ಬಂಡವಾಳಿಗರ ಪರವಾಗಿದೆ ಸರ್ಕಾರ: ಪಾಟ್ಕರ್
Team Udayavani, Jan 14, 2022, 2:20 PM IST
ವಿಜಯಪುರ: ಭಾರತದಲ್ಲಿ ನಮ್ಮ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ. ದೇಶದಲ್ಲಿನ ಸಾರ್ವಜನಿಕ ಉದ್ಯಮ ಗಳನ್ನು ಖಾಸಗೀಕರಣ ಮಾಡಿ, ಮಾರಾಟ ಮಾಡಿ ಇಡೀ ದೇಶದ ಸೇವಾ ವ್ಯವಸ್ಥೆಯನ್ನು ಬಂಡವಾಳಿಗರ ಕೈಗೆ ಒಪ್ಪಿಸಲಾಗಿದೆ ಎಂದಿ ಪರಿಸರವಾದಿ, ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ದೂರಿದರು.
ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕೊಳಚೆ ಪ್ರದೇಶದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸರ್ಕಾರಗಳಿಗೆ ಜನ ಸಾಮಾನ್ಯರಿಗೆ ಮೂಲ ಭೂತಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಭೂಮಿ ಬೆಲೆ ಹೆಚ್ಚಾದಂತೆ ಮುಂದೆ ನಗರದ ಸ್ಲಂಗಳಿಗೂ ಸಮಸ್ಯೆ ಉಂಟಾಗುತ್ತದೆ. ವಿಜಯಪುರ ನಗರದ ರಂಗೀನ್ ಮಸೀದಿ, ಕೊಳಚೆ ಪ್ರದೇಶ, ಮಹ್ಮದ ನಗರ, ನಗರ ಸ್ಲಂಗಳ ಸ್ಥಿತಿಗತಿ ಸಂಪೂರ್ಣ ದುಸ್ಥಿತಿಯಲ್ಲಿದೆ ಎಂದು ವಿಷಾದಿಸಿದರು.
ಮತ್ತೊಂದೆಡೆ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲರ್ಭಯ ಕಲ್ಪಿಸುವ ಬದಲು ಕೊಳಚೆ ಪ್ರದೇಶದ ಜನರನ್ನೇ ಎತ್ತಂಗಡಿ ಮಾಡುವ ಹುನ್ನಾರ ನಡೆಸಿವೆ. ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ನೇತೃತ್ವದಲ್ಲಿ ಸ್ಥಳೀಯರು ಒಗ್ಗೂಡಿ ಧೈರ್ಯದಿಂದ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಬೇಕು ಎಂದು ಕಿವಿಮಾತು ಹೇಳಿದರು.
ಫಾ| ಅಂತೋನಿದಾಸ್, ಫಾ.ಟೀಯೊಲ, ಅಕ್ರಂ ಮಾಶ್ಯಾಳಕರ, ನಿರ್ಮಲಾ ಹೊಸಮನಿ, ಎಂ.ಸಿ. ಕಮ್ಮಾರ, ಶೋಭಾ ಗಾಯಕವಾಡ, ಭೀಮಸಿ ಕಲಾದಗಿ, ಮಿನಾಕ್ಷಿ ಕಾಲೇಬಾಗ, ಹಮಿದಾ ಪಟೇಲ್, ಸಿದ್ದಲಿಂಗ ಬಾಗೇವಾಡಿ, ಭಗವಾನರೆಡ್ಡಿ, ಫಯಾಜ್ ಕಲಾದಗಿ, ಎಂ.ಸಿ. ಮುಲ್ಲಾ, ಮಹಾದೇವ ರಾವಜಿ, ಭರತಕುಮಾರ, ದಾನಪ್ಪ ಸೋರಗೊಂಡ, ಲಾಳೆಮಶಾಕ ಕುಂಟೋಜಿ, ರಿಜ್ವಾನ್ ಮುಲ್ಲಾ, ಸದಾನಂದ ಮೋದಿ, ಗಿತಾ ಕಟ್ಟಿ, ಜಯಶ್ರೀ ಚಲವಾದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.