ಬೋಗಿ-ಎಂಜಿನ್ ಸಂಪರ್ಕ ಕಡಿತಗೊಂಡು ಆತಂಕ ಸೃಷ್ಟಿಸಿದ ಗುಂಬಜ್ ಎಕ್ಷಪ್ರೆಸ್ ರೈಲು

Team Udayavani, Dec 14, 2021, 5:59 PM IST

ಬೋಗಿ-ಎಂಜಿನ್ ಸಂಪರ್ಕ ಕಡಿತಗೊಂಡು ಆತಂಕ ಸೃಷ್ಟಿಸಿದ ಗುಂಬಜ್ ಎಕ್ಷಪ್ರೆಸ್ ರೈಲು

ವಿಜಯಪುರ: ಎರಡು ಬೋಗಿ ಹಾಗೂ ಎಂಜಿನ್ ಮಧ್ಯೆ ಸಂಪರ್ಕ ಕಡಿತವಾಗಿ ರೈಲು ಪ್ರಯಾಣಿಕರಲ್ಲಿ ಆತಂಕ ಸೃಷ್ಡಿಸಿದ ಘಟನೆ ನಗರದಲ್ಲಿ ಜರುಗಿದೆ.

ವಿಜಯಪುರ ‌ನಗರದ ವಜ್ರಹನುಮಾನ ದೇವಸ್ಥಾನದ ಬಳಿ ರೈಲು ಮಾರ್ಗದಲ್ಲಿ ಎರಡು ಬೋಗಿಗಳ ಸಂಪರ್ಕ ಕಡಿತವಾಗಿ, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.

ವಿಜಯಪುರ ಮಾರ್ಗವಾಗಿ ಮೈಸೂರಿಗೆ ತೆರಳುವ ಗೋಲಗುಂಬಜ್ ಎಕ್ಸಪ್ರೆಸ್ ರೈಲಿನಲ್ಲಿ ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.

ನಗರದ ಮಧ್ಯ ಭಾಗದಲ್ಲಿ ರೈಲು ಮಾರ್ಗವಿದ್ದು, ವಜ್ರಹನುಮಾನ್ ಮಂದಿರದ ಬಳಿ ಎರಡು ಬೋಗಿಗಳು ಎಂಜಿನಿಂದ ಸಂಪರ್ಕ‌ ಕಡಿದುಕೊಂಡಿವೆ.

ಇದರಿಂದ ಸಂಪರ್ಕ ಕಡಿತಗೊಂಡ ಬೋಗಿಗಳು ದೂರಕ್ಕೆ ಹೋಗಿ ನಿಲ್ಲುತ್ತಲೇ ಪ್ರಯಾಣಿರು ಚೀರಾಟ ಆರಂಭಿಸಿದ್ದಾರೆ. ಕೂಡಲೇ ರೈಲು ಚಾಲಕ ಎಚ್ಚೆತ್ತು ರೈಲು ನಿಲ್ಲಿಸಿದ್ದಾನೆ.

ರೈಲು ಎಂಜಿನಿಂದ ಎರಡು ಬೋಗಿಗಳು ಸಂಪರ್ಕ ಕಡಿತವಾಗುತ್ತಲೇ ರೈಲಿನಲ್ಲಿದ ಪ್ರಯಾಣಿಕರು ಗಾಬರಿಯಿಂದ ಚೀರಾಟ ಆರಂಭಿಸಿದ್ದಾರೆ.

ಎರಡು ಬೋಗಿಗಳ ಮಧ್ಯೆ ಇದ್ದ ಸಂಪರ್ಕದ ಕೊಂಡಿ ಕಳಚಿ ಬಿದ್ದಿದ್ದೇ ಈ ಘಟನೆಗೆ ಕಾರಣ ಎಂದು ಅಧಿಕಾರಿಗಳ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಬಳಿಕ ಕಡಿತವಾಗಿದ್ದ ಬೋಗಿ -ಎಂಜಿನ್  ಮಧ್ಯೆ ಹೊಸ ಕೊಂಡಿ ಹಾಕಿ ದುರಸ್ಥಿ ಮಾಡಿದ ಬಳಿಕ ರೈಲು ಪ್ರಯಾಣ‌ ಮುಂದುವರೆಸಿದೆ.

ದುರಸ್ಥಿವರೆಗೂ ರೈಲು ಸಂಚಾರ ಬಂದ್ ಆಗಿತ್ತು. ಸಂಪರ್ಕ ಕಡಿಕೊಂಡ‌ ಬೋಗಿಗಳನ್ನು ವೀಕ್ಷಿಸಲು ನಗರದ ಜನರು ಕುತೂಹಲದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಘಟನೆ ಸುದ್ದಿ ತಿಳಿಯುತ್ತಲೇ ವಿಜಯಪುರ ರೇಲ್ವೆ‌ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಟಾಪ್ ನ್ಯೂಸ್

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-muddebihala

Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ

Waqf JPC President visit : Jolle couple, Jarakiholi visit to Vijayapura

Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.