ರಸ್ತೆಯಲ್ಲಿ ಹರಿಯುತ್ತಿದೆ ಮಲಮೂತ್ರ!
Team Udayavani, Sep 25, 2017, 2:51 PM IST
ತಾಳಿಕೋಟೆ: ಪಟ್ಟಣದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಮಲಮೂತ್ರ ರಸ್ತೆಯಲ್ಲಿ ಹರಿತೊಡಗಿದೆ.
ಪಟ್ಟಣದ ಎಪಿಎಂಸಿ ಮಾರ್ಕೇಟ್ ಯಾರ್ಡಿನ ಜನದಟ್ಟಣೆ ಇರುವ ಮುಖ್ಯರಸ್ತೆಯಲ್ಲಿಯೇ ಈ ಘಟನೆ ಜರುಗಿದ್ದು ದುರ್ವಾಸನೆಯಿಂದ ವರ್ತಕರು ಹಾಗೂ ರೈತರು ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಲ್ಲಿಯ ಶೌಚಾಲಯದ ಸಂಪರ್ಕವನ್ನು ಪಕ್ಕದಲ್ಲಿರುವ ಎಪಿಎಂಸಿ ಮಾರ್ಕೇಟ್ ಯಾರ್ಡಿನ ಮುಖ್ಯರಸ್ತೆಯಲ್ಲಿಯ ಚೇಂಬರ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಚೇಂಬರ್ ಒಮ್ಮಿಂದೊಮ್ಮಲೇ ಸ್ಫೋಟಗೊಂಡಿದ್ದ ಪರಿಣಾಮ ಮಲಮೂತ್ರವೆಲ್ಲವೂ ಹೊರಗಡೆ ಸಿಡಿದು ಉಕ್ಕಿ ಬರುತ್ತ ಮುಖ್ಯ ನಡುರಸ್ತೆಯಲ್ಲಿ ಹರಿಯತೊಡಗಿದೆ. ಚೇಂಬರ್ ನಿಂದ ಹೊರಬಿದ್ದ ಮಲಮೂತ್ರ ರಸ್ತೆಯಲ್ಲಿ ಹರಿಯುವುದರ ಜೊತೆಗೆ ಅಡತ್ ಅಂಡಿಗಳಿಗೆ ನುಗ್ಗುತ್ತಿದೆ. ದುರ್ವಾಸನೆಯಿಂದ ತಪ್ಪಿಸಿಕೊಳ್ಳಲು ವರ್ತಕರು ಪರದಾಡುತ್ತಾ ಸಾಗಿದ್ದರೇ ಇನ್ನೂ ಕೆಲವರು ದುರ್ವಾಸನಗೆ ಬೇಸತ್ತು ಅಂಗಡಿಗೆ ಬೀಗ ಹಾಕಿಕೊಂಡು ಹೊರಗಡೆಯಿಂದಲೇ ತಮ್ಮ ವಹಿವಾಟು ನಡೆಸಿದ್ದಾರೆ.
ಇದೇ ರಸ್ತೆಗುಂಟಾ ದಿನನಿತ್ಯ ಪಕ್ಕದಲ್ಲಿರುವ ಬಿಎಸ್‌ಎನ್ ಎಲ್ ಕಚೇರಿಗೆ ದಿನನಿತ್ಯ ಜನತೆ ಆಗಮಿಸುತ್ತಿದ್ದಾರೆ. ಅಲ್ಲದೇ
ಮತ್ತು ಭೋಗೇಶ್ವರ ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು ಈ ದುರ್ನಾತದ ಪರಿಣಾಮ ಆಗಮಿಸುವ ಶಾಲಾ ಮಕ್ಕಳು
ಮತ್ತು ಮಹಿಳೆಯರು ಹಾಗೂ ಜನತೆ ಅಸಹ್ಯ ಪಟ್ಟುಕೊಂಡು ತಿರುಗಾಡುವಂತೆ ಮಾಡಿದೆ.
ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರಲ್ಲದೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಒಳಚರಂಡಿ ಮಂಡಳಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಥರ್ಡ್ ಪಾರ್ಟಿಯಿಂದ ಕಾಮಗಾರಿ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖೀತ ಭರವಸೆ ನೀಡಿದ್ದರು.
ಆದರೆ ಥರ್ಡ್ ಪಾರ್ಟಿ ಕೆಲೆವೆಡೆ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೆಲವು ಜಾಗೆಗಳನ್ನು ಗುರುತಿಸಿ ಕೊಟ್ಟಿದ್ದರು. ಆದರೆ ಥರ್ಡ್ ಪಾರ್ಟಿ ನೀಡಿದವರಗೂ ಬೆಲೆ ನೀಡದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮೂಗಿಗೆ ತುಪ್ಪ ಸವರಿದಂತೆ ಸರಿಪಡಿಸುವ ಭರವಸೆ ನೀಡಿದರು. ಆದರೆ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯಲಿಲ್ಲ. ಕಾಮಗಾರಿ ಅಪೂರ್ಣಗೊಂಡಿದೆ ಎಂಬ ಹಿನ್ನೆಲೆ ಇನ್ನೂ ಒಳಚರಂಡಿಯ ಉಸ್ತುವಾರಿಯನ್ನು ಪುರಸಭೆ ಕೂಡಾ ವಹಿಸಿಕೊಂಡಿಲ್ಲ.
ಸುಮಾರು ಎರಡು ತಿಂಗಳ ಹಿಂದೆ ಪಟ್ಟಣದ ಸಂಗಮ ಲಾಡ್ಜ್ ಹತ್ತಿರವೂ ಇದೇ ತರಹದ ಛೇಂಬರ್ ಸ್ಫೋಟಗೊಂಡು
ಮುಖ್ಯರಸ್ತೆಯಲ್ಲಿಯೇ ಮಲಮೂತ್ರ ಹರಿದು ಜನತೆ ಪ್ರತಿಭಟನೆ ಹಾದಿ ಹಿಡಿಯುವ ಹೊತ್ತಿಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿ ಕಾರಿಗಳು ಭೇಟಿ ನೀಡಿ ದುರಸ್ತಿಗೊಳಿಸಿ ತೆರಳಿದ್ದರು. ಆದರೆ ತಿಂಗಳ ಹೊತ್ತಿಗೆ ಮತ್ತೂಂದು ಛೇಂಬರ್ ಸ್ಫೋಟಗೊಂಡಿರುವುದು ಒಳಚರಂಡಿ ಕಾಮಗಾರಿ ಕಳಪೆ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.