್ತೆ ಹಾಗೂ ಕಟ್ಟಡಗಳನ್ನು ನಿರ್ಮಿಸುವುದು ಮಾತ್ರವಲ್ಲ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಅಭಿಯಂತರರ ಅವಶ್ಯಕತೆ ಹೆಚ್ಚಾಗಿದೆ. ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ನೀರು ತಲುಪಿಸುವುದು, ನೂತನ ಮಾದರಿಯಲ್ಲಿ ರಸ್ತೆ ನಿರ್ಮಾಣ ಹೀಗೆ ಕಡಿಮೆ ವೆಚ್ಚದಲ್ಲಿ
ಅತ್ಯುಪಯುಕ್ತವಾಗುವ ಯೋಜನೆಗಳನ್ನು ಸಾಕಾರಗೊಳಿಸುವ ಹೊಣೆಗಾರಿಕೆಯೂ ಅಡಗಿದೆ ಎಂದರು. ತಾಂತ್ರಿಕ ಸಹಾಯಕ ವಿ.ಜಿ. ಕುಲಕರ್ಣಿ ಮಾತನಾಡಿ, ಜನತೆ, ರೈತರ, ಸೈನಿಕರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿವಿಲ್ ಇಂಜಿನಿಯರ್‌ಗಳ ಕಾರ್ಯ ಮಾತ್ರ ಸದಾ ಶ್ಲಾಘನೀಯ ಎಂದರು. ನೌಕರರ ಸಂಘದ ಯೋಜನಾ ಶಾಖೆ ಅಧ್ಯಕ್ಷ ಎಸ್.ಬಿ. ದಳವಾಯಿ, ಮುಳವಾಡ ಏತ ನೀರಾವರಿ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರ ಟಿ. ವೆಂಕಟೇಶ, ಎಂ.ಎನ್.ಪದ್ಮಜಾ, ಎಸ್.ಬಿ. ಬಿಜಾಪುರ , ವಿ.ಜಿ. ಕುಲಕರ್ಣಿ, ಎಸ್.ಎಸ್. ಚಲವಾದಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.