ವೀರಘೋಟದಲ್ಲಿ ಇಂದಿನಿಂದ ಇಷ್ಟಲಿಂಗ ಪೂಜೆ
Team Udayavani, Feb 15, 2019, 11:03 AM IST
ತಾಂಬಾ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಕ್ಷೇತ್ರ ವೀರಘೋಟ ಗ್ರಾಮದ ಆದಿ ಮೌನಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಫೆ.15ರಿಂದ 18ರವರೆಗೆ 1.96ಲಕ್ಷ ಗಣ ಇಷ್ಟಲಿಂಗ ಪೂಜಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಕ್ತರ ಪ್ರಸಾದಕ್ಕಾಗಿ ತಾಂಬಾ ಗ್ರಾಮದ ಗುರುಬಸವ ವಿರಕ್ತ ಮಠದ ಆವರಣದಲ್ಲಿ ಜೋಳದ ರೊಟ್ಟಿ ಮತ್ತು ಸಜ್ಜಿರೊಟ್ಟಿ ಸಿದ್ಧಗೊಂಡಿವೆ.
ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಮಹಿಳೆಯರು ತಂಡೋಪ ತಂಡವಾಗಿ ಮಠದ ಆವರಣದಲ್ಲಿ ಬೀಡು ಬಿಟ್ಟು ಅಹೋರಾತ್ರಿ ರೊಟ್ಟಿ ಸಿದ್ಧಗೊಳಿಸುತ್ತಿದ್ದಾರೆ. ಕೆಲವರು ದಾನಿಗಳು ನೀಡಿದ ಅಕ್ಕಿ, ಗೋಧಿ , ಬೇಳೆ ಕಾಳು ಸೇರಿದಂತೆ ವಿವಿಧ ದವಸ ಧಾನ್ಯ ಸ್ವತ್ಛಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಇದರ ಜತೆಗೆ ಹಲವರು ತಮ್ಮ ಮನೆಗಳಲ್ಲೇ ಜೋಳದ ರೊಟ್ಟಿ ಸಿದ್ಧಪಡಿಸಿದ್ದು, ಮಠಕ್ಕೆ ತಂದುಕೊಡುತ್ತಿದ್ದಾರೆ. ಇದರಿಂದ ಮಠದ ಆವರಣದಲ್ಲಿ ರೊಟ್ಟಿ ರಾಶಿಯೇ ತುಂಬಿದೆ. ಈಗಾಗಲೇ 5 ಲಕ್ಷ ರೊಟ್ಟಿ ಸಿದ್ಧಗೊಂಡಿದ್ದು 5ಲಕ್ಷಕ್ಕೂ ಹೆಚ್ಚು ರೊಟ್ಟಿ ವೀರಘೋಟ ಗ್ರಾಮಕ್ಕೆ ಫೆ.15ರಂದು ರವಾನೆಯಾಗಲಿವೆ.
ಜಂಬಗಿ-ಹೊನ್ನಳ್ಳಿಯ ಪ್ರಭುದೇವರ ಬೆಟ್ಟದ ಅಡವಿಲಿಂಗ ಮಹಾರಾಜರು ಈ ಧಾರ್ಮಿಕ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿದ್ದಾರೆ. ತಮ್ಮ ಗುರು ಶಿವಯೋಗೀಶ್ವರರ ಸಂಕಲ್ಪದಂತೆ ನಾಡಿನ ವಿವಿಧೆಡೆ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಆಯೋಜಿಸುತ್ತಾರೆ.
ಈ ಬಾರಿ ವೀರಘೋಟದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜಾತಿ, ಮತ, ವರ್ಣಗಳಿಗೆ ಸೀಮಿತವಾಗಿರದೆ, ವಿಶ್ವ ಶಾಂತಿಗಾಗಿ ನಮ್ಮೊಳಗೆ ಇರುವ ಆ ನಿರಾಮಯನಾಧ ಭಗವಂತನನ್ನು ಲಿಂಗ ರೂಪದಲ್ಲಿ ಪ್ರಾರ್ಥಿಸುವುದಕ್ಕಾಗಿ ಹಮ್ಮಿಕೊಂಡ ಧಾರ್ಮಿಕ ಸಮಾವೇಶವಿದು ಎಂದು ಅಡವಿಲಿಂಗ ಮಹಾರಾಜರು ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಜರ ಹಿನ್ನೆಲೆ: ಪೂರ್ವಾಶ್ರಮದ ಹೆಸರು ದಶರಥ ಜನಿಸಿದ್ದು, 1966ರಲ್ಲಿ ಇಂಡಿ ತಾಲೂಕಿನ ಶಿರಕನಹಳ್ಳಿಯಲ್ಲಿ ಕೃಷಿ ಕುಟುಂಬ, ಕುಸ್ತಿಪಟ್ಟು ಬಾಲ್ಯದಿಂದ ಪ್ರೌಢಾವಸ್ಥೆಗೆ ಬಂದಂತೆ ಅಧ್ಯಾತ್ಮದತ್ಲೂ ಒಲವು ಹೆಚ್ಚಿತು. ಊರಿಂದ 5 ಕಿಮೀ ದೂರವಿದ್ದ ಪ್ರಭುದೇವರ ಬೆಟ್ಟಕ್ಕೆ ಹೋಗಲಾರಂಭಿಸಿದರು.
ಶಿವಯೋಗಿಗಳ ಸಾನ್ನಿಧ್ಯದಲ್ಲಿ ಸ್ಥಾನ ಪಡೆದರು. 1990ರಲ್ಲಿ ಆರು ತಿಂಗಳು ಯೋಗಾನುಷ್ಠಾನಗೈದರು. ಈ ಬಳಿಕ ದಶರಥರಲ್ಲಿ ಸನ್ಯಾಸತ್ವದ ಹಂಬಲ ಹೆಚ್ಚಿತು. ಶಿವಯೋಗಿಗಳ ಆಜ್ಞೆಯಂತೆ ಬಂಥನಾಳದ ವೃಷಭಲಿಂಗೇಶ್ವರರಿಂದ ಸನ್ಯಾಸತ್ವದ ಸಂಕೇತವಾಗಿ ಕಾವಿ ಬಟ್ಟೆಯನ್ನು ಆಶೀರ್ವಾದವಾಗಿ ಪಡೆದು ಬಂದ ದಶರಥ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದರು. ಅಂದೇ ಸಂಸಾರಕ್ಕೆ ವಿದಾಯ ಹೇಳಿದ ದಶರಥ ಅಡವಿಲಿಂಗ ಮಹಾರಾಜರಾದರು. ಶಿವಯೋಗಿಗಳು ಅಡವಿಲಿಂಗನ ಆಧ್ಯಾತ್ಮಿಕ ಗುರುಗಳಾದರು. ಲೋಕ ಕಲ್ಯಾಣಕ್ಕಾಗಿ ಅವರು ಮಾಡಿದ ಜಪಾನುಷ್ಠಾನಗಳು ಹಲವಾರು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಹಿಮಾಲಯ ಒಳಗೊಂಡು ದೇಶದ ಹಲವು ಪ್ರದೇಶಗಳಲ್ಲಿ ಹಾಗೂ ನೇಪಾಳದಲ್ಲಿ ಘೋರ ತಪಸ್ಸನ್ನಾಚರಿಸಿದ ಸರಳ ಜೀವಿ. ಇಂದು ತಮ್ಮ ಗುರುಗಳಾದ ಬಂಥನಾಳದ ಲಿಂ.ಸಂಗನಬಸವ ಶಿವಯೋಗಿಗಳು ನಡೆಸಿದ 1.96ಲಕ್ಷ ಇಷ್ಟಲಿಂಗ ಪೂಜಾ ಕಾರ್ಯಕ್ರಮದ 50ವರ್ಷದ ನೆನಪಿಗಾಗಿ ವೀರಘೋಟದಲ್ಲಿ ಹಮ್ಮಿಕೊಂಡಿದ್ದಾರೆ.
ಲಕ್ಷ್ಮಣ ಹಿರೇಕುರಬರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.