ಕಾಳಿದಾಸನ ಪ್ರತಿ ಅಕ್ಷರವೂ ಸಾಹಿತ್ಯ ರತ್ನ: ಸ್ವಾಮೀಜಿ
Team Udayavani, Jan 11, 2019, 9:42 AM IST
ವಿಜಯಪುರ: ಕವಿತ್ವದಲ್ಲಿ ಕವಿರತ್ನ ಕಾಳಿದಾಸ ಮೇರು ಪರ್ವತ ಎನಿಸಿರುವ ಕಾಳಿದಾಸನ ಲೇಖನಿಯಿಂದ ಜಿನುಗಿದ ಒಂದೊಂದು ಅಕ್ಷರ ಕೇವಲ ಸಾಹಿತ್ಯವಲ್ಲ. ಅದೊಂದು ಸಾಹಿತ್ಯದ ಅಮೂಲ್ಯ ಸಾಹಿತ್ಯ ರತ್ನ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.
ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಕುಮಾರ ಸಂಭವಂ ಮಹಾಕಾವ್ಯ ಕುರಿತಾದ ಚಿಂತನಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಳಿದಾಸ ಸಾಹಿತ್ಯ ಲೋಕದ ಮೇರುಪರ್ವತ. ಪೂರ್ಣ ಪ್ರಜ್ಞೆಯ ಸತ್ಯವನ್ನು ಸಾಹಿತ್ಯ ರೂಪವಾಗಿ ಉಣಬಡಿಸಿದ ಮಹರ್ಷಿ ವಾಲ್ಮೀಕಿ ಸೇರಿದಂತೆ ಇತರೆ ಮಹಾಕಾವ್ಯ ರಚಿಸಿದ ದಾರ್ಶನಿಕರ ಸಾಲಿಗೆ ಸೇರುತ್ತಾರೆ.
ಕಾಳಿದಾಸನ ಹೆಸರಿನಲ್ಲಿಯೇ ವಿಶಾಲಾರ್ಥವಿದೆ. ಜ್ಞಾನ ಭಂಡಾರವಿದೆ. ಆತನ ಹೆಸರಿನ ಅರ್ಥ ಕೇವಲ ಸರಸ್ವತಿಗೆ ಅಷ್ಟೇ ಗೊತ್ತು ಎಂದು ದೊಡ್ಡ ಪಂಡಿತರು ಕಾಳಿದಾಸನ ಜ್ಞಾನದ ಹಿರಿಮೆ ಕೊಂಡಾಡಿದ್ದಾರೆ ಎಂದರು. ಕಾಳಿದಾಸನ ಕಾವ್ಯ ಸೊಬಗು, ಉಪಮೇಯಗಳ ಪ್ರಯೋಗವನ್ನು ಸರಿಗಟ್ಟಲು ಯಾರಿಗೂ ಸಾಧ್ಯವಿಲ್ಲ, ಕಾಳಿದಾಸನಿಗೆ ಕಾಳಿದಾಸನೇ ಸಾಟಿ ಎಂದು ಬಣ್ಣಿಸಿದರು. ಹಿರಿಯ ಸಂಸ್ಕೃತ ಪಂಡಿತ ಡಾ| ಎಂ.ಇ. ರಂಗಾಚಾರ್ಯ ಮಾತನಾಡಿ, ಕಾಳಿದಾಸ ಭಗವಂತನನ್ನು ಅರಿತ ಮಹಾಕವಿ. ತನ್ನ ಅರಿವನ್ನು ಜಗತ್ತಿಗೆ ಪ್ರಸಾರ ಮಾಡಿದ ಮಹಾನ್ ಚೇತನ. ಯಾವ ರೀತಿ ಪ್ರಮೇಯಗಳನ್ನು ಬಳಸಿ ಕಾಳಿದಾಸ ಅನುಪಮವಾದ ಸಾಹಿತ್ಯವನ್ನು ಉಣಬಡಿಸಿದ್ದಾನೆ ಎಂಬುದಕ್ಕೆ ನಿದರ್ಶನವೊಂದನ್ನು ನೀಡಿದ ರಂಗಾಚಾರ್ಯರು ‘ರಘುವಂಶ ಕಾವ್ಯದಲ್ಲಿ ಬರುವಂತೆ, ಅಲ್ಲಿನ ರಾಣಿಯೊಬ್ಬಳಿಗೆ ಎಲ್ಲ ದೇಶದ ಮಣ್ಣನ್ನು ತಿನ್ನುವ ಆಸೆಯಾಗುತ್ತದೆ,’ ಈ ವಿಷಯವನ್ನೇ ಕಾಳಿ ಮಹಾತಾಯಿ ತನ್ನ ಮಗನ ಭವಿಷ್ಯದ ದಿಗ್ವಿಜಯಕ್ಕಾಗಿ ಆತ ಶಿಶುವಿದ್ದಾಗಲೇ ಎಲ್ಲ ದೇಶದ ಮಣ್ಣಿನ ರುಚಿ ಆತನಿಗೆ ಗೊತ್ತಾಗಲಿ ಎಂದು ಆ ತಾಯಿ ಬಯಸುತ್ತಾಳೆ ಎಂದು ಕಾಳಿದಾಸ ಅರ್ಥಪೂರ್ಣ ವಿವರಣೆ ನೀಡುತ್ತಾನೆ. ಈ ವಿಷಯದಲ್ಲಿಯೇ ಕಾಳಿದಾಸನ ಕಾವ್ಯ ವಿದ್ವತ್ತು ತಿಳಿದುಕೊಳ್ಳಬಹುದು ಎಂದರು. ಎಸ್.ಎ. ಜಿದ್ದಿ ಅಧ್ಯಕ್ಷತೆ ವಹಿಸಿದ್ದರು. ನಿತ್ಯಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.