ಸ್ವಚ್ಛ ಭಾರತ ಯೋಜನೆಗೆ ಕೈಜೋಡಿಸಲು ಪಾಟೀಲ ಸಲಹೆ
Team Udayavani, Feb 6, 2020, 6:13 PM IST
ಇಂಡಿ: ಸ್ವಚ್ಛತೆಗೆ ಭಾರತ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕೇಂದ್ರ, ರಾಜ್ಯ ಸರಕಾರಗಳು ಸಹ ಸ್ವಚ್ಛ ಭಾರತ ಯೋಜನೆಯನ್ನು ಸಾಕಷ್ಟು ಮುತುವರ್ಜಿ ವಹಿಸಿ ಮುನ್ನಡೆಸುತ್ತಿದ್ದು ಗ್ರಾಮೀಣ ಭಾಗದ ಜನರು ಈ ಯೋಜನೆಗೆ ಕೈಜೋಡಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಬಬಲಾದ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಘನತ್ಯಾಜ್ಯ ವಸ್ತುಗಳ ಘಟಕದ ಮತ್ತು ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಗ್ರಾಮೀಣ ಗೋದಾಮು ನಿರ್ಮಾಣ ಮತ್ತು ಎನ್.ಆರ್. ಎಲ್.ಎಂ. ಶೆಡ್ ಕಟ್ಟಡದ ಭೂಮಿಪೂಜೆ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ರಾಮರಾಜ್ಯದ ಕನಸು ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಯಾದಾಗ ನನಸಾಗುತ್ತದೆ. ಈ ಹಿಂದೆ ಆಡಳಿತ ಮಾಡಿದ ಸರಕಾರಗಳು ಗ್ರಾಮೀಣ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಗ್ರಾಪಂಗಳನ್ನು ಬಲಪಡಿಸಿವೆ. ಮನುಷ್ಯನ ಆರೋಗ್ಯಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಸರಕಾರಗಳು ಪರಿಸರ ಗಟ್ಟಿಗೊಳಿಸುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳಾದ ಶಿಕ್ಷಣ, ನೀರು,ರಸ್ತೆ, ವಸತಿ ಒದಗಿಸುವುದು ಸರಕಾರಗಳ ಕರ್ತವ್ಯ. ಈ ಭಾಗ ಇಂದು ನೀರಾವರಿಯಿಂದ ವಂಚಿತವಾದ ಪ್ರದೇಶವಾಗಿದ್ದು ಮೇಘರಾಜ ಪದೇ ಪದೇ ಮುನಿಸಿಕೊಳ್ಳುತ್ತಿರುವುದರಿಂದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಿಂದೆ ಲಿಂಬೆ, ದಾಳಿಂಬೆ, ದ್ರಾಕ್ಷಿ, ಮೆಣಸಿನಕಾಯಿ ಬೆಳೆಗಳನ್ನು ಬೆಳೆದ ರೈತರು ಆರ್ಥಿಕವಾಗಿ ಪ್ರಗತಿಯಲ್ಲಿದ್ದರು. ಹಿಂದಿನ ವ್ಯವಸ್ಥೆ ಇಂದಿಲ್ಲ ಎಂದರು.
ಭವಿಷ್ಯದಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಕೊಳ್ಳದ 12 ನೀರಾವರಿ ಯೋಜನೆಯಲ್ಲಿ ಐದು ನೀರಾವರಿ ಯೋಜನೆ ಇಂಡಿ ತಾಲೂಕಿಗೆ ಒಳಪಡುತ್ತವೆ. ಆದರೂ ಸಹಿತ ಈ ಯೋಜನೆಗಳಿಂದಲೂ ನೀರು ಬರುತ್ತವೆ ಎಂಬ ನಂಬಿಕೆ ಬೇಡ. ಈ ಭಾಗ ನೀರಾವರಿ ಯೋಜಿತ ಪ್ರದೇಶದ ಟೇಲ್ ಎಂಡ್‌ದಲ್ಲಿ ಇರವುದರಿಂದ ಕೃಷ್ಣಾ ಕಾಲುವೆ ಮೇಲ್ಭಾಗದ ರೈತರು ನೀರು ಬಿಟ್ಟಾಗ ಮತ್ತು ಎಥೇತ್ಛವಾಗಿ ಮಳೆಯಾದಾಗ ಮಾತ್ರ ನೀರು ಬರುತ್ತವೆ. ಸುಳ್ಳು ಹೇಳಿ ಹೋಗುವ ಜಾಯಮಾನ ನನ್ನದಲ್ಲ, ವಾಸ್ತವಿಕ ಸತ್ಯ ಹೇಳಿರುವೆ ಎಂದರು.
ವಿಜಯಪುರ ಜಿಲ್ಲೆ ಸೇರಿದಂತೆ ಜಲಧಾರೆ ಯೋಜನೆ ಮೂಲಕ ಕೊಲ್ಹಾರ, ತುಮಕೂರ ಸೇರಿದಂತೆ ಐದಾರು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇದಾಗಿದೆ. ಆಲಮಟ್ಟಿ ಡ್ಯಾಂನಿಂದ ನೀರು ತರುವುದರೊಂದಿಗೆ ನನ್ನ ಕ್ಷೇತ್ರದ 80 ಹಳ್ಳಿಗಳಿಗೆ ಕುಡಿಯವ ನೀರು ಒದಗಿಸಲು ಪಣ ತೊಟ್ಟಿರುವುದಾಗಿ ಹೇಳಿದರು.
ಕೆರೆ ತುಂಬುವ ಯೋಜನೆ ಜಾರಿಯಾದರೂ ಹೇಳಿಕೊಳ್ಳುವಷ್ಟು ಪ್ರಗತಿಯಾಗಲ್ಲಿಲ್ಲ. ಆದರೂ ಕೆಲವೊಂದು ಪ್ರದೇಶಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಗ್ರ್ಯಾವಿಟಿ ಮೂಲಕ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಲಾಗುವದು ಎಂದರು.
ಕಾಂಗ್ರೆಸ್ ಮುಖಂಡ ಯಲಗೊಂಡ ಪೂಜಾರಿ ಮಾತನಾಡಿ, ಗ್ರಾಪಂ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಯೋಗೇಶ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ತಾಪಂ ಸದಸ್ಯ ಗಂಗಾಧರ ಬಿರಾದಾರ, ಗ್ರಾಪಂ ಅಧ್ಯಕ್ಷೆ ಪುತಳಾಬಾಯಿ ಪೂಜಾರಿ, ತಾಪಂ ಇಒ ಡಾ| ವಿಜಯಕುಮಾರ ಆಜೂರ, ಪಂಚುಗೌಡ ಬಿರಾದಾರ, ರಾಜಕುಮಾರ ತೊರವಿ, ಸದಾಶಿವ ಪ್ಯಾಟಿ, ಎಸ್.ಬಿ.ಕುಂಬಾರ, ಸಂಜಯ ಖಡಗೇಕರ್, ಬಾಪುರಾಯ ಬಿರಾದಾರ, ಯಲಗೊಂಡ ಪೂಜಾರಿ, ನಾಗಣ್ಣ ಜೇವೂರ, ರೇವಪ್ಪ ಬಿರಾದಾರ, ದುಂಡಪ್ಪ ಬಿರಾದಾರ, ಪಾರ್ವತಿ ಪಾಟೀಲ, ಸುರೇಶ ಪಾಟೀಲ ಶೇಗಾಂವ್, ಈಶ್ವರಗೌಡ ಪಾಟೀಲ, ಅರ್ಜುನ ಜೇವೂರ, ಕೊಂತೆವ್ವಾ ಪೂಜಾರಿ, ಸಿದ್ದಪ್ಪ ಪಾರೆ, ಲಕ್ಷ್ಮಣ ದಶವಂತ, ಪಾರ್ವತಿ ಹಳ್ಳಿ, ಸುವರ್ಣಾ ಹರಿಜನ, ಅಣ್ಣರಾಯ ಕುಂಬಾರ, ಅಭಿವೃದ್ಧಿ ಅಧಿಕಾರಿ ಎಸ್.ಡಿ. ಬಿರಾದಾರ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.