ಆರೂಢರ ನೂತನ ರಥ ನಿರ್ಮಾಣಕ್ಕೆ ಚಾಲನೆ


Team Udayavani, Jan 11, 2019, 9:53 AM IST

vij-4.jpg

ಬಸವನಬಾಗೇವಾಡಿ: ತಾಲೂಕಿನ ಆರೂಢ ನಂದಿಹಾಳದ ಶ್ರೀಗುರು ಆರೂಢರ ನೂತನ ರಥದ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ರಥದ ನಿರ್ಮಾಣಕ್ಕೆ ಪೂಜೆ ಸಲ್ಲಿಸಿದ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ, ನೂತನ ರಥದ ನಿರ್ಮಾಣದ ಕುರಿತಾಗಿ ಕಳೆದ ಐದು ವರ್ಷಗಳಿಂದ ಸಂಕಲ್ಪ ಇತ್ತು. ಈ ವರ್ಷ ಅಂದರೆ ಫೆ.21ರಂದು ನಡೆಯುವ ಶ್ರೀಗುರು ಆರೂಢರ 36ನೇ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನೂತನ ರಥವು ಲೋಕಾರ್ಪಣೆಯಾಗುತ್ತಿರುವುದು ಆರೂಢ ಭಕ್ತರಲ್ಲಿ ತೀವ್ರ ಸಂತೋಷವನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಭಕ್ತರು ತನು ಮನ ಧನಗಳಿಂದ ರಥದ ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕು ಎಂದು ಹೇಳಿದರು.

ರಥದ ಶಿಲ್ಪಿಕಾರ ಪರಶುರಾಮ ಪವಾರ ಹಾಗೂ ಅವರ ಕುಟುಂಬ ವರ್ಗದವರು ಇಲ್ಲಿಯವರೆಗೆ ರಾಜ್ಯವಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ 260ಕ್ಕೂ ಅಧಿಕ ಕಬ್ಬಿಣದ ರಥಗಳನ್ನು ನಿರ್ಮಾಣ ಮಾಡಿದ ಶ್ರೇಯಸ್ಸು ಸಲ್ಲುತ್ತದೆ. ಈ ನಿಟ್ಟಿನಲ್ಲಿ ಪರಶುರಾಮ ಅವರಿಗೆ ಒಂದೂವರೆ ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿ ಆಶೀರ್ವದಿಸಿದರು.

ರಥದ ಶಿಲ್ಪಿಕಾರ ಪರಶುರಾಮ ಪವಾರ ಮಾತನಾಡಿ, ರಥದ ಎತ್ತರವು ಭೂಮಿಯಿಂದ 25 ಅಡಿ, ಮುದ್ಗಲ್‌ ಗ್ರಾನೇಟ್ ಕಲ್ಲಿನ 4 ಚಕ್ರ, ರಥಕ್ಕೆ 300 ಹಿತ್ತಾಳೆ ಗಂಟೆ, 30 ಮೂರ್ತಿಗಳು, 8 ಸಿಂಹಗಳು, 4 ನಂದಿ ಜೋಡಿಸಲಾಗುವುದು. ಭಾರತ ಹುಣ್ಣಿಮೆ ಫೆ.19ರಂದು ರಥವನ್ನು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶ್ರೀಗುರು ಆರೂಢರ ದೇವಸ್ಥಾನ ಕಮಿಟಿ ಅಧ್ಯಕ್ಷ ಎಸ್‌.ವಿ ಕನ್ನೂರ, ಕಾರ್ಯದರ್ಶಿ ಬಮ್ಮಯ್ಯ ಹಿರೇಮಠ, ಶಾಂತಯ್ಯ ಹಿರೇಮಠ, ಬಸಯ್ಯ ಹಿರೇಮಠ, ಎಂ.ಎಸ್‌. ಗೌಡರ, ಸಿದ್ಧಾರೂಢ ಕನ್ನೂರ, ಖಾಸ್ಗತ ಸಜ್ಜನ, ಮಡಿವಾಳಪ್ಪ ಹಬ್ಬಿಹಾಳ, ಕನಕಪ್ಪ ವಾಲೀಕಾರ, ನಿಂಗಪ್ಪ ಮದರಿ, ಡಾ| ಬಸವರಾಜ ಸಾಲವಾಡಗಿ, ಶಾಂತಗೌಡ ಪಾಟೀಲ, ಚನ್ನಪ್ಪ ಸಜ್ಜನ, ಗ್ರಾಪಂ ಸದಸ್ಯ ಗುರುನಗೌಡ ಪಾಟೀಲ, ರಾಚಪ್ಪ ಕನ್ನೂರ, ಪವನ ಹಳ್ಳಿ, ಮಲ್ಲಪ್ಪ ಸಜ್ಜನ, ಮಲ್ಲಣ್ಣ ಸಜ್ಜನ, ಕೆಂಚು ವಾಲೀಕಾರ, ನಿವೃತ್ತ ತಹಶೀಲ್ದಾರ್‌ ರಾಯಪ್ಪ ಸಜ್ಜನ, ಬಸಪ್ಪ ಉಕ್ಕಲಿ, ಶರಣಬಸ್ಸು ಸಜ್ಜನ, ಪರಸುರಾಮ ಪವಾರ, ಸಂಗಮೇಶ ಕನ್ನೂರ, ಮುಕುಂದ ಪವಾರ, ಬಸವಂತ್ರಾಯಗೌಡ ಪಾಟೀಲ, ಶ್ರೀಗುರು ಆರೂಢರ ಸಂಸ್ಮರಣೆ ವೇದಿಕೆ ಅಧ್ಯಕ್ಷ ಗುರುರಾಜ ಕನ್ನೂರ ಇದ್ದರು.

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.