ರೈತನಿಗೆ ವರದಾನ ಹನಿ ನೀರಾವರಿ
|ತೋಟಗಾರಿಕೆ ಬೆಳೆಗಳತ್ತ ರೈತರ ಆಕರ್ಷಣೆ |ತಾಲೂಕಿನಲ್ಲಿ ಹನಿ ನೀರಾವರಿಗೆ ಹೆಚ್ಚಿದ ಬೇಡಿಕೆ
Team Udayavani, Nov 15, 2020, 4:56 PM IST
ಸಿಂದಗಿ: ತಾಲೂಕಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಿದ್ದೆ. ತೋಟಗಾರಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರುಇಲಾಖೆಯ ಸಹಾಯ ಧನದ ಸೌಲಭ್ಯ ಪಡೆದು ಹನಿ ನೀರಾವರಿ ಪದ್ಧತಿಯ ಲಾಭ ಪಡೆಯುತ್ತಿದ್ದಾರೆ.
ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನ ಫಲಾನುಭವಿ ರೈತರು2018-19ನೇ ಸಾಲಿನಲ್ಲಿ 626.1 ಹೆಕ್ಟೇರ್, 2019-2020ರಲ್ಲಿ 507.5 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಪ್ರತಿ 2 ಹೆಕ್ಟೇರ್ (5ಎಕರೆ) ತೋಟಗಾರಿಕೆ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸರ್ಕಾರ ಶೇ. 90 ಸಹಾಯ ಧನ ಹಾಗೂ2 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿಗೆ ಶೇ. 50 ಸಹಾಯ ಧನ ಸೌಲಭ್ಯ ನೀಡುತ್ತಿರುವುದು ರೈತರಿಗೆ ಅನುಕೂಲವಾಗಿದೆ.
ಈ ಬಾರಿ ಉತ್ತಮ ಮಳೆಯಾಗಿದ್ದರೂ ಕೂಡ 2020-21ನೇ ಸಾಲಿಗೆ ಹನಿ ನೀರಾವರಿ ಸೌಲಭ್ಯ ಪಡೆಯಲು ಆನ್‌ಲೈನ್ ಅರ್ಜಿ ಕರೆಯಲಾಗಿದೆ. ಇಲ್ಲಿವರೆಗೆ ಸಿಂದಗಿ ವಲಯದಿಂದ 125 ರೈತರು,ದೇವರಹಿಪ್ಪರಗಿ ವಲಯದಿಂದ 85ರೈತರು ಮತ್ತು ಆಲಮೇಲ ವಲಯದಿಂದ 65 ರೈತರು ಒಟ್ಟು ಸಿಂದಗಿ ಮತ್ತುದೇವರಹಿಪಪ್ರಗಿ ತಾಲೂಕಿನ 275 ರೈತರುಹನಿ ನೀರಾವರಿ ಪದ್ಧತಿಯ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ದೇವರಹಿಪ್ಪರಗಿ ಮತ್ತು ನೂತನವಾಗಿರಚಿಸಲಾಗಿರುವ ಆಲಮೇಲತಾಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮಗಳುಇನ್ನೂ ತೋಟಗಾರಿಕೆ ಇಲಾಖೆಯ ಸಿಂದಗಿ ಕಚೇರಿ ವ್ಯಾಪ್ತಿಯಿಂದ ಬೇರ್ಪಟ್ಟಿಲ್ಲ. ಸಿಂದಗಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯ ರೈತರು ತೋಟಗಾರಿಕೆ ಬೇಸಾಯದತ್ತ ಗಮನ ಹರಿಸಿದ್ದಾರೆ. ಹನಿ ನೀರಾವರಿ ಪದ್ಧತಿ ರೈತರಿಗೆ ನೀರಿನ ಕೊರತೆಯನ್ನು ನಿವಾರಿಸಿದೆ. ಕಡಿಮೆ ಪ್ರಮಾಣದ ನೀರಿನಲ್ಲಿ ಉತ್ತಮ ಇಳುವರಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಹಣ್ಣು ಗಿಡಗಳನ್ನು ನೆಡಲು ಸಹಾಯ ಧನದ ಸೌಲಭ್ಯ ಇದೆ. ಕಾರಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿರುವು ತೋಟಗಳನ್ನು ವಿಕ್ಷಣೆಮಾಡಿದ ತೋಟಗಾರಿಕೆ ಉಪನಿರ್ದೇಶಕ ಎಸ್.ಎಂ. ಬರಗಿಮಠ ಅವರು ಸಿಂದಗಿ ತಾಲೂಕಿನ ತೋಟಗಾರಿಕೆ ಇಲಾಖೆಯ ಕಾರ್ಯವನ್ನು ಮೇಚ್ಚುಗೆ ವ್ಯಕ್ತ ಪಡೆಸಿದ್ದಾರೆ.
ರೈತರು ತೋಟಗಾರಿಕೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನಲ್ಲಿ ರೈತರಿಗೆ ಹನಿನೀರಾವರಿ ಪದ್ಧತಿ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ತಿಳಿವಳಿಕೆ ಮೂಡಿಸಲಾಗಿದೆ. ಇದರಿಂದ ವರ್ಷ ವರ್ಷಕ್ಕೆ ರೈತರು ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. –ಅಮೋಘಿ ಹಿರೇಕುರಬರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಸಿಂದಗಿ
ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ತೋಟಗಾರಿಕೆಯ ರೈತರಿಗೆ ಪ್ರತ್ಯೇಕವಾಗಿ ವಾರ್ಷಿಕ ಗುರಿ ನಿಗದಿ ಪಡೆಸಬೇಕು. ಎರಡು ತಾಲೂಕಿಗೆ ಪ್ರತ್ಯೇಕವಾಗಿ ಸಹಾಯಧನ ಸೌಲಭ್ಯ ಮಂಜೂರು ಮಾಡಿದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ರೈತರು ಹನಿ ನೀರಾವರಿ ಪದ್ಧತಿಯ ಲಾಭ ಪಡೆಯಲು ಸಾಧ್ಯ. ಅನುದಾನದ ಕೊರತೆಯಿಂದ ಸಾಕಷ್ಟು ರೈತರ ಫೈಲ್ ಗಳು ಕಚೇರಿಯಲ್ಲಿಯೇ ಕುಳತಿವೆ. – ಪ್ರವೀಣ ಬೈರಿ, ವಿತರಕ, ನೆಟಾಫ್ರಿಮ್ ಹನಿ ನೀರಾವರಿ, ಸಿಂದಗಿ
ಮೊದಲು ನಾವು ಹೊಲದಲ್ಲಿ ಜೋಳ, ತೊಗರಿ ಬಿತ್ತುತ್ತಿದ್ದೇವು. ಈಗ ಹೊಲದಲ್ಲಿ ನೀರಾವರಿ ಮಾಡಿಕೊಂಡು ತೋಟಗಾರಿಕೆ ಅಧಿಕಾರಿಗಳು ಹೇಳಿದಂಗ ಹೊಲದಲ್ಲಿ ದ್ರಾಕ್ಷಿ, ನಿಂಬೆ ಗಿಡ ಬೆಳೆದಿದ್ದೇವೆ. ದ್ರಾಕ್ಷಿ ಮತ್ತು ನಿಂಬೆ ಗಿಡಗಳಿಗೆ ನೀರು ಕಡಿಮೆ ಬಿಳುತ್ತಿದ್ದ ಸಂದರ್ಭದಲ್ಲಿ ಡ್ರಿಪ್ ಪೈಪ್ ಮೂಲಕ ನೀರು ಬಿಡುತ್ತಿದ್ದೇವೆ. ಬೆಳೆಗಳಿಗೆ ನೀರು ಕಡಿಮೆ ಬಿಳುತ್ತಿಲ್ಲ. ದ್ರಾಕ್ಷಿ ಮತ್ತು ನಿಂಬೆಯಿಂದ ಆದಾಯ ಹೆಚ್ಚಾಗಿದೆ. –ಕಸ್ತೂರಿಬಾಯಿ ಹೂಗಾರ, ರೈತ ಮಹಿಳೆ, ಅಂತರಗಂಗಿ
ರಮೇಶ ಪೂಜಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.