ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರಿಗೆ ತೊಂದರೆ


Team Udayavani, Mar 26, 2018, 5:32 PM IST

vij-1.jpg

ಆಲಮಟ್ಟಿ: ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯದ ವ್ಯಾಪ್ತಿಯ ರೈತರ ಜಮೀನಿಗೆ ಹಿಂಗಾರು ಹಂಗಾಮಿಗೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ನೀರು ಹರಿಯದೇ ರೈತರು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಜಲಾಶಯ ಭರ್ತಿಯಾಗಿತ್ತು. ಬಸವ ಸಾಗರ ಹಾಗೂ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಲು ಮಹತ್ವದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ 2018ರ ಮಾ. 25ರವರೆಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು. ವಿದ್ಯುತ್‌ ವ್ಯತ್ಯಯದಿಂದ ಫಲವತ್ತಾದ ಫಸಲು ಬರುವ ವೇಳೆಯಲ್ಲಿ ನೀರು ಹರಿಸದಿರುವುದರಿಂದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ.

ಅಖಂಡ ವಿಜಯಪುರ ಜಿಲ್ಲೆಯನ್ನು ಹಸಿರಾಗಿಸಲು ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿದ್ದರೂ ಕೂಡ ಕಳೆದ ಬಾರಿ
ಸಮರ್ಪಕ ಮಳೆಯಾಗದ ಕಾರಣ ಕುಡಿಯುವ ನೀರಿಗೂ ಪರದಾಡುವಂತಾಗಿತ್ತು. ಆದರೆ ಈ ಬಾರಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಏರಿಕೆಯಾಗಿ ಜಲಾಶಯ ಭರ್ತಿಯಾಗಿದೆ. ವಿದ್ಯುತ್‌ ಪೂರೈಕೆಯಾಗದಿರುವುದರಿಂದ ರೈತರ ಕೈಗೆ ಬಂದ
ತುತ್ತು ಬಾಯಿಗೆ ಬರದಂತಾಗಿದೆ. ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ, ಬಲದಂಡೆ ಕಾಲುವೆ, ತಿಮ್ಮಾಪುರ ಏತ ನೀರಾವರಿಯ ಡಿಸಿ-1 ಹಾಗೂ ಡಿಸಿ-2, ಚಿಮ್ಮಲಗಿ ಏತ ನೀರಾವರಿ, ಮುಳವಾಡ ಏತ ನೀರಾವರಿ ಯೋಜನೆಯ ಹಂತ-1ರ ಕಾಲುವೆಗಳು, ಮರೋಳ ಏತ ನೀರಾವರಿ ಯೋಜನೆ ಹಂತ-1ರ ಪೂರ್ವ ಹಾಗೂ ಪಶ್ಚಿಮ ಕಾಲುವೆ ನೀರಾವರಿ ಮತ್ತು ಹಂತ-2ರ ಪೂರ್ವ ಹಾಗೂ ಪಶ್ಚಿಮ ಹನಿ ನೀರಾವರಿ ಯೋಜನೆ ಸೇರಿದಂತೆ ಎಲ್ಲ ಕಾಲುವೆಗಳ ಮುಖ್ಯ ಸ್ಥಾವರಗಳಿಗೆ ಸಮರ್ಪಕ
ವಿದ್ಯುತ್‌ ಪೂರೈಕೆಯಾಗದಿರುವುದರಿಂದ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳು ರೈತರ ಆಕ್ರೋಶಕ್ಕೆ ತುತ್ತಾಗುವಂತಾಗಿದೆ.

ಕೊನೆಯಂಚಿನ ರೈತರಿಗಿಲ್ಲ ನೀರು: ಪ್ರತಿ ಬಾರಿಯೂ ವರ್ಷದಲ್ಲಿ ಎರಡು ಬಾರಿ ಅಂದರೆ ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿಗೆ ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಶಾಸಕರುಗಳು, ಕೃಭಾಜನಿ ಅಧಿಕಾರಿಗಳು, ಕಂದಾಯ, ಕೃಷಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡು ಕಾಲುವೆಗಳ ಕೊನೆಯಂಚಿನ ರೈತರ
ಜಮೀನಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳುತ್ತಾರೆ. ಆದರೆ ಕಾಲುವೆಗಳ ಕೊನೆಯಂಚಿನ ರೈತರ ಜಮೀನಿಗೆ ನೀರು ಇನ್ನೂವರೆಗೆ ನೀರು ಹರಿಯದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ. ಜಮೀನಿಗೆ ನೀರಿಲ್ಲದಿದ್ದರೂ ಅಚ್ಚುಕಟ್ಟು: ಲಾಲ್‌
ಬಹಾದ್ದೂರ್‌ ಶಾಸ್ತ್ರೀ ಜಲಾಶಯ ವ್ಯಾಪ್ತಿಯಲ್ಲಿ ಕಾಲುವೆಗಳನ್ನು ನಿರ್ಮಿಸಿ ರೈತರ ಜಮೀನಿಗೆ ನೀರೊದಗಿಸಲು ವಿತರಣಾ ಕಾಲುವೆ, ಶೀಳುಗಾಲುವೆ, ಹೊಲಗಾಲುವೆಗಳನ್ನು ನಿರ್ಮಿಸಿ ರೈತರ ಜಮೀನಿಗೆ ನೀರೊದಗಿಸಲು ಕ್ರಮ ಕೈಗೊಳ್ಳಲಾಗಿದೆಯಾದರೂ
ಶಾಸ್ತ್ರೀ ಸಾಗರ ಜಲಾಶಯ ವ್ಯಾಪ್ತಿಯಲ್ಲಿ ಇನ್ನೂ ಸಾವಿರಾರು ಎಕರೆ ರೈತರ ಜಮೀನಿಗೆ ನೀರು ಹರಿಯದಿದ್ದರೂ ಕೂಡ ಕೃಷ್ಣಾಭಾಗ್ಯಜಲ ನಿಗಮದ ಕೃಷ್ಣಾ ಕಾಡಾ ಯೋಜನೆಯ ಅಧಿಕಾರಿಗಳ ಕೈಚಳಕದಿಂದ ರೈತರ ಜಮೀನುಗಳಿಗೆ ಹೊಲಗಾಲುವೆ
ಮಾಡದಿದ್ದರೂ ಕೂಡ ಆ ಎಲ್ಲ ಜಮೀನುಗಳನ್ನು ಕೃಮೇಯೋ ಜಲಾನಯನ ಪ್ರದೇಶವೆಂದು ನಮೂದಿಸಲಾಗಿದೆ.

ರೈತರು ತಮ್ಮ ಜಮೀನಿಗೆ ನೀರು ಬಾರದಿದ್ದರೂ ಕೂಡ ಕೃಭಾಜನಿನಿಗೆ ಕರ ತುಂಬಬೇಕು. ಅಲ್ಲದೇ ಕೃಷಿ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆಯಿಂದ ಕೃಷಿ ಹೊಂಡದಂತಹ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ನಿಮ್ಮದು ಕಾಲುವೆ ನೀರಾವರಿ ಜಮೀನಾಗಿದೆ, ಆದ್ದರಿಂದ ಯೋಜನೆ ಕೊಡಲು ನಿರಾಕರಿಸುತ್ತಿದ್ದಾರೆಂಬುದು ರೈತರ ಆರೋಪವಾಗಿದೆ. ಇದರಿಂದ ಕಾಲುವೆಯಿಂದ ನೀರೂ ಇಲ್ಲ ಇತ್ತ ಉಳಿದ ಇಲಾಖೆಯ ಯೋಜನೆಗಳನ್ನು ಪಡೆಯಲೂ ಆಗದಂತಾಗಿದೆ. ಹಿಂಗಾರು ಹಂಗಾಮಿಗೆ ಸಲಹಾಸಮಿತಿ ಸಭೆಯಲ್ಲಿ ಜನವರಿ 7ರಿಂದ ಆರಂಭಗೊಂಡು ಮಾಚ್‌ 25ರವರೆಗೆ ವಾರಬಂ  ಪದ್ಧತಿ ಅನುಸರಿಸಿ ನೀರು
ಕೊಡಲು ತೀರ್ಮಾನಿಸಿದಂತೆ ಈಗಾಗಲೇ ಫೆಬ್ರುವರಿಗೆ ನೀರು ಹರಿಸಲಾಗಿದ್ದು, ನಿಯಮದಂತೆ ಮಾಚ್‌ 8ರಿಂದ 12ರವರೆಗೆ ಹಾಗೂ 21ರಿಂದ 25ರವರೆಗೂ ನೀರು ಹರಿಸಬೇಕಾಗಿತ್ತು. ಮಾರ್ಚ್‌ ತಿಂಗಳ 8ರಿಂದ ಕಾಲುವೆಗಳಿಗೆ ನೀರು ಹರಿಸಬೇಕಾಗಿದ್ದರೂ
ಸಮರ್ಪಕ ವಿದ್ಯುತ ಪೂರೈಕೆ ಆಗದಿರುವುದರಿಂದ ಕಾಲುವೆಗೆ ನೀರು ಹರಿಸಿಲ್ಲ ಮತ್ತು ಇನ್ನೂ ಎಷ್ಟು ದಿನಗಳು ವಿದ್ಯುತ್‌ ಕೊರತೆಯಾಗುತ್ತದೆ ಎನ್ನುವುದೂ ಸ್ಪಷ್ಟವಾಗಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ರೈತರ ಜಮೀನಿನಲ್ಲಿರುವ ಹಿಂಗಾರು ಹಂಗಾಮಿನ ಬೆಳೆಗಳು ಕೈಗೆ ಬರಲು ಮಾರ್ಚ್‌ 31ರವರೆಗೂ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎನ್ನುತ್ತಾರೆ ಪಿಕೆಪಿಎಸ್‌ ಬ್ಯಾಂಕ್‌ ಅಧ್ಯಕ್ಷ ಹಾಗೂ ಪ್ರಗತಿಪರ ರೈತ
ಶಾಂತಪ್ಪ ಮನಗೂಳಿ. ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲದಿರುವುದರಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಸಮರ್ಪಕ
ವಿದ್ಯುತ್‌ ಪೂರೈಕೆಯಾದರೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನೀರು ಹರಿಸಲಾಗುವುದು. ವಿದ್ಯುತ್‌
ಕೊರತೆಯಿಂದ ನೀರು ಪೂರೈಕೆಯಾಗದಿರುವ ದಿನಗಳ ನೀರನ್ನು ಬೇಡಿಕೆಗೆ ಅನುಗುಣವಾಗಿ ತೀರ್ಮಾನಿಸಿ ನೀರು ಹರಿಸಲು ಕ್ರಮ
ಕೈಗೊಳ್ಳಲಾಗುವುದು.
ಆರ್‌.ತಿರುಮೂರ್ತಿ, ಅಧಿಧೀಕ್ಷಕ ಅಭಿಯಂತರ

ಶಂಕರ ಜಲ್ಲಿ

ಟಾಪ್ ನ್ಯೂಸ್

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.