ಬಿಜೆಪಿ ಸಂಘಟನೆಗೆ ಒತ್ತು ನೀಡಿ: ಬೆಳ್ಳುಬ್ಬಿ


Team Udayavani, Aug 31, 2017, 5:33 PM IST

bij-6.jpg

ಬಸವನಬಾಗೇವಾಡಿ: 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಹೇಳಿದರು. ಬುಧವಾರ ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಬಸವನಬಾಗೇವಾಡಿ ಮಂಡಳ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆ ಜಾರಿಯಾಗುವರೆಗೆ ಬೇರೆ ದೇಶಕ್ಕೆ ಹೋಗುವುದಿಲ್ಲ. ಕಾರ್ಯಕರ್ತರು ಮತ್ತು ವಿವಿಧ ಮಂಡಳಿಯ ಪದಾಧಿ ಕಾರಿಗಳು ಗುರಿ ಇಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.

ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನನ್ನಿಂದಲೇ ನಡೆದಿವೆ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಸರಕಾರ ಮತ್ತು ಮಾಜಿ ಶಾಸಕ ಎಸ್‌.ಕೆ. ಬೆಳ್ಳುಬ್ಬಿ ಮಾಡಿರುವ ಅಭಿವೃದ್ಧಿ ಕಾರ್ಯಗಳೆಂದು ಹೇಳಲು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮಂಡಳದ ವಿವಿಧ ಪದಾಧಿ ಕಾರಿಗಳು ಮತ್ತು ಕಾರ್ಯಕರ್ತರು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಗೆಲುವು ಸಾಧಿಸಲು ಕಷ್ಟವಾಗುತ್ತದೆ ಎಂದರು. ರಾಜ್ಯನಾಯಕರು ಮತ್ತು ನಮ್ಮ ಮತಕ್ಷೇತ್ರದ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬೇಡಿ. ಏನೇ ಭಿನ್ನಾಭಿಪ್ರಾಯ ಇದ್ದರೂ ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವಿಸ್ತಾರಕ ಉಸ್ತುವಾರಿ ವಿವೇಕಾನಂದ ಡೆಬ್ಬಿ ಮಾತನಾಡಿ, ವಿಸ್ತಾರಕ ಕಾರ್ಯಕ್ರಮದ ಸಂದೇಶ ಮನೆ ಮನೆ ತಲುಪಿಲ್ಲ. ಹೀಗಾಗಿ ಮತ್ತೆ ಜಿಲ್ಲೆಯಲ್ಲಿ ಮರು ವಿಸ್ತಾರಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಬ್ಲಾಕ್‌ ಬಿಜೆಪಿ ಅಧ್ಯಕ್ಷ ಬಿ.ಕೆ. ಕಲ್ಲೂರ ಮಾತನಾಡಿದರು. ಜಿಪಂ ಸದಸ್ಯರಾದ ಕಲ್ಲಪ್ಪ ಮಟ್ಟಿ, ಸಂತೋಷ ನಾಯಕ, ಮುಖಂಡರಾದ ವಿ.ಎಂ. ಪರೆಣ್ಣವರ, ಸಂಗನಗೌಡ ಚಿಕ್ಕೊಂಡ, ಟಿ.ಟಿ. ಹೇಗಿದಾಳ, ಶಂಕರಗೌಡ ಪಾಟೀಲ, ಮಲ್ಲು ಸೇಬಗೊಂಡ, ಸಾವಿತ್ರಿ ಕಲ್ಯಾಣಶೆಟ್ಟಿ, ಕೊಲ್ಹಾರ ಪಪಂ. ಅಧ್ಯಕ್ಷ ಕಲ್ಲಪ್ಪ ಸೊನ್ನದ ಉಪಸ್ಥಿತರಿದ್ದರು.

ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಸ್ವಾಗತಿಸಿದರು. ಗೋಪಾಲ ಚೋಳಿ ನಿರೂಪಿಸಿದರು. ರಾಮು ಜಗತಾಪ ವಂದಿಸಿದರು. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.