ಅಧಿಕಾರಕ್ಕೆ ಬಂದ 24 ತಾಸಲ್ಲಿ ರೈತರ ಸಾಲ ಮನ್ನಾ: ಕುಮಾರಸ್ವಾಮಿ
Team Udayavani, Feb 2, 2018, 4:05 PM IST
ತಾಳಿಕೋಟೆ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ತಾಸಿನಲ್ಲಿ ಎಲ್ಲ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಶ್ರೀ ಶರಣಮುತ್ಯಾರ ಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರೈತರ ಬಗ್ಗೆ ಕಿಂಚಿತ್ತೂ ಕಾಳಿಜಿ ಹೊಂದಿಲ್ಲ.
ರಾಜ್ಯದಲ್ಲಿ 3500 ರೈತರು ಸಾಲದ ಸುಳಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಚಿಂತಿಸುತ್ತಿಲ್ಲ ಎಂದು ಆರೋಪಿಸಿದರು. ಜೆಡಿಎಸ್‌ಗೆ ಅಧಿಕಾರ ಕೊಟ್ಟರೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರಬೇಕಿಲ್ಲ. ವಿಜಯಪುರ ಜಿಲ್ಲೆಯಲ್ಲಿಯೇ ಕಾರ್ಖಾನೆ ಆರಂಭಿಸಲು ಕಂಪನಿ ಮಾಲೀಕರಿಗೆ ತಿಳಿಸುತ್ತೇನೆ. ಅವರಿಗೆ ವಿದ್ಯುತ್, ಜಾಗೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿ ನಿಮಗೆ ಉದ್ಯೋಗ ಕೊಡಿಸುವಂತಹ ಕೆಲಸ ಮಾಡುತ್ತೇನೆ ಎಂದು ಯುವಕರಿಗೆ ಭರವಸೆ ನೀಡಿದರು.
ಸಾಲ ಮನ್ನಾ ಮಾಡುವುದರ ಜತೆಗೆ ಇನ್ನೊಮ್ಮೆ ಸಾಲಗಾರರಾಗದ ಹಾಗೆ ಈ ಭಾಗದ ನೀರಾವರಿ ಯೋಜನೆ ಪೂರ್ಣಗೊಳಿಸಿ 25 ಸಾವಿರ ಕೋಟಿ ರೂ. ಗಾತ್ರದ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿ ರೈತರ ಹಿತ ಕಾಪಾಡುತ್ತೇನೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕೊಡಲು ಕೇವಲ ಅರಣ್ಯ ಇಲಾಖೆ ಒಂದರಲ್ಲೇ 5 ಲಕ್ಷ ಹುದ್ದೆ ಸೃಷ್ಠಿಸಿ ಪ್ರತಿ ತಿಂಗಳು 5 ಸಾವಿರ ಸಂಬಳ ನೀಡುವಂತೆ ಮಾಡುತ್ತೇನೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರನ್ನು ತೆಗೆದು ಹಾಕದಂತೆ ಹುದ್ದೆ ಖಾಯಂಗೊಳಿಸುತ್ತೇನೆ. ತಾಳಿಕೋಟೆ
ಪಟ್ಟಣದಲ್ಲಿ ರಸ್ತೆಗಳೆಲ್ಲ ಹಾಳಾಗಿ ಹೋಗಿವೆ. ನೀವು ಅಧಿಕಾರ ಕೊಟ್ಟ ಶಾಸಕರು ಅಭಿವೃದ್ಧಿ ಮಾಡಿಲ್ಲ ಎಂಬುದು ಎತ್ತಿ ತೋರಿಸುತ್ತಿದೆ ಎಂದು ವಾಗ್ಧಾಳಿ ಮಾಡಿದರು.
ಇವತ್ತು ಕೇಂದ್ರದ ಬಜೆಟ್ ಮಂಡನೆಯಾಗಿದೆ. ಅದನ್ನು ನೋಡಲು ಕುಳಿತಿದ್ದೆ. ಕರ್ನಾಟಕಕ್ಕೆ ಬರಪುರ ಕೊಡುಗೆಗಳು ಎಂದು ಬರುತ್ತಿದ್ದವು. ರೈತರಲ್ಲಿಯೇ ಅತಿ ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರ ರಕ್ಷಣೆ ಬಗ್ಗೆ ಒಂದು ಬಿಡಿಗಾಸು ಕೊಟ್ಟಿಲ್ಲ. ಎಷ್ಟೋ ಭಾರಿ ದ್ರಾಕ್ಷಿ ಬೆಳೆಗಾರರು ಕೇಂದ್ರದ ಮುಂದೆ ಅಂಗಲಾಚಿ ಮನವಿ ಮಾಡಿದ್ದಾರೆ. ಅವರ ಬೇಡಿಕೆ ಈಡೇರಿಲ್ಲ ಎಂದು ದೂರಿದರು.
ದೇವರ ಹಿಪ್ಪರಗಿ ಶಾಸಕ ಎ.ಎಸ್ .ಪಾಟೀಲ(ನಡಹಳ್ಳಿ), ಮಹಾದೇವಿ ಪಾಟೀಲ(ನಡಹಳ್ಳಿ), ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಪಾಟೀಲ, ಶಾಂತಗೌಡ ಪಾಟೀಲ(ನಡಹಳ್ಳಿ), ಜೆಡಿಎಸ್ ತಾಲೂಕು ಅಧ್ಯಕ್ಷ ಈರಸಂಗಪ್ಪಗೌಡ ಪಾಟೀಲ, ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ತಾಳಿಕೋಟೆ ಅಧ್ಯಕ್ಷ ವಾಸುದೇವ ಹೆಬಸೂರ, ಇಬ್ರಾಹಿಂ ಮನ್ಸೂರ್, ರಂಜಾನ್ ಮನಗೂಳಿ, ಖಾಜಾಹುಸೇನ್ ಚೌದ್ರಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಡಗಿ, ಸಂಗನಗೌಡ ಹೆಗರಡ್ಡಿ, ಬಾಬುಗೌಡ ಬಿರಾದಾರ, ಮಲ್ಲು ಮೇಟಿ, ರμಕ್ ಲಾಹೋರಿ, ಸತೀಶ ಸರಶೆಟ್ಟಿ, ಮಲ್ಲು ದುಮಗುಂಡಿ, ಸನಾ ಕೆಂಭಾವಿ, ನಾಗೇಶ ಡೋಣೂರಮಠ, ಬಬು ಬಡಗಣ, ವಿಠ್ಠಲ ಮೋಹಿತೆ, ಚನ್ನಮ್ಮ ತಂಗಡಗಿ, ರಾಜುಗೌಡ ಗುಂಡಕನಾಳ, ರೀಯಾಜ್ ಫಾರುಕೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.