ಶರಣರಿಂದ ಎಲ್ಲ ವರ್ಗಕ್ಕೆ ದಕ್ಕಿದೆ ಸಾಹಿತ್ಯ: ಪ್ರೊ| ಸಿದ್ದರಾಮಯ್ಯ
Team Udayavani, Jun 19, 2018, 4:11 PM IST
ವಿಜಯಪುರ: ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿದ್ದ ಸಾಹಿತ್ಯ ಜನಸಾಮಾನ್ಯರ ಅಭಿವ್ಯಕ್ತಿಗೆ ಸಹಕಾರಿ ಆಗಿದ್ದು 12ನೇ ಶತಮಾನದ ಬಸವಾದಿ ಶರಣರ ಅಕ್ಷರ ಹಾಗೂ ವೈಚಾರಿಕ ಕ್ರಾಂತಿಯಿಂದ. ಹೀಗಾಗಿ ವಚನ ಸಾಹಿತ್ಯ ಜಗತ್ತಿಗೆ ಕನ್ನಡ ನಾಡು ಕೊಟ್ಟ ಶ್ರೇಷ್ಠ ಕೊಡುಗೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೋ| ಎಸ್.ಜಿ. ಸಿದ್ದರಾಮಯ್ಯ ಬಣ್ಣಿಸಿದರು.
ನಗರದ ಬಿಎಲ್‌ಡಿಇ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಭವನದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಶಶಿಕಲಾ ಹುಡೇದ ಅವರ ಮೃಧ್ವಂಗಿ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, 12ನೇ ಶತಮಾನದ ಶರಣ ಚಳವಳಿ ಉಪ ಉತ್ಪನ್ನವಾದ ವಚನ ಸಾಹಿತ್ಯ ಸಮಾಜದ ಕಟ್ಟಕಡೆ ಸದಸ್ಯೆ ಎನಿಸಿದ್ದ ಸೂಳೆಗೂ ಸಮಾನ ಸ್ಥಾನ ನೀಡಿ, ವಚನಗಳನ್ನು ಸೃಷ್ಟಿಸುವ ಶಕ್ತಿ ರೂಪುಗೊಂಡುದು ಸಾರ್ವಕಾಲಿಕ ಶ್ರೇಷ್ಠ ಕ್ರಾಂತಿ ಎಂದು ಅಭಿಪ್ರಾಯಪಟ್ಟರು.
ಆದರೆ 12ನೇ ಶತಮಾನದಲ್ಲಿ ವೈಚಾರಿಕ ಪ್ರಜ್ಞೆಯಿಂದ ಸಮಾಜದಲ್ಲಿ ಕ್ರಾಂತಿ ಜ್ವಾಲೆ ವಚನ ಸಾಹಿತ್ಯದಿಂದ ಮೂಡಿ ಬಂದರೂ, ಭವಿಷ್ಯದಲ್ಲಿ ಸಮಾಜ ವಚನ ಸಾಹಿತ್ಯವನ್ನು ಸೃಷ್ಠಿಸಲೇ ಇಲ್ಲ. ಮತ್ತೆ ಜನ ಸಾಮಾನ್ಯರು ಹೆಚ್ಚಿನ ಪ್ರಮಾಣದಲ್ಲಿ ವಚನ ಸಾಹಿತ್ಯ ಸೃಷ್ಠಿಗೆ ಮುಂದಾಗಲೇ ಇಲ್ಲ. 20ನೇ ಶತಮಾನದಲ್ಲಿ ಮಾತ್ರ ಮತ್ತೆ ಅದರ ಚಿಂತನೆ-ರಚನೆ ಆರಂಭಗೊಂಡವು ಎಂದು ವಿವರಿಸಿದರು.
ಶರಣ ಚಳವಳಿ ಜನ ಸಾಮಾನ್ಯರ ಚಳವಳಿ, ಅದು ಶಿಷ್ಟ ಪರಂಪರೆಗಳಿಂದ ನಮ್ಮನ್ನು ರಕ್ಷಿಸಿ ಪ್ರತಿಯೊಬ್ಬರಲ್ಲಿ ಕಾಯಕ ಸಿದ್ಧಾಂತ ತುಂಬಿ ಆತ್ಮ ವಿಶ್ವಾಸದಿಂದ ಮುನ್ನಡೆಸಿದ ಚಳವಳಿ. ಇಂತಹ ಚಳವಳಿ ಸಮಾಜದ ಎಲ್ಲ ತಳ ಸಮುದಾಯಗಳು ಗುರುತಿಸಿಕೊಂಡಿದ್ದವು. ಇವರು ಬರೆದ ಸಾಹಿತ್ಯವನ್ನು ಸಂಸ್ಕರಿಸಿ, ಪ್ರಕಟಿಸಿದ ಡಾ| ಫ.ಗು. ಹಳಕಟ್ಟಿ ಶ್ರೇಷ್ಠರು ಎಂದರು. ಕೃತಿ ಪರಿಚಯ ಮಾಡಿದ ಸಾಹಿತಿ ಡಾ| ಶುಭಾ ಮರವಂತೆ ಅವರು, ಮೃಧ್ವಂಗಿ ಕೃತಿಯಲ್ಲಿ ಶಶಿಕಲಾಅವರು ಸ್ತ್ರೀ ಸಂವೇದನೆ ಸೂಕ್ಷ್ಮತೆಯನ್ನು ಹಿಡಿದಿಟ್ಟಿದೆ. ಲಂಕೇಶ ಅವರ ತಾಯಿ ಕುರಿತು ಅವ್ವ ಎಂಬ ಕವನವನ್ನು ಬರೆದಿದ್ದರು. ಕನ್ನಡ ಸಾಹಿತ್ಯದಲ್ಲಿ ಅದು ಶ್ರೇಷ್ಠ ಪದ್ಯವಾಗಿದೆ. ಶಶಿಕಲಾರ ಅವರು ಸಹ ತಾಯಿು ಬಗ್ಗೆ ಬರೆದ ಪದ್ಯ ಅಷ್ಟೇ ಶ್ರೇಷ್ಠವಾಗಿದೆ ಎಂದರು.
ಡಾ| ಮಹಾಂತೇಶ ಬಿರಾದಾರ ಮಾತನಾಡಿ, ಸರ್ಕಾರಿ ಅಧಿಕಾರಿಗಳು ತಮ್ಮ ಕಾರ್ಯ ಒತ್ತಡದ ನಡುವೆ ಸಾಹಿತ್ಯ
ರಚಿಸುವುದು ಕಷ್ಟ ಸಾಧ್ಯ. ತಮ್ಮ ಇಲಾಖೆ ಕರ್ತವ್ಯದ ಒತ್ತಡದ ಮಧ್ಯೆಯೂ ಶಶಿಕಲಾ ಅತ್ತುತ್ಯಮ ಕೃತಿ ರಚಿಸಿದ್ದಾರೆ. ಸ್ತ್ರೀ ಸಂವೇದನೆ ಬರಹಗಳ ಮೂಲಕ ತಮ್ಮನ್ನು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಅವರು, ಭಷವಿಷ್ಯದಲ್ಲೂ ಕಥೆ, ಕಾದಂಬರಿ ಸಾಹಿತ್ಯದ ಕಡೆಗೂ ಚಿತ್ತ ನೆಡಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ಭೂಮಿಗೌಡ ಮಾತನಾಡಿ, ದಲಿತ ಕವಿ ಎಂದೇ ಕರೆಸಿಕೊಂಡ
ಸಿದ್ದಲಿಂಗಯ್ಯ ಅವರು ಇಕ್ರಲಾ, ಒದಿರ್ಲಾ ಎಂದು ಬರೆದಾಗ ಇದು ಸಾಹಿತ್ಯವೇ ಎಂದು ಮೂಗು ಮುರಿದ, ಐಷಾರಾಮಿ ಸಾಹಿತಿಗಳು ವ್ಯಂಗ್ಯವಾಡಿದ್ದರು. ಆದರೆ ಈ ಶಬ್ದಗಳೇ ಹೊಸ ಪಥದ ಸಾಹಿತ್ಯ ರಚನೆಗೆ ಮುನ್ನುಡಿ ಬರೆದವು ಎಂಬುದು ಈಗ ಇತಿಹಾಸ ಎಂದು ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ| ಸುನಂದಮ್ಮ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಾನಪದ ಕವಿ ಸಿದ್ದಪ್ಪ ಬಿದರಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಪ್ಪಂದಿರ ದಿನಾಚರಣೆ ಸ್ಮರಣೆಗಾಗಿ ವಿವಿಧ ವೃತ್ತಿ ಜೀವನದಲ್ಲಿರುವ 6 ಜನ ಹುಡೇದ ಸಹೋದರಿಯರು ತಮ್ಮ ತಂದೆ ವಿ.ಜಿ. ಹುಡೇದ ಅವರನ್ನು ಸನ್ಮಾನಿಸಿದರು. ದ್ರಾಕ್ಷಾಯಿಣಿ ಬಿರಾದಾರ ಸ್ವಾಗತಿಸಿದರು. ದ್ರಾಕ್ಷಾಯಿಣಿ
ಹುಡೇದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.