ಕಂಪ್ಯೂಟರ್ ಲೋಪ – ಹಿಂಪಡೆದದ್ದು ಒಂದು, ಅಮಾನ್ಯವಾದದ್ದು ಎರಡೂ ನಾಮಪತ್ರ…!
Team Udayavani, Dec 14, 2020, 10:31 PM IST
ಸಾಂದರ್ಭಿಕ ಚಿತ್ರ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾ.ಪಂ. ಚುನಾವಣೆಯಲ್ಲಿ ಒಂದು ನಾಮಪತ್ರ ಹಿಂಪಡೆದರೂ ಎರಡೂ ನಾಮಪತ್ರ ರದ್ದಾಗಿವೆ. ಕಂಪ್ಯೂಟರ್ ಲೋಪದ ಕಾರಣ ಓರ್ವ ಅಭ್ಯರ್ಥಿಯ ಎರಡೂ ನಾಮಪತ್ರ ರದ್ದಾಗಿದ್ದು, ಅಂತಿಮವಾಗಿ ಚುನಾವಣಾಧಿಕಾರಿ ಲಿಖಿತವಾಗಿ ಲೋಪ ಸರಿಪಡಿಸಿ, ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಿಕೊಂಡಿದ್ದಾರೆ.
ಗ್ರಾ.ಪಂ. 1 ಮತ್ತು 2ನೇ ವಾರ್ಡಗೆ ಸ್ಪರ್ಧೆ ಬಯಸಿ ಶ್ರೀಶೈಲ ಬಸವಂತ್ರಾಯ ಮೇಟಿ ಎಂಬವರು ಎರಡೂ ವಾರ್ಡಗೆ ನಾಮಪತ್ರ ಸಲ್ಲಿಸಿದ್ದರು. ಸೋಮವಾರ 2ನೇ ವಾರ್ಡನಲ್ಲಿ ಕಣದಲ್ಲಿ ಉಳಿದು, 1ನೇ ವಾರ್ಡ ಸ್ಪರ್ಧೆಯಿಂದ ನಾಮಪತ್ರ ಹಿಂಪಡೆದಿದ್ದತು. ಆದರೆ ಸಂಜೆ ಹೊರಬಿದ್ಧ ಪ್ರಮುಖ ಪತ್ರದಲ್ಲಿ ಶ್ರೀಶೈಲ ಎರಡೂ ವಾರ್ಡಗೆ ನಾಮಪತ್ರ ಹಿಂಪಡೆದು ಕೊಂಡಿದ್ದಾಗಿ ಮುದ್ರಣಗೊಂಡಿತ್ತು. ಇದರಿಂದ ಗೊಂದಲಕ್ಕೆ ಸಿಲುಕಿದ ಶ್ರೀಶೈಲ ಕೂಡಲೇ ಚುನಾವಣಾಧಿಕಾರಿ ಎಲ್.ಎಸ್. ಗುರವ್ ಅವರನ್ನು ಸಂಪರ್ಕಿಸಿ, ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಕಣದಲ್ಲಿದ್ದ ಅಭ್ಯರ್ಥಿಗಳ ಚಿಹ್ನೆ ಹಂಚಿಕೆಯನ್ನೇ ತಡೆದು ತಮ್ಮ ಸಮಸ್ಯೆ ಬಗೆಹರಿಸುವ ತನಕ ಚಿಹ್ನೆ ಹಂಚಿಕೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಹಂತದಲ್ಲಿ ಕಂಪ್ಯೂಟರ್ ನಿಂದ ಅಗಿರುವ ಲೋಪ ಮನವರಿಕೆ ಆಗುತ್ತಲೇ ಚುನಾವಣಾಧಿಕಾರಿ ಎಲ್.ಎಸ್.ಗುರವ್, ಧಾವಂತದಿಂದ ಕಂಪ್ಯೂಟರ್ ಲೋಪ ಸರಿಪಡಿಸಿದ್ದಾರೆ. 1ನೇ ವಾರ್ಡನ ಕಣದಲ್ಲಿ ಶ್ರೀಶೈಲ ಅವರು ಉಳಿದಿದ್ದಾಗಿ ಲಿಖಿತ ಘೋಷಣೆ ಮಾಡಿದ್ದರೆ. ಅಲ್ಲದೇ ನಿಮ್ಮ ಸ್ಪರ್ಧೆಗೆ ಯಾವುದೇ ತಾಂತ್ರಿತ ತೊಂದರೆ ಎದುರಾದಲ್ಲಿ ಅದಕ್ಕೆ ನಾನೇ ಸಂಪೂರ್ಣ ಹೊಣೆ ಎಂದೂ ಶ್ರೀಶೈಲ ಅವರಿಗೆ ಲಿಖಿತ ಸ್ಪಷ್ಟನೆ ಕೊಟ್ಟಿದ್ದಾರೆ. ಬಳಿಕವೇ ಚಿಹ್ನೆ ಹಂಚಿಕೆ ಪ್ರಕ್ರಿಯೆ ಸರಳಗೊಂಡು ಗೊಂದಲ ನಿವಾರಣೆ ಆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.