ದಯಾಮರಣಕ್ಕೆ ಅನ್ನದಾತನಿಂದ ಅರ್ಜಿ
Team Udayavani, Apr 13, 2021, 1:17 PM IST
ವಿಜಯಪುರ: ಟ್ರ್ಯಾಕ್ಟರ್ ಕೊಳ್ಳಲು ಸಾಲ ನೀಡಿದ ಸಂಸ್ಥೆಗಳು ತಮ್ಮ ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದು ಒಂದೂವರೆ ದಶಕದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಕೂಡಲೇ ಸಮಸ್ಯೆ ಇತ್ಯರ್ಥಪಡಿಸಿ, ಇಲ್ಲವೇ ದಯಾ ಮರಣಕ್ಕೆ ಅನುಮತಿ ನೀಡಿಎಂದು ರೈತರೊಬ್ಬರು ಸೋಮವಾರ ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದ ಘಟನೆ ಜರುಗಿದೆ.
ವಿಜಯಪುರ ತಾಲೂಕಿನ ಕತ್ನಳ್ಳಿ (ಕತಕನಹಳ್ಳಿ) ಗ್ರಾಮದ ಹಿರಗಪ್ಪಅಲ್ಲಾಪುರ ಎಂಬ ರೈತರೇ ದಯಾಮರಣಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದವರು. ರಾಷ್ಟ್ರಪತಿ ಹಾಗೂಪ್ರಧಾನ ಮಂತ್ರಿಗಳಿಗೆ ತಾವು ಸಲ್ಲಿಸಿರುವ ದಯಾಮರಣಕೋರಿಕೆ ಅರ್ಜಿಯನ್ನು ರವಾನಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
2003ರಲ್ಲಿ ಟ್ರ್ಯಾಕ್ಟರ್ ಹಾಗೂ ಟ್ರಾಲಿ ಕೊಳ್ಳುವ ವಿಷಯದಲ್ಲಿ ಒಂದು ಬ್ಯಾಂಕ್ ಹಾಗೂ ಟ್ರ್ಯಾಕ್ಟರ್ ಉತ್ಪಾದಿಸುವ ಕಂಪನಿಯ ಹಣಕಾಸು ಸಂಸ್ಥೆ ತನಗೆ ಸಾಲ ನೀಡಿದ್ದವು. ಆನಂತರ ಸಾಲಮರು ಪಾವತಿ ವಿಷಯದಲ್ಲಿ ತೊಂದರೆ ಉಂಟಾಗಿತ್ತು. ಈ ಹಂತದಲ್ಲಿ ಟ್ರ್ಯಾಕ್ಟರ್ ಉತ್ಪಾದಕ ಕಂಪನಿಯ ಹಣಕಾಸು ಸಂಸ್ಥೆ ನನ್ನ ಟ್ರ್ಯಾಕ್ಟರ್ ಹಾಗೂ ಟ್ರಾಲಿ, ಎರಡು ನೇಗಿಲನ್ನು ಹೊತ್ತೂಯ್ದರು. ಖಾಸಗಿ ಕಂಪನಿ ವಿರುದ್ಧ ಸಾಲ ನೀಡಿದ ಬ್ಯಾಂಕ್ ಹೂಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಬ್ಯಾಂಕ್ ಪರ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಟ್ರ್ಯಾಕ್ಟರ್ ಕಂಪನಿ ಹೂಡಿದ್ದ ದಾವೆಯೂ ವಜಾ ಗೊಳಿಸಿ, ಸಾಲಮುಕ್ತಗೊಳಿಸಿದೆ ಎಂದು ರೈತ ಅರ್ಜಿಯಲ್ಲಿ ವಿವರಿಸಿದ್ದಾನೆ.
ಇಷ್ಟಾದರೂ ತಾವು ವಶಕ್ಕೆ ಪಡೆದಿರುವ ನನ್ನ ಟ್ರ್ಯಾಕ್ಟರ್, ಟ್ರಾಲಿ, ಎರಡು ನೇಗಿಲನ್ನು ಮರಳಿ ಕೊಡಲು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇಡಿ ಪ್ರಕರಣದಿಂದ ನನಗೆ ಅಗಿರುವ ಅನ್ಯಾಯ ಸರಿಪಡಿಸಲು 3 ಲಕ್ಷ ರೂ. ಆರ್ಥಿಕ ಪರಿಹಾರನೀಡುವ ಭರವಸೆ ನೀಡಿದ್ದ ಟ್ರ್ಯಾಕ್ಟರ್ ಕಂಪನಿ ಡೀಲರ್ ಕೂಡ ಇದೀಗ ಮೋಸ ಮಾಡಿದ್ದಾರೆ ಎಂದು ಪ್ರಕರಣವನ್ನು ವಿವರಿಸಿದ್ದಾರೆ.
ಒಂದೆಡೆ ಟ್ರ್ಯಾಕ್ಟರ್ ಇಲ್ಲದೆ, ಮತ್ತೂಂದೆಡೆ ಬ್ಯಾಂಕ್, ಟ್ರ್ಯಾಕ್ಟರ್ ಕಂಪನಿ ಹಾಗೂ ಡೀಲರ್ ಇವರು ಟ್ರ್ಯಾಕ್ಟರ್ ಸಾಲದ ವಿಷಯದಲ್ಲಿ ಅನಗತ್ಯವಾಗಿ ನನಗೆ ಕಿರುಕುಳ ನೀಡಿದ್ದಾರೆ.ನ್ಯಾಯಾಲಯದ ತೀರ್ಪಿನ ಬಳಿಕವೂ ನನಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಕಳೆದ ಒಂದೂವರೆ ದಶಕದಿಂದ ಆರ್ಥಿಕವಾಗಿಸಾಕಷ್ಟು ಸಂಕಷಕ್ಕೆ ಸಿಲುಕಿರುವ ನಾನು, ಕುಟುಂಬ ನಿರ್ವಹಣೆಗೂ ಪರದಾಡುವಂತಾಗಿದೆ. ಕಾರಣ ನನಗೆದಯಾಮರಣಕ್ಕೆ ಅನುಮತಿ ಕೊಡಿ ಎಂದು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು ಜಿಲ್ಲಾಡಳಿತ ಸ್ವೀಕೃತಿ ನೀಡಿದೆ.
ಈ ಮಧ್ಯೆ ರೈತನ ಈ ಸಂಕಷ್ಟದ ಹೋರಾಟದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪ್ರಾಂತ ರೈತ ಸಂಘದ ಭೀಮಶಿ ಕಲಾದಗಿ, ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ, ಬಿಸ್ಮಿಲ್ಲಾಬಡೇಘರ ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಹಂದ್ರಾಳ ಇತರರು ಜಿಲ್ಲಾಡಳಿತದ ಎದುರು ರೈತ ನಡೆಸಿದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.