ಮುದ್ದೇಬಿಹಾಳ: ಮಗಳ ಜನ್ಮದಿನ ಸ್ಮರಣೆಗೆ ಬೀದಿ ದೀಪ ಅಳವಡಿಸಿದ ತಂದೆ
Team Udayavani, Oct 23, 2021, 1:34 PM IST
ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಹೊಸ ಬಡಾವಣೆಯಾಗಿರುವ ಸ್ವಾಮಿ ವಿವೇಕಾನಂದ ನಗರವು ಪುರಸಭೆಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ, ಪುರಸಭೆಗೆ ಅಭಿವೃದ್ದಿ ಶುಲ್ಕ, ತೆರಿಗೆ ತುಂಬಿದರೂ ಪುರಸಭೆಯವರು ಈ ಬಡಾವಣೆಗೆ ರಸ್ತೆ, ಚರಂಡಿ, ವಿದ್ಯುತ್ ಸೌಕರ್ಯ ಕೊಡಲು ಮುಂದಾಗಿಲ್ಲ.
ಇದರಿಂದ ಬೇಸತ್ತ ನಿವಾಸಿಗಳು ತಾವೇ ತಮ್ಮಲ್ಲಿಯೇ ಚಂದಾ ಹಣ ಸಂಗ್ರಹಿಸಿ ತಾತ್ಕಾಲಿಕ ರಸ್ತೆ ಮಾಡಿಕೊಂಡಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಡಾವಣೆಯ ನಿವಾಸಿಗಳಲ್ಲಿ ಒಬ್ಬರಾಗಿರುವ ಬಸವ ಫ್ಲೆಕ್ಸ್ ಪ್ರಿಂಟರ್ಸ್ ಮಾಲಿಕ ಬಸವರಾಜ ಬಿರಾದಾರ ಅವರು ತಮ್ಮ ಮಗಳು ಸನ್ನಿಧಿಯ ಜನ್ಮದಿನದ ಸವಿ ನೆನಪಿಗಾಗಿ ಬಡಾವಣೆಯ ಎಲ್ಲ ವಿದ್ಯುತ್ ಕಂಬಗಳಿಗೆ ಪ್ರಖರ ಬೆಳಕು ನೀಡುವ ಬಲ್ಬ್ ಅಳವಡಿಸಿ ರಾತ್ರಿ ಬೆಳಕು ನೀಡಿದ್ದಾರೆ.
ಈ ಮಾದರಿ ಕಾರ್ಯವೂ ಅನೇಕರಿಗೆ ಪ್ರೇರಣೆ ನೀಡುವಂತಿದೆ. ಸ್ಥಳೀಯ ಆಡಳಿತ ಏನೂ ಮಾಡುತ್ತಿಲ್ಲ ಎಂದು ಬೇಸರಿಸಿಕೊಳ್ಳುವ ಬದಲು ಬಡಾವಣೆಯವರೆಲ್ಲರೂ ಸೇರಿ ಕೈಲಾದಷ್ಟು ಹಣ ಸಂಗ್ರಹಿಸಿ ತಾವೇ ಮೂಲ ಸೌಕರ್ಯ ಒದಗಿಸಿಕೊಳ್ಳಲು ಮುಂದಾದರೆ ಸ್ಥಳಿಯಾಡಳಿತಗಳು ನಾಚಿಕೆ ಪಡುವಂತಾಗುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಬರುವ ಸ್ಥಳೀಯಾಡಳಿತದ ಚುನಾವಣೆಗಳಲ್ಲಿ ಓಟು ಬೇಡಲು ಬರುವವರಿಗೂ ಪಾಠ ಕಲಿಸಲು ಅನುಕೂಲ ಆಗಬಹುದು ಎನ್ನುವ ಮಾತು ಇಲ್ಲಿ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.