ಗುಡಿಸಲಿಗೆ ಆಕಸ್ಮಿಕ ಬೆಂಕಿ: ವೃದ್ಧ ದಂಪತಿ ಸಜೀವ ದಹನ
Team Udayavani, Feb 26, 2023, 10:47 AM IST
ವಿಜಯಪುರ: ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ವಾಸವಿದ್ದ ವೃದ್ದ ದಂಪತಿ ಆಕಸ್ಮಿಕ ಅಗ್ನಿ ದುರಂತದಲ್ಲಿ ಸಜೀವ ದಹನವಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ.
ಚಡಚಣ ಪಟ್ಟಣದ ಹೊರ ವಲಯದ ಜಮೀನಿನ ಗುಡಿಸಲಿನಲ್ಲಿ ವಾಸವಿದ್ದ 82 ವರ್ಷದ ಮಕರೀಂಸಾಬ್ ಟಪಾಲ ಹಾಗೂ 72 ವರ್ಷದ ಸಾಜನಬೀ ಟಪಾಲ್ ಅಗ್ನಿ ದುರಂತದಲ್ಲಿ ಸಜೀವ ದಹನವಾದ ದುರ್ದೈವಿಗಳು.
ನೀವರಗಿ ರಸ್ತೆಯಲ್ಲಿನ ತಮ್ಮ ಜಮೀನಿನಲ್ಲಿ ಈ ವೃದ್ಧ ದಂಪತಿ ಗುಡಿಸಲು ಹಾಕಿಕೊಂಡು ವಾವಿದ್ದರು. ಶನಿವಾರ ವೃದ್ದ ದಂಪತಿ ಮಲಗಿದ್ದಾಗ ತಡರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೇಸಿಗೆಯ ಬಿಸಿಲ ಧಗೆ ಹೆಚ್ಚಿರುವ ಕಾರಣ ಗುಡಿಸಲಿಗೆ ಹೊತ್ತಿದ ಬೆಂಕಿ ಬೇಗನೇ ಇಡೀ ಗುಡಿಸಲು ಆವರಿಸಿದೆ ಎನ್ನಲಾಗಿದೆ. ಪರಿಣಾಮ ವೃದ್ಧ ದಂಪತಿ ಸಜೀವ ದಹನವಾಗಿದ್ದಾರೆ.
ಇದನ್ನೂ ಓದಿ:ಗೆಳತಿಗೆ ಮೆಸೇಜ್ ಮಾಡಿದಕ್ಕೆ ಸ್ನೇಹಿತನ ಶಿರಚ್ಛೇದ ಮಾಡಿ, ಹೃದಯವನ್ನು ಹೊರ ತೆಗೆದ ವ್ಯಕ್ತಿ
ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಧಾವಿಸಿರುವ ಚಡಚಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.