ಬಡ ವಿದ್ಯಾರ್ಥಿಗೆ ಆರ್ಥಿಕ ನೆರವು
Team Udayavani, Mar 29, 2021, 8:49 PM IST
ಮುದ್ದೇಬಿಹಾಳ : ದ್ವಿತೀಯ ವರ್ಷದ ಎಂಬಿಬಿಎಸ್ ಕೋರ್ಸ್‌ಗೆ ಶುಲ್ಕ ಕಟ್ಟಲು ಪರದಾಡುತ್ತಿದ್ದ ಮುದ್ದೇಬಿಹಾಳ ತಾಲೂಕು ಅಡವಿ ಹುಲಗಬಾಳದ ಬಡ ಕುಟುಂಬದ ವಿದ್ಯಾರ್ಥಿ ದ್ಯಾಮಣ್ಣ ಗುಂಡಕನಾಳಗೆ ಹಾಲುಮತ ಸಮಾಜದ ನೌಕರರು ಶುಲ್ಕಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಿದ್ದಾರೆ.
ಇದೇ ಸಂದರ್ಭ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಪಿ.ಸಿ. ಹೆಡಗಿನಾಳ ಅವರೂ ಸಹ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು. ಪಟ್ಟಣದ ಸಂತ ಕನಕದಾಸ ಶಾಲೆ ಆವರಣದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ್ದ ನೌಕರರ ಪರವಾಗಿ ವಿದ್ಯಾರ್ಥಿಗೆ ಚೆಕ್ ಹಸ್ತಾಂತರಿಸಿ ಮಾತನಾಡಿದ ಹಾಲುಮತ ನೌಕರರ ಸಂಘದ ಅಧ್ಯಕ್ಷ, ಸಮಾಜಕಲ್ಯಾಣ ಇಲಾಖೆಯ ವಾರ್ಡನ್ ಎಸ್.ಎಚ್. ಜೈನಾಪುರ ಅವರು, ಚಾಮರಾಜನಗರದ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದ ದ್ಯಾಮಣ್ಣಗೆ ಈ ವರ್ಷ ಶುಲ್ಕ ಕಟ್ಟಲು ಆರ್ಥಿಕ ಸಮಸ್ಯೆ ಉಂಟಾಗಿತ್ತು.
ಈತನ ಪಾಲಕರು ಹೊಟ್ಟೆಪಾಡಿಗಾಗಿ ದುಡಿಯಲು ಗೋವಾಕ್ಕೆ ಗುಳೇ ಹೋಗಿದ್ದಾರೆ. ಈತನ ಪರಿಸ್ಥಿತಿ ನಮ್ಮ ಗಮನಕ್ಕೆ ತಂದಾಗ ಕಾಳಿದಾಸ ಬ್ಯಾಂಕ್ ಹಾಗೂ ಹಾಲುಮತ ಸಮಾಜದ ನೌಕರರು ಆತನ ಶುಲ್ಕಕ್ಕೆ ಅಗತ್ಯವಾಗಿರುವ ಹಣವನ್ನು ಸಂಗ್ರಹಿಸಿ ನೆರವು ನೀಡಲು ತೀರ್ಮಾನಿಸಿ ಆತನಿಗೆ ನೆರವಾಗಿದ್ದೇವೆ ಎಂದರು.
ನೆರವು ಪಡೆದುಕೊಂಡು ಮಾತನಾಡಿದ ದ್ಯಾಮಣ್ಣ, ತಾನು ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನಲ್ಲಿ ಕಲಿತು ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆದುಕೊಂಡದ್ದನ್ನು ವಿವರಿಸಿ ತನ್ನ ಎರಡನೇ ವರ್ಷದ ಕಲಿಕೆಗೆ ಆರ್ಥಿಕ ನೆರವು ಒದಗಿಸಿರುವ ಸಮಾಜ ಬಾಂಧವರನ್ನು ಸದಾ ಸ್ಮರಿಸುವುದಾಗಿ ಮತ್ತು ವೈದ್ಯನಾದ ಮೇಲೆ ಬಡ ಜನರಿಗೆ, ಸಮಾಜದವರಿಗೆ ನೆರವಾಗುವುದಾಗಿ ತಿಳಿಸಿದರು.
ಕಾಳಿದಾಸ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಇಟಗಿ, ಪ್ರಮುಖರಾದ ಎಸ್.ಎಸ್. ಬಾಣಿ, ಎಂ.ಬಿ. ಹುಲಬೆಂಚಿ, ಜಿ.ಎನ್. ಗೌರೋಜಿ, ಎಂ.ಎ. ತಳ್ಳಿಕೇರಿ, ಐ.ಎಂ. ಉಂಡಿ, ರವಿ ಜಗಲಿ, ಬಸವರಾಜ ಗೊರಗುಂಡಗಿ, ಎಸ್. ವೈ. ವಗ್ಗರ, ಎಚ್.ಬಿ. ದಳವಾಯಿ, ಬಿ.ಕೆ. ಮುರಾಳ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.