ಗಡಿಸೋಮನಾಳದಲ್ಲಿ ದುರ್ನಾತಕ್ಕೆ ಬೇಸತ್ತ ಜನ
ಜಮೀನಿನ ಮಾಲಿಕರು ಒಡ್ಡು ಕಟ್ಟಿಕೊಂಡಿದ್ದರಿಂದ ಕೊಳಚೆ ನೀರೆಲ್ಲವೂ ಇಲ್ಲಿಯೇ ನಿಂತಿಕೊಂಡಿದೆ.
Team Udayavani, Feb 8, 2021, 5:52 PM IST
ತಾಳಿಕೋಟೆ: ಇಡಿ ಊರಿನ ಜನರೇ ಬಳಕೆ ಮಾಡಿ ಚರಂಡಿಗೆ ಹರಿಬಿಟ್ಟಿರುವ ಕೊಳಚೆ ನೀರು ಈಗ ಪರಿಶಿಷ್ಟ ಜಾತಿ ಬಡಾವಣೆ ಜನರಿಗೆ ದುರ್ವಾಸನೆಯ ಜೊತೆಗೆ
ರೋಗಕ್ಕೆ ತುತ್ತಾಗುವಂತಹ ಪರಸ್ಥಿತಿ ಬಂದಿದ್ದು ನಿತ್ಯ ಇಲ್ಲಿಯ ಜನ ಮೂಗು ಮುಚ್ಚಿಕೊಂಡು ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದೊದಗಿದೆ.
ತಾಲೂಕಿನ ಕೊಡಗಾನೂರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗಡಿಸೋಮನಾಳ ಗ್ರಾಮದ ಪರಶಿಷ್ಟ ಜಾತಿ ಬಡಾವಣೆಯ ಕೆಂಚಮ್ಮದೇವಿ ದೇವಸ್ಥಾನದ ಮುಂದುಗಡೆ ಚರಂಡಿಯ ಕೊಳಚೆ ನೀರು ಹೊಂಡವಾಗಿ ಮಾರ್ಪಟ್ಟಿದೆ. ನಿತ್ಯ ಇಲ್ಲಿ ವಾಸಿಸುವ ನೂರಾರು ಕುಟುಂಬಗಳು ಈ ದುರ್ನಾತಕ್ಕೆ ಬಡಾವಣೆಯನ್ನೇ ತ್ಯಜಿಸುವಂತಹ ಪ್ರಸಂಗ ಈಗ ಬಂದೊದಗಿದೆ.
ಗ್ರಾಮದಲ್ಲಿಯೇ ಎಲ್ಲ ಜನರು ಉಪಯೋಗಿಸಿ ಚರಂಡಿಗೆ ಹರಿಬಿಟ್ಟಿರುವ ಕೊಳಚೆ ನೀರು ಇದೆ ಬಡಾವಣೆ ಮೂಲಕ ಹರಿದು ಹೋಗುತ್ತಿತ್ತು. ಆದರೆ ಹರಿದು ಹೋಗುವ ನೀರು ಗ್ರಾಮದ ಖಾಸಗಿ ಮಾಲಿಕರ ಜಮೀನಿನಲ್ಲಿ ಶೇಖರಣೆಯಾಗಿ ಇಂಗುವಂತಹ ವ್ಯವಸ್ಥೆ ಮೊದಲಿನಿಂದ ಇತ್ತು. ಆದರೆ ಸದ್ಯ ಖಾಸಗಿ ಜಮೀನಿನ ಮಾಲಿಕರು ಚರಂಡಿಯ ಕೊಳಚೆ ನೀರು ನಮ್ಮ ಜಮೀನಿನಲ್ಲಿ ತೆಗೆದುಕೊಳ್ಳುವದಿಲ್ಲವೆಂದು ಒಡ್ಡು ಹಾಕಿ ತಡೆಗೋಡೆ ಕಟ್ಟಿದ್ದರಿಂದ 2 ತಿಂಗಳಿನಿಂದ ಈ ಬಡಾವಣೆಯಲ್ಲಿ ಶೇಖರಣೆಯಾಗಿ ದುರ್ನಾಥಕ್ಕೆ ಕಾರಣವಾಗಿದೆ. ಈ ಕೊಳಚೆ ನೀರು ಬಡಾವಣೆಯ ಎಲ್ಲ ಜನರ ಮನೆ ಮುಂದೆ ಹೊಂಡವಾಗಿ ನಿರ್ಮಾಣವಾಗಿದೆ.
ಬಡಾವಣೆಯಲ್ಲಿ ಕೆಂಚಮ್ಮ ದೇವಸ್ಥಾನವಿದ್ದು ನೂರಾರು ಭಕ್ತಾ ದಿಗಳು ಬರುವದು ಸಾಮಾನ್ಯ. ಆದರೆ ಈ ದೇವಸ್ಥಾನದ ಮುಂದುಗಡೆಯೇ ಕೊಳಚೆ ನೀರು ಶೇಖರಣೆಗೊಂಡಿದ್ದರಿಂದ 2 ತಿಂಗಳಿನಿಂದ ಈ ದೇವಸ್ಥಾನದ ಹತ್ತಿರ ಯಾರೂ ಕೂಡಾ ಸುಳಿದಿಲ್ಲವೆಂದು ಬಡಾವಣೆಯ ಜನರು ಪತ್ರಿಕೆ ಮುಂದೆ ತಮ್ಮ ಅಳಲು
ತೋಡಿಕೊಂಡಿದ್ದಾರೆ. ಕೂಡಲೇ ಕೊಳಚೆ ನೀರು ತೆರವುಗೊಳಿಸಬೇಕು. ಇಲ್ಲದಿದ್ದರೆ ಈ ದುರ್ನಾತದಿಂದ ಆಗುವ ಅನಾಹುತಗಳಿಗೆ ಅಧಿಕಾರಿಗಳನ್ನೇ
ಹೊಣೆಗಾರರನ್ನಾಗಿ ಮಾಡಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಡಾವಣೆ ನಾಗರಿಕರಾದ ಶಿವಪ್ಪ ಮಾದರ, ಗುರಪ್ಪ ಮಾದರ, ಬಸಪ್ಪ ಮಾದರ, ಚನ್ನಪ್ಪ ಮಾದರ, ಜಟ್ಟೆಪ್ಪ ಮಾದರ, ಮಲ್ಲಪ್ಪ ಮಾದರ, ಗುರಪ್ಪ ಮಾದರ, ಸಿದ್ದಪ್ಪ ಮಾದರ, ಯಲಗೂರಪ್ಪ ಮಾದರ, ಸತ್ಯವ್ವ ಮಾದರ, ಸಂಗಪ್ಪ ಮಾದರ, ಶಾಂತಮ್ಮ ಮಾದರ, ದುರ್ಗಪ್ಪ ಮಾದರ ಎಚ್ಚರಿಸಿದ್ದಾರೆ.
ಗಡಿಸೋಮನಾಳ ಗ್ರಾಮದ ಎಲ್ಲ ಮನೆಗಳ ಕೊಳಚೆಯ ಚರಂಡಿ ನೀರು ನಮ್ಮ ಬಡಾವಣೆ ಮೂಲಕವೇ ಹರಿದು ಹೋಗುತ್ತಿತ್ತು. ಜಮೀನಿನ ಮಾಲಿಕರು ಒಡ್ಡು
ಕಟ್ಟಿಕೊಂಡಿದ್ದರಿಂದ ಕೊಳಚೆ ನೀರೆಲ್ಲವೂ ಇಲ್ಲಿಯೇ ನಿಂತಿಕೊಂಡಿದೆ. ಇದರಿಂದ ದುರ್ನಾತನದ ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬಡಾವಣೆಯ ಕೆಲವು ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ಕೊಳಚೆ ನೀರು ತೆರವುಗೊಳಿಸಲು ತಾಲೂಕಾಡಳಿತದಿಂದ ಹಿಡಿದು ಪಿಡಿಒ ಅವರಿಗೂ ಮನವಿ ಸಲ್ಲಿಸಿದ್ದರೂ
ಕ್ರಮ ಕೈಗೊಂಡಿಲ್ಲ. ಕೂಡಲೇ ಎರಡು ದಿನದಲ್ಲಿ ನೀರು ತೆರವುಗೊಳಿಸಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಕುಟುಂಬ ಸಮೇತ ಧರಣಿ ಕುಳಿತುಕೊಳ್ಳುತ್ತೇವೆ.
ಶಿವಪ್ಪ ಹೊಕ್ರಾಣಿ, ಬಡಾವಣೆ ನಿವಾಸಿ
ಇಂದೇ ಗ್ರಾಮಕ್ಕೆ ಭೇಟಿ ನೀಡಿ ಕೊಳಚೆ ನೀರು ಬೇರೆಡೆ ಹರಿದು ಹೋಗಲು ವ್ಯವಸ್ಥೆ ಮಾಕೊಡುತ್ತೇನೆ. ಶಾಶ್ವತವಾಗಿ ಪರಿಹಾರ ಕಲ್ಪಿಸಲು ಗಡಿಸೋಮನಾಳ ಗ್ರಾಮದ ಸ್ವತ್ಛತೆಗೆ ಕ್ರಿಯಾಯೋಜನೆ ಸಿದ್ದಪಡಿಸಿ ಕ್ರಮ ಕೈಗೊಳ್ಳುತ್ತೇನೆ.
ಪ್ರಭು ಜೇವೂರ, ಕೊಡಗಾನೂರ ಪಿಡಿಒ
*ಜಿ.ಟಿ. ಘೋರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.