ವಿಜಯಪುರದಲ್ಲೂ ಹನಿಟ್ರ್ಯಾಪ್ ದಂಧೆ ಮಹಿಳೆ ಸೇರಿ ಐವರ ಬಂಧನ
Team Udayavani, Dec 7, 2019, 6:30 PM IST
ವಿಜಯಪುರ: ಚಿನ್ನದ ವ್ಯಾಪಾರಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ 15 ಲಕ್ಷ ರೂ. ವಸೂಲಿ ಮಾಡಿದ್ದ ನಾಲ್ವರ ತಂಡವನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಚಿನ್ನದ ವ್ಯಾಪಾರಿ ಬಳಿ ಚಿನ್ನ ಖರೀದಿಸಲು ಬಂದು ಪರಿಚಯ ಮಾಡಿಕೊಂಡ ಮಾಯಾಂಗನೆ ಒಬ್ಬಳು, ವ್ಯಾಪಾರಿಯನ್ನು ಮರಳು ಮಾಡಿ ಮನೆಗೆ ಕರೆಸಿಕೊಂಡು, ತನ್ನ ಸಹಚರರ ಮೂಲಕ ಬಲವಂತದಿಂದ ವ್ಯಾಪಾರಿಯ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಸಿದ್ದಾಳೆ. ನಂತರ ವಿಡಿಯೋ ತೋರಿಸಿ 25 ಲಕ್ಷ ರೂ. ಬೇಡಿಕೆ ಇಟ್ಟು, 15 ಲಕ್ಷ ರೂ. ಕಿತ್ತು ಕೊಂಡಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದೇ ಪದೇ ಪದೇ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ನಿಂತಾಗ ರೋಷಿಹೋದ ಚಿನ್ನದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಜಾಲವನ್ನು ಬಲೆಗೆ ಕೆಡವಿದ್ದಾರೆ.
ಆರೋಪಿ ಮಹಿಳೆ ದಾನಮ್ಮ ಹಿರೇಮಠ, ಈಕೆಗೆ ಹನಿಟ್ರ್ಯಾಪ್ ದಂಧೆಗೆ ಸಹಕರಿಸಿದ ಬಬಲೇಶ್ವರದ ರವಿ ಸಿದ್ಧರಾಯ ಕಾರಜೋಳ, ವಿಜಯಪುರದ ಸುಧೀರ ವಿವೇಕಾನಂದ ಘಟ್ಟೆಣ್ಣವರ, ಬೊಮ್ಮನಳ್ಳಿ ಯ ಮಲ್ಲಿಕಾರ್ಜುನ ಚನ್ನಪ್ಪ ಮುರಗುಂಡಿ, ಸಿಂದಗಿ ಶ್ರೀಕಾಂತ ಸೊಮಜಾಳ ಎಂದು ಗುರುತಿಸಲಾಗಿದೆ.
ಬಂಧಿತರಿಂದ 15 ಲಕ್ಷ ರೂಪಾಯಿ ನಗದು, ಒಂದು ಕಾರು, ಒಂದು ಸ್ಕೂಟಿ, ಕೃತ್ಯದಲ್ಲಿ ಬಳಸಿದ ಹರಳಿನ ಉಂಗುರ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಪ್ರಕಾಶ ನಿಕ್ಕಂ ಪತ್ರಿಕಾಗೋಷ್ಠಿಯಲ್ಲಿ ವಿವರಿದರು.
ಹನಿಟ್ರ್ಯಾಪ್ ನಡೆಸಿದ ಈ ತಂಡದ ಹಿನ್ನೆಲೆ ಕುರಿತು ಹಾಗೂ ಇವರಿಂದ ಇನ್ನೂ ಇಂಥ ಕೃತ್ಯಗಳು ನಡೆದಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಈ ತಂಡ ಅಥವಾ ಇಂಥಹ ಬೇರೆ ತಂಡದ ಮಾಯಾಜಾಲಕ್ಕೆ ಸಿಲುಕಿ ಸಂಕಷ್ಟ ಅನುಭಸಿದವರು ಪೊಲೀಸರಿಗೆ ದೂರು ನೀಡಬಹುದು. ಅಲ್ಲದೇ ಸಾರ್ವಜನಿಕರು ಕೂಡ ಪ್ರಚೋಧನೆಗೆ ಗುರಿ ಆಗಬಾರದು ಎಂದು ಎಸ್ಪಿ ಮನವಿ ಮಾಡಿದ್ದಾರೆ.
ಅಲ್ಲದೇ ಸದರಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ ನೇತೃತ್ದದ ತಂಡದ ಕಾರ್ಯವನ್ನು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.