ವಿಜಯಪುರ: ಭೀಮಾ ತೀರದ ತಾರಾಪುರ ಗ್ರಾಮಸ್ಥರನ್ನು ಬಲವಂತವಾಗಿ ಸ್ಥಳಾಂತರಿಸಿದ ಜಿಲ್ಲಾಡಳಿತ
Team Udayavani, Oct 16, 2020, 4:08 PM IST
ವಿಜಯಪುರ: ಜಿಲ್ಲೆಯ ಗಡಿಯಲ್ಲಿರುವ ಭೀಮಾ ತೀರದಲ್ಲಿ ಪ್ರವಾಹ ಪೀಡಿತ ತಾರಾಪುರ ಗ್ರಾಮಸ್ತರನ್ನು ಜಿಲ್ಲಾಡಳಿತ ಬಲವಂತವಾಗಿ ಸ್ಥಳಾಂತರ ಮಾಡಿದೆ.
ಭೀಮಾ ನದಿಗೆ ಮಹಾರಾಷ್ಟ್ರ ಉಜನಿ, ವೀರ ಜಲಾಶಯಗದಿಂದ ಗುರುವಾರ ಸಂಜೆಯಿಂದ 3.50 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಬಿಡಲಾಗಿದೆ. ಪರಿಣಾಮ ಭೀಮಾ ನದಿ ತೀರದ ಚಡಚಣ, ಇಂಡಿ, ಸಿಂದಗಿ ತಾಲ್ಲೂಕಿನ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಇದರ ಭಾಗವಾಗಿ ಆಲಮೇಲ ಪರಿಸರದಲ್ಲಿ ಸೊನ್ನ ಬ್ಯಾರೇಜಿನ ಹಿನ್ನೀರು ಪ್ರದೇಶದಲ್ಲಿರುವ ಸಿಂದಗಿ ತಾಲ್ಲೂಕಿನ ತಾರಾಪುರ ಗ್ರಾಮ ಕಳೆದ ನಾಲ್ಕು ದೇಶದ ದಿನಗಳಿಂದ ಜಲ ದಿಗ್ಬಂಧನಕ್ಕೊಳಗಾಗಿದೆ.
ಆದರೆ ಸೊನ್ನ ಬ್ಯಾಬೇಜ್ ಹಿನ್ನೀರಿನ ಮುಳುಗಡೆ ಪ್ರದೇಶ ಭೂ ಸ್ವಾಧೀನ, ಪರಿಹಾರ ವಿತರಣೆ, ನಿವೇಶನ ಹಂಚಿಕೆ ಸಂದರ್ಭದಲ್ಲಿ ಅನ್ಯಾಯವಾಗಿದೆ ಎಂದು ಗ್ರಾಮದ 240 ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹದ ನೀರು ನುಗ್ಗಿದರೂ ಗ್ರಾಮ ತೊರೆಯಲು ನಿರಾಕರಿಸುತ್ತಿವೆ.
ಇದನ್ನೂ ಓದಿ:ಸಿಗಂದೂರು ದೇವಾಲಯದಲ್ಲಿ ಎರಡು ಬಣಗಳ ನಡುವೆ ಪರಸ್ಪರ ಹಲ್ಲೆ: ಬಿಗುವಿನ ವಾತಾವರಣ
ಭೀಮಾ ತೀರದಲ್ಲಿ ಪ್ರವಾಹ ಗಂಭೀರ ಸ್ಥಿತಿ ತಲುಪಿದೆ. ಕಾರಣ ಸಿಂದಗಿ ತಹಶಿಲ್ದಾರ ಸಂಜೀವ ಕುಮಾರ್ ದಾಸರ ಅವರ ನೇತೃತ್ವದಲ್ಲಿ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಸಹಕಾರದಲ್ಲಿ ಕಾಳಜಿ ಕೇಂದ್ರಕ್ಕೆ ಸುಮಾರು 40 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ತಾರಾಪುರ ಪಕ್ಕದಲ್ಲಿರುವ ಕಡಣಿ ಗ್ರಾಮದ ಪಿ.ಬಿ. ಪ್ರೌಢ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.