ಬರದ ನಾಡಲ್ಲಿ ತರಕಾರಿ ತುಟ್ಟಿ
•ತರಕಾರಿ ಬೆಳೆದವರಿಗಿಂತ ದಲ್ಲಾಳಿ-ವ್ಯಾಪಾರಿಗಳಿಗೇ ಹೆಚ್ಚಿನ ಲಾಭ
Team Udayavani, May 21, 2019, 11:11 AM IST
ಇಂಡಿ: ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದೆ. ಗಡಿ ಭಾಗದ ಇಂಡಿ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲೂ ನೀರು ಸಿಗದೆ ಇರುವುದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾಯಿಪಲ್ಲೆ ಬೆಳೆಗಾರರಿಗೂ ನೀರಿನ ತೊಂದರೆಯಾಗಿದ್ದರಿಂದ ದರದಲ್ಲಿ ಭಾರಿ ಬದಲಾವಣೆಯಾಗಿದೆ.
ಕಾಲುವೆಗೆ ಪ್ರಸಕ್ತ ವರ್ಷ ಜನೆವರಿ ತಿಂಗಳವರೆಗೆ ಮಾತ್ರ ನೀರು ಹರಿಸಿದ್ದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಬೇಸಿಗೆಯಲ್ಲಿ ಸಂಪೂರ್ಣ ಕುಸಿದು ಹೋಗಿದೆ. ಬೋರ್‌ವೆಲ್, ಬಾವಿಗಳು ಬತ್ತಿದ್ದರಿಂದ ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಏಪ್ರಿಲ್-ಮೇ ದರ: ಈರುಳ್ಳಿ 20 ರೂ, ಬಳ್ಳೊಳ್ಳಿ 80 ರೂ, ಟೊಮೆಟೊ 50 ರೂ, ಮೆಣಸಿನಕಾಯಿ 80 ರೂ, ಬದನೆಕಾಯಿ 50 ರೂ, ಬಟಾಟಿ 30 ರೂ, ಕೊತ್ತಂಬರಿ 15 ರೂ.ಗೆ ಒಂದು ಸೂಡ್, ಸೌತೆಕಾಯಿ 20 ರೂ, ಬೆಂಡೆಕಾಯಿ 50 ರೂ, ಡಬ್ಬು ಮೆಣಸಿನಕಾಯಿ 80 ರೂ, ನುಗ್ಗೆ 20 ರೂ.ಗೆ ಒಂದು ಸೂಡ್, ಫ್ಲಾವರ್ ಕೆಜಿಗೆ 50 ರೂ.
ಜನೆವರಿ-ಫೆಬ್ರವರಿ ದರ: ಈರುಳ್ಳಿ 10 ರೂ, ಬಳ್ಳೊಳ್ಳಿ 20 ರೂ, ಟೊಮೆಟೊ 20 ರೂ, ಮೆಣಸಿನಕಾಯಿ 20 ರೂ, ಬಟಾಟಿ 10 ರೂ, ಬದನೆಕಾಯಿ 20 ರೂ, ಸೌತೆಕಾಯಿ 10 ರೂ, ಬೆಂಡಿಕಾಯಿ 20 ರೂ, ಡಬ್ಬು ಮೆಣಸಿನಕಾಯಿ 20, ನುಗ್ಗೆ 10 ರೂ, ಫ್ಲಾವರ್ 20 ರೂ, ಕೊತ್ತಂಬರಿ 5 ರೂ. ಒಂದು ಸೂಡ್ ಹೀಗೆ ಇನ್ನಿತರಗೆ ಕಾಯಿಪಲ್ಲೆ ದರ ಇನ್ನಷ್ಟು ಹೆಚ್ಚಾಗಿ ಬಿಟ್ಟಿದೆ. ಇಷ್ಟು ಹೆಚ್ಚಿಗೆ ದರವಾದರೂ ನೇರವಾಗಿ ರೈತರಿಗೆ ಆ ಹಣ ಮುಟ್ಟಲ್ಲ. ಮಧ್ಯವರ್ತಿಗಳು ರೈತರು ಬೆಳೆದ ತರಕಾರಿ ಖರೀದಿಸಿ ಕಾಯಿಪಲ್ಲೆ ವ್ಯಾಪಾರಸ್ಥರಿಗೆ ನೀಡುತ್ತಾರೆ. ಹೀಗಾಗಿ ಕಾಯಿಪಲ್ಲೆ ಬೆಳೆದ ರೈತನಿಗಿಂತ ದಲ್ಲಾಳಿಗಳು, ವ್ಯಾಪಾರಸ್ಥರಿಗೆ ಇದರ ಲಾಭ ದೊರೆಯುತ್ತಿದೆ.
•ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.