ಸಾಹಿತ್ಯದ ತಾಯಿಬೇರು ಜಾನಪದ
Team Udayavani, Jan 23, 2018, 3:59 PM IST
ಇಂಡಿ: ಕರ್ನಾಟಕ ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ. ಕನ್ನಡ ನಾಡಿಗೆ ಅನೇಕ ಕವಿಗಳು,
ಸಾಹಿತಿಗಳು ದಿಗ್ಗಜರು ಸಾಹಿತ್ಯದ ರಸದೌತಣ ನೀಡಿ ನಾಡಿನ ಉಸಿರಾಗಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿಯಲ್ಲಿ ಕನ್ನಡ ಜಾನಪದ ಪರಿಷತ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಫೆಬ್ರವರಿ 25ರಂದು ಇಂಡಿ ತಾಲೂಕು ಮಟ್ಟದ ಕನ್ನಡ ಜಾನಪದ ಸಮ್ಮೇಳನ ಸಾಲೋಟಗಿಯಲ್ಲಿ ಹಮ್ಮಿಕೊಂಡಿದ್ದು ಶ್ಲಾಘನೀಯ. ಈ ಹಿಂದೆ ಕಸಾಪ ಸಮ್ಮೇಳನ ಮಾಡಿ ಕನ್ನಡದ ಸವಿಯನ್ನು ತಾಲೂಕಿನಾದ್ಯಂತ ಪಸರಿಸಿ ಕನ್ನಡದ ಭಾಷೆ ಬಗೆಗೆ ಜಾಗೃತ ಮಾಡಿರುವದು ತಾಲೂಕಿಗೆ ಸಂದಗೌರವ ಎಂದರು.
ಜಾನಪದ ಸಾಹಿತ್ಯ ಎಲ್ಲ ಸಾಹಿತ್ಯಗಳ ತಾಯಿ ಬೇರು. ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರು ಪ್ರತಿಯೊಂದು
ಕೆಲಸ ಮಾಡುವಾಗ ಹಾಡುವ ಮೂಲಕ ತಮ್ಮ ಆಯಾಸ ಕಳೆದುಕೊಳ್ಳುತ್ತಿದ್ದರು. ಇಂದು ಅಧುನಿಕ ಪ್ರಪಂಚದ ಸೆಳೆತಕ್ಕೆ ಸಿಕ್ಕು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ನಮ್ಮ ಶ್ರೀಮಂತ ಜಾನಪದ ಸಾಹಿತ್ಯ ಮರೀಚಿಕೆಯಾಗುತ್ತಿದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಜಾನಪದ ಗ್ರಾಮಿಣ ಭಾಗದಲ್ಲಿ ಹುಲಸಾಗಿ ಬೆಳೆದಿರುವ
ಸಾಹಿತ್ಯವಾಗಿದೆ. ಅಂದು ತಾಯಂದಿಯರು ತಮ್ಮ ಮಕ್ಕಳನ್ನು ಸಂತೈಸುವಾಗ ಸೊಗಸಾದ ಜಾನಪದಗಳನ್ನು ಹಾಡಿ
ಮಲಗಿಸುತ್ತಿದ್ದರು. ಇಂತಹ ಸಾಹಿತ್ಯ ಮತ್ತೆ ಬೆಳೆಸಬೇಕಾಗಿದೆ. ನಾಡು, ನುಡಿ, ಭಾಷೆ ಧಾರ್ಮಿಕತೆಗೆ ಯಾವತ್ತೂ ನನ್ನ ಸಹಾಯ ಸಹಕಾರವಿದೆ ಎಂದರು.
ಸಾಲೋಟಗಿ ಜಿಪಂ ಸದಸ್ಯ ಮತ್ತು ಕಜಾಪ ಕಾರ್ಯಾಧ್ಯಕ್ಷ ಶಿವಯೋಗೇಪ್ಪ ನೇದಲಗಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಬೇಕು. ಸಮ್ಮೇಳನ ಯಶಸ್ವಿಯಾಗಲು ಮೇಲಿಂದ ಮೇಲೆ ಸಭೆಗಳನ್ನು ನಡೆಸಬೇಕು. ಎಲ್ಲ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿ ಜಾನಪದ ಮರು ಕುರುಹುಗಳನ್ನು ಮನ ಮುಟ್ಟುವಂತೆ ತಿಳಿ ಹೇಳಬೇಕು ಎಂದರು.
ಈ ಸಂದರ್ಭದಲ್ಲಿ ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಗೌರವಾಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಕಾರ್ಯದರ್ಶಿ
ಸಿ.ಆರ್. ಮ್ಯಾಕೇರಿ, ಜಿಲ್ಲಾ ಸದಸ್ಯ ಎಂ.ಪಿ. ಭೈರಜಿ, ಆರ್.ಡಿ. ಕಂಡಾಳ, ಬಿ.ಐ. ಬಿರಾದಾರ, ಕೆ.ಎ. ತೆಲಸಂಗ,
ಎಸ್.ಎಸ್. ಈರನಕೇರಿ, ಆರ್.ಎಸ್. ಪಾಟೀಲ, ಎನ್.ಎ. ಬಿರಾದಾರ, ಎಂ.ಎಸ್. ಪಾಟೀಲ, ಎಸ್.ಬಿ.
ಜಮಾದಾರ, ಎನ್.ಎಲ್. ಹಚಡದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.