ಕೊನೆಗೂ ಇಂದಿರಾ ಕ್ಯಾಂಟೀನ್‌ಗೆ ಚಾಲನೆ
Team Udayavani, Dec 8, 2018, 12:28 PM IST
ವಿಜಯಪುರ: ವಿಜಯಪುರ ಮಹಾನಗರದ ಜನರಿಗೆ ಕೊನೆಗೂ ಅಗ್ಗದ ದರದಲ್ಲಿ ಬಡವರಿಗೆ ಊಟ-ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್‌ಗೆ ಶುಕ್ರವಾರ ಮಹಾನಗರ ಪಾಲಿಕೆ ಆವರಣದಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಮಹಾನಗರ ಪಾಲಿಕೆ ಬಳಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದರು.
ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಡಾ| ದೇವಾನಂದ ಚವ್ಹಾಣ, ಮೇಯರ್ ಶ್ರೀದೇವಿ ಲೋಗಾಂವಿ, ಉಪ ಮೇಯರ್ ಗೋಪಾಲ ಘಟಕಾಂಬಳೆ, ಆಯುಕ್ತ ಔದ್ರಾಮ ಅವರು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮೊದಲ ದಿನದ ಮೊದಲ ಉಪಾಹಾರ ಸೇವಿಸಿದರು. ಇಡ್ಲಿ-ಸಾಂಬಾರ್, ಕೇಸರಿ ಬಾತ್ ಸವಿದ ಜನಪ್ರತನಿಧಿಗಳು ಉಪಾಹಾರ ಸೇವಿಸಿ ಗುಣಮಟ್ಟದ ಕುರಿತು ಸಂತೃಪ್ತಿ ವ್ಯಕ್ತಪಡಿಸಿದರು.
ನಗರದಲ್ಲಿ ಸೊಲ್ಲಾಪುರ ರಸ್ತೆ ಕೈಗಾರಿಕಾ ತರಬೇತಿ ಕೇಂದ್ರದ ಆವರಣ, ಎಪಿಎಂಸಿ ಆವರಣ, ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಈ ಎಲ್ಲ ಕ್ಯಾಂಟೀನ್ ಗಳಲ್ಲಿ ಇನ್ನು 5 ರೂ.ಗೆ ಉಪಾಹಾರ, 10 ರೂ.ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡುವ ವ್ಯವಸ್ಥೆಗೆ ಇದೆ. ಪ್ರತಿ ಕ್ಯಾಂಟೀನ್‌ನಲ್ಲಿ ತಲಾ 500 ಜನರಿಗೆ ಊಟ-ಉಪಾಹಾರದ ವ್ಯವಸ್ಥೆ ಇರಲಿದೆ.
ಕಲ್ಕೂರ ರೆಫ್ರೀಜ್‌ರೇಷನ್ ಮತ್ತು ಕಿಚನ್ ಇ ಪ್ರಕ್ಯೂರ್‌ವೆುಂಟ್ ಪ್ರೈ ಲಿಮಿಟೆಡ್ ಹಾಗೂ ಕುಮಾರ ಇ-ಪ್ರಕ್ಯೂರ್‌ವೆುಂಟ್ ಇಂಡಿಯಾ ಪ್ರೈ ಲಿಮಿಟೆಡ್ ಕಂಪನಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಬೃಹತ್ ಪ್ರೇಷರ್ ಕುಕ್ಕರ್, ಸ್ಟೀಮರ್, ಮಿಕ್ಸರ್ ಸೇರಿದಂತೆ ಪೂರಕವಾದ ಯಂತ್ರಗಳನ್ನು ಅಳವಡಿಸಿವೆ. ನಗರದಲ್ಲಿನ ಇಂದಿರಾ ಕ್ಯಾಂಟೀನ್‌ನ ಪ್ರತಿ ಕಟ್ಟಡಕ್ಕೆ 28 ಲಕ್ಷ ರೂ. ಹಾಗೂ ಅಡುಗೆ ಕೋಣೆ ನಿರ್ಮಾಣಕ್ಕೆ 48 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಆಹಾರ ಪೂರೈಕೆಗೆ ಪ್ರತಿ ವರ್ಷ 22,26,500 ರೂ. ವೆಚ್ಚದ ಅಂದಾಜಿದೆ. ಇದರಲ್ಲಿ ಶೇ. 30ರಷ್ಟು ಕಾರ್ಮಿಕ ಇಲಾಖೆ ಹಾಗೂ ಉಳಿದ ಮೊತ್ತವನ್ನು ಮಹಾನಗರ ಪಾಲಿಕೆ ಅನುದಾನ ಅಥವಾ ಎಸ್ ಎಫ್‌ಸಿ ಅನುದಾನದಡಿ ಒದಗಿಸುವ ಚಿಂತನೆ ನಡೆದಿದೆ ಎಂದು ಪಾಲಿಕೆ ಆಯುಕ್ತ ಡಾ| ಔದ್ರಾಮ
ತಾಂತ್ರಿಕ ವಿವರಣೆ ನೀಡಿದರು.
ಊಟ-ಉಪಾಹಾರದ ಮೆನು: ವಾರದ ಏಳು ದಿನವೂ ಒಂದೊಂದು ಉಪಾಹಾರ ಹಾಗೂ ವೈವಿಧ್ಯಮ ಊಟದ ಮೆನು ಇರಲಿದೆ. ಉಪಾಹಾರಕ್ಕೆ ಸೋಮವಾರ ಪುಳಿಯೋಗರೆ, ಮಂಗಳವಾರ ಖಾರಾಬಾತ್, ಬುಧವಾರ ಪೊಂಗಲ್, ಗುರುವಾರ ಕಿಚಡಿ, ಶುಕ್ರವಾರ ಚಿತ್ರಾನ್ನ, ಶನಿವಾರ ವಾಂಗಿಬಾತ್, ರವಿವಾರ ಕೇಸರಿಬಾತ್ ಇರಲಿದೆ. ಅದರಂತೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ, ತರಕಾರಿ, ಸಾಂಬಾರ್, ಮೊಸರನ್ನ ವಾರದ ಏಳು ದಿನಗಳು ಲಭ್ಯವಾಗುತ್ತಿದ್ದು, ಇದರೊಂದಿಗೆ ಆಯಾ ವಾರಕ್ಕೆ ನಿಗದಿಗೊಳಿಸಲಾಗಿರುವ ಮೆನುವಿನಂತೆ ಬೇರೆ ಬೇರೆ ಉಪಾಹಾರ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.