Vijayapura: 53 ನಿಮಿಷಗಳ ಅಂತರದಲ್ಲಿ ಮತ್ತೆ ಎರಡು ಬಾರಿ ಲಘು ಭೂಕಂಪನ
Team Udayavani, Jan 29, 2024, 9:17 AM IST
ವಿಜಯಪುರ: ವಿಜಯಪುರ ನಗರದ ಸುತ್ತಲೂ ಐದು ದಿನಗಳ ಅಂತರದಲ್ಲಿ ಭಾನುವಾರ ತಡರಾತ್ರಿ ಮತ್ತೆ ಎರಡು ಬಾರಿ ಲಘು ಭೂಕಂಪನಗಳು ಸಂಭವಿಸಿವೆ.
ಜಿಲ್ಲೆಯ ಮನಗೂಳಿ ಪರಿಸರದಲ್ಲಿ ಕೇಂದ್ರಿತವಾಗಿದ್ದ ಎರಡೂ ಭೂಕಂಪನಗಳು 2.6 ತೀವ್ರತೆ ಹೊಂದಿದ್ದವು. ಎರಡು ಬಾರಿ ಭೂಕಂಪನಗಳು ಸಂಭವಿಸಿದರೂ ಯಾವುದೇ ಅಪಾಯ ಸಂಭವಿಸಿಲ್ಲ.
53 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಯರನಾಳ ಗ್ರಾ.ಪಂ. ಪರಿಸರದ ಹತ್ತರಕಿಹಾಳ, ನಂದಿಹಾಳ, ವಿಜಯಪುರ ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ಸರಣಿ ಭೂಕಂಪನಗಳು ಸಂಭವಿಸಿರುವುದು ದೃಢಪಟ್ಟಿದೆ.
ವಿಜಯಪುರ ನಗರದ ಜಲನಗರ, ಇಬ್ರಾಹಿಂಪುರ, ಗಣೇಶನಗರ, ಕೀರ್ತಿನಗರ, ಬಸವನಗರ, ವಜ್ರಹನುಮಾನ ಪ್ರದೇಶ ಹೀಗೆ ವಿವಿಧ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.
ಮೊದಲ ಭೂಕಂಪ ಭಾನುವಾರ ಮಧ್ಯರಾತ್ರಿ 12 ಗಂಟೆ 22ನಿಮಿಷ 52 ಸೆಕೆಂಡಿಗೆ ಸಂಭವಿಸಿದ್ದು, ಭೂಮಿಯ 5 ಕಿ.ಮೀ. ಆಳದಲ್ಲಿ ಕೇಂದ್ರೀಕೃತವಾಗಿತ್ತು.
ಇದಾದ 53 ನಿಮಿಷಕ್ಕೆ ಅಂದರೆ ಮಧ್ಯರಾತ್ರಿ 1 ಗಂಟೆ 15 ನಿಮಿಷ 14 ಸೆಕೆಂಡಿಗೆ ಸಂಭವಿಸಿದ ಎರಡನೇ ಭೂಕಂಪ ಭೂಮಿಯ 7 ಕಿ.ಮೀ. ಆಳದಲ್ಲಿ ಕೇಂದ್ರೀತ ವಾಗಿತ್ತು. ಎರಡೂ ಭೂಕಂಪನಗಳು 2.6 ತೀವ್ರತೆ ಹೊಂದಿದ್ದವು.
ಗಾಢ ನಿದ್ದೆಯಲ್ಲಿದ್ದ ಜನರಿಗೆ ಭೂಮಿ ನಡುಗುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಅಲುಗಾಡಿ ಸದ್ದು ಮಾಡಿವೆ.
ಜನರು ಗಾಢ ನಿದ್ರೆಯಲ್ಲಿದ್ದರೂ ಎಚ್ಚರಗೊಂಡ ಹಲವರು ತಮ್ಮ ಮನೆಯವರನ್ನು ಎಬ್ಬಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ.
ಜಿಲ್ಲೆಯಲ್ಲಿ ಗುರುವಾರವಷ್ಟೇ ಲಘು ಭೂಕಂಪನ ಸಂಭವಿಸಿದ್ದು, ಇದೀಗ ಐದು ದಿನಗಳ ಅಂತರದಲ್ಲಿ ಮತ್ತೊಮ್ಮೆ ಸರಣಿ ಭೂಕಂಪ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.
ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢೀಕರಿಸಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಲಘು ಭೂಕಂಪನ ಅಪಾಯ ರಹಿತವಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯದ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮನವಿ ಮಾಡಿದೆ.
ಇದನ್ನೂ ಓದಿ: ಕಾಲುವೆಯಲ್ಲಿ ಪತ್ತೆಯಾಯ್ತು ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಯ ಮಗನ ಶವ, ಪ್ರಮುಖ ಆರೋಪಿ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.