ಫುಟ್‌ಪಾತ್ ಅತಿಕ್ರಮಣ
Team Udayavani, Apr 2, 2019, 3:33 PM IST
ಇಂಡಿ: ಕಳೆದ ಒಂದೂವರೆ ವರ್ಷದ ಹಿಂದೆ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಸುಮಾರು 5 ಕೋಟಿ ವೆಚ್ಚದಲ್ಲಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ್ತೆ ಅಗಲೀಕರಣಗೊಳಿಸಿ ಫುಟ್‌ಪಾತ್ ನಿರ್ಮಿಇಸಿದ್ದರೂ ವ್ಯಾಪಾರಿಗಳ ಅತಿಕ್ರಮಣದಿಂದ ಫುಟ್‌ಪಾತ್ ಎಲ್ಲಿದೆ
ಎಂಬುದೇ ತಿಳಿಯದಂತಾಗಿದೆ.
ಪಟ್ಟಣದ ಬಸವೇಶ್ವರ ವೃತ್ತದಿಂದ ಸ್ಟೇಶನ್ ರಸ್ತೆ ಹಳ್ಳದವರೆಗೆ ಮಾರ್ಗ ನಿರ್ಮಿಸಿ ಕಬ್ಬಿಣದ ಗ್ರಿಲ್ ಅಳವಡಿಸಲಾಗಿತ್ತು. ಪಾದಚಾರಿಗಳಿಗೆ ಅನುಕೂಲವಾಗಬೇಕು, ವಾಹನ ಸವಾರರಿಂದ ಪಾದಚಾರಿಗಳಿಗೆ ತೊಂದರೆಯಾಗಬಾರದು ಎಂಬ ಸುದ್ದೇಶದಿಂದ ಫುಟ್‌ಪಾತ್ ನಿರ್ಮಿಸಿದ್ದು, ಸದ್ಯ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಫುಟ್‌ಪಾತ್ ಮಾಯವಾಗಿದೆ.
ಫುಟ್‌ಪಾತ್ ಮೇಲೆ ಡಬ್ಟಾ ಅಂಗಡಿಗಳು ತಲೆ ಎತ್ತಿವೆ. ಕೆಲ ಅಂಗಡಿಕಾರರು ಫುಟ್‌ಪಾತ್ ಮೇಲೆ ತಮ್ಮ ಅಂಗಡಿ ಸಾಮಾನುಗಳನ್ನು ಫುಟ್‌ಪಾತ್ ಮೇಲಿರಿಸಿ ಪಾದಚಾರಿಗಳು ಫುಟ್‌ಪಾತ್ ಮೇಲೆ ಹಾಯದಂತೆ ತಡೆಯೊಡ್ಡಿದ್ದಾರೆ. ಪಟ್ಟಣದ ಮುಖ್ಯ ರಸ್ತೆಗಳ ಅಭಿವೃದ್ದಿಗೆ ಖರ್ಚಾದ ಹಣ ಲೆಕ್ಕ ಹಾಕುತ್ತ ಹೋದರೆ ಸರ್ಕಾರದ ಅನುದಾನ ನಾಗರಿಕರಿಗೆ ಅನಕೂಲವಾಗುವ ರೀತಿಯಲ್ಲಿ ಖರ್ಚು ಮಾಡಿದರೂ
ಆ ಕಾಮಗಾರಿಗಳ ಪ್ರಯೋಜನ ಸಾರ್ವಜನಿಕರಿಗೆ ಮರೀಚಿಕೆಯಾಗಿದೆ. ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ಇಂಡಿ ಪಟ್ಟಣವನ್ನು ಸೌಂದಯೀಕರಣ ಮಾಡುವ ಉದ್ದೇಶದಿಂದ ಶಾಸಕರ ವಿಶೇಷ ಅನುದಾನ ಸೇರಿದಂತೆ ನಗರೋತ್ಥಾನ ಯೋಜನೆಯಡಿಯಲ್ಲಿ ಅಂದಾಜು 5 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡಿ ಪಾದಚಾರಿ ರಸ್ತೆ ನಿರ್ಮಿಸಲಾಗಿದೆ.
ಆದರೆ ಇದೇ ಪಾದಚಾರಿ ರಸ್ತೆಗಳ ಮೇಲೆ ಡಬ್ಟಾ ಅಂಗಡಿಕಾರರು ಹಾಗೂ ಇನ್ನಿತರ ಅಂಗಡಿಕಾರರು
ತಮ್ಮ ಅಂಗಡಿಗಳ ಮುಂದೆ ತಮ್ಮ ಸಾಮಾನುಗಳನ್ನಿಟ್ಟು ಪಾದಚಾರಿಗಳು ನಡೆದಾಡದಂತೆ ಮಾಡಿದ್ದಾರೆ. ಅನಿವಾರ್ಯವಾಗಿ ಪಾದಚಾರಿಗಳು ವಾಹನ ದಟ್ಟಣೆಯ ಮುಖ್ಯ ರಸ್ತೆ ಮೇಲೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ
ಸಮಸ್ಯೆ ಪರಿಹರಿಸುವರೇ ಕಾದು ನೋಡೋಣ.
ಕೋಟ್ಯಂತರ ರೂ. ಖರ್ಚು ಮಾಡಿ ಪಾದಚಾರಿಗಳ ಅನುಕೂಲಕ್ಕಾಗಿ ನಿರ್ಮಿಸಿದ ಫುಟ್‌ಪಾತ್ ಮೇಲೆ
ವ್ಯಾಪಾರಸ್ಥರು ಡಬ್ಟಾ ಅಂಗಡಿಗಳನ್ನಿಟ್ಟು ಅತಿಕ್ರಮಣ ಮಾಡಿದ್ದಾರೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಸುಮ್ಮನಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ.
ಮಲ್ಲಿಕಾರ್ಜುನ ಆಳೂರ, ಸ್ಥಳೀಯ ನಿವಾಸಿ
ಫುಟ್‌ಪಾತ್ ಅತಿಕ್ರಮಣವಾಗಿದೆ. ಪುರಸಭೆ ಅಧಿಕಾರಿಗಳು ಇದ್ದೂ ಸತ್ತಂತೆ ವರ್ತಿಸುತ್ತಿದ್ದಾರೆ.
ಅತಿಕ್ರಮಣವಾದ ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಬೇಕು.
ಪ್ರವೀಣ ತಾಂಬೆ, ಸ್ಥಳೀಯ ನಿವಾಸಿ
ನಾನು ಕೆಲಸಕ್ಕೆ ಹಾಜರಾಗಿ ಎರಡು ದಿನವಾಯಿತು. ಫುಟ್‌ಪಾತ್ ಅತಿಕ್ರಮಣದ ಬಗ್ಗೆ ನನ್ನ ಗಮನಕ್ಕಿಲ್ಲ.
ನೀವು ಹೇಳಿದ ಮೇಲೆಯೇ ನನಗೆ ನನಗೆ ಗೊತ್ತಾಗಿದೆ. ಈ ಕುರಿತು ಪರಿಶೀಲಿಸುತ್ತೇನೆ.
ಬಾಬುರಾಯ ವಿಭೂತಿ, ಪುರಸಭೆ ಮುಖ್ಯಾಧಿಕಾರಿ
ಫುಟ್‌ಪಾತ್ ಸಂಪೂರ್ಣ ಪುರಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಈಗಾಗಲೆ ಒಮ್ಮೆ ಪುರಸಭೆಯವರು
ಬಂದೋಬಸ್ತ್ಗಾಗಿ ನಮ್ಮ ಸಹಾಯ ಕೇಳಿದ್ದರು. ಆಗ ನಾವು ನಮ್ಮ ಸಿಬ್ಬಂದಿ ಕಳುಹಿಸಿ ಕೊಟ್ಟು ಫುಟ್‌ಪಾತ್ ಜಾಗ ಖಾಲಿ ಮಾಡಿಸಿದ್ದೇವು. ಈಗ ಅವರು ನಮ್ಮ ಸಹಾಯ ಕೇಳಿಲ್ಲ.
ರವಿ ಯಡವಣ್ಣವರ, ನಗರ ಠಾಣೆ ಪಿಎಸೈ
ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.