ಕಲ್ಲನಾಗರಕ್ಕೆ ಹಾಲೆರೆಯದೆ ಬಡ ಮಕ್ಕಳಿಗೆ ಕೊಡಿ
Team Udayavani, Jul 26, 2017, 12:20 PM IST
ವಿಜಯಪುರ: ಬಸವಣ್ಣನವರ ವಚನಗಳು ಮನುಷ್ಯನ ಸನ್ಮಾರ್ಗದ ಬಾಳಿಗೆ ಜೀವನ ಸೂತ್ರಗಳಾಗಿವೆ. ವೈಚಾರಿಕ ಪ್ರಜ್ಞೆಯ ಈ ತತ್ವ-ಸಂದೇಶಗಳ ಅನುಷ್ಠಾನದಿಂದ ನಾವು ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.
ಮಂಗಳವಾರ ಬಸವ ಪಂಚಮಿ ಅಂಗವಾಗಿ ನಗರ ಹರಣಶಿಕಾರಿ ಕೊಳಚೆ ಪ್ರದೇಶದ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಪಂಚಮಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಲ ನಾಗರ ಮಾತ್ರವಲ್ಲ ಜೀವಂತ ಹಾವು ಕೂಡ ಹಾಲು ಕುಡಿಯುವುದಿಲ್ಲ. ಚಿಟ್ಟೆ, ಇಲಿ, ಪಕ್ಷಿಗಳು, ಮೊಟ್ಟೆಗಳಂಥ ಜೀವಿಗಳನ್ನು ತಿಂದು ಜೀವಿಸುವ ಹಾವು ಹಾಲು ಕುಡಿಯುವುದೇ ಇಲ್ಲ. ವೈಜ್ಞಾನಿಕ ಯುಗದಲ್ಲೂ ವೈಚಾರಿಕ ಪ್ರಜ್ಞೆ ಇಲ್ಲದೇ ಜನರು ಮೌಡ್ಯದಿಂದ ನಾಗರ ಕಲ್ಲಿಗೆ ಹಾಲು ಎರೆಯುವ ಅಂಧಾನುಕರಣೆ ಮುಂದುವರಿಸಿಕೊಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿನಂತಹ ಸಮಾಜ ಕಟ್ಟಲು ಆಹಾರದ ಕೊರತೆ, ವೈಚಾರಿಕ ಜ್ಞಾನದ ಕೊರತೆ ಸಮಾಜವನ್ನು ಮೂಲ ಸೌಲಭ್ಯಗಳ ಕೊರತೆಗಳಿಂದ ಬಳಲುವಂತೆ ಮಾಡಿದೆ ಎಂದು ವಿಶ್ಲೇಷಿಸಿದರು. ನೀಲಕಮಲ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅರುಣ ಕಾಳೆ, ಬಿ.ಎಂ. ಪಾಟೀಲ, ಯಲ್ಲವ್ವ ಇಲಕಲ್ಲ, ಶ್ರೀನಾಥ ಪೂಜಾರಿ ದೇವಾನಂದ ಲಚ್ಯಾಣ, ವೆಂಕಟೇಶ ಚವ್ಹಾಣ, ಪ್ರಭುಗೌಡ ಪಾಟೀಲ ಇದ್ದರು.
ದಾಕ್ಷಾಯಣಿ ಬಿರಾದಾರ ಪ್ರಾರ್ಥಿಸಿದರು. ಭಾರತಿ ಪಾಟೀಲ ಸ್ವಾಗತಿಸಿದರು. ಶ್ರೀದೇವಿ ಉತ್ಲಾಸರ ನಿರೂಪಿಸಿದರು. ಸುಮಂಗಲಾ ಕೋಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.