ಪಾಲಿಕೆ ಸದಸ್ಯೆಯ ಪತಿ ಹೈದರ್ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ
Team Udayavani, May 7, 2023, 3:58 PM IST
ವಿಜಯಪುರ: ಶನಿವಾರ ಹತ್ಯೆಯಾಗಿರುವ ಹೈದರ್ ಘಟನೆಗೆ ವಿಧಾನಸಭೆ ಚುನಾವಣೆ ಸ್ಪರ್ಧೆಯ ನಂಟಿದೆ. ಪ್ರಕರಣದಲ್ಲಿ ಎಂಐಎಂ ಅಧ್ಯಕ್ಷ ಓವೈಸಿ ಹಾಗೂ ಸ್ಥಳೀಯರೊಂದಿಗೆ ಮಾತನಾಡಿರುವ ಮೊಬೈಲ್ ಕರೆಗಳ ಆಡಿಯೋ ಲಭ್ಯವಾಗಿವೆ. ಕೂಡಲೇ ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಪ್ರತ್ಯೇಕ ತನಿಖಾ ತಂಡ ರಚಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ್ ಅಣ್ಣಿಗೇರಿ ಆಗ್ರಹಿಸಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ವ್ಯಕ್ತಿ ಹಾಗೂ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಜೊತೆಗೆ ಮೊಬೈಲ್‍ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗೆ ಮಾಡಿದರು.
ನಗರದಲ್ಲಿ ಶನಿವಾರ ನಡೆಸಿರುವ ಪಾಲಿಕೆ ಸದಸ್ಯೆ ನಿಶಾತ್ ಹೈದರ್ ನದಾಫ್ ಅವರ ಪತಿ ಹೈದರ್ ನದಾಫ್ ಹತ್ಯೆಯ ಹಿಂದೆ ವಿಧಾನಸಭೆ ಚುನಾವಣೆ ನಂಟಿರುವುದು ಸ್ಪಷ್ಟವಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರ ಬರಲು ಕೂಡಲೇ ಪ್ರತ್ಯೇಕ ತನಿಖಾ ತಂಡ ರಚಿಸುವಂತೆ ಆಗ್ರಹಿಸಿದರು.
ನಗರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಚೆಕ್ ಪೋಸ್ಟ್ ಗಳಿದ್ದು, ಆರೋಪಿಗಳು ನಗರದಿಂದ ಹೊರಗೆ ಓಡಿಹೋಗಿ ತಲೆ ಮರೆಸಿಕೊಳ್ಳಲು ಸಾಧ್ಯವಿಲ್ಲ. ಈ ವಾರದ ಹಿಂದೆ ನಗರದಲ್ಲಿ ಗೂಂಡಾಗಳು ನಿರ್ಭೀತಿಯಿಂದ ಓಡಾಡುತ್ತಿ, ಪೊಲೀಸ್ ಇಲಾಖೆ ಹದ್ದು ಬಸ್ತಿನಲ್ಲಿ ಇರಿಸಬೇಕೆಂದು ಆಗ್ರಹ ಮಾಡಿದ್ದೆವು. ಇದರ ಬೆನ್ನಲ್ಲೇ ಪಾಲಿಕೆಯ ಸದಸ್ಯೆಯ ಪತಿಯನ್ನು ಹತ್ಯೆ ಮಾಡಿರುವುದು ನಗರದ ಜನರಲ್ಲಿ ಭಯದ ವಾತಾವರಣ ಸೃಷ್ಟಿಗೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ಮಧ್ಯೆ ಶನಿವಾರ ಹಾಡು ಹಗಲೇ ಗುಂಡಾಗಳು ಹೈದರ್ ಮೇಲೆ ಗುಂಡುಗಳನ್ನು ಹಾರಿಸಿ, ಭೀಕರ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿ ಇತ್ತೀಚಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರ ವಿರುದ್ಧ ನಿಲ್ಲಿಸಿ, ತನ್ನ ಪತ್ನಿಯನ್ನು ಗೆಲ್ಲಿಸಿದ್ದ, ಇವನ ಆರು ತಿಂಗಳ ಕಾಲ್ ರೆಕಾರ್ಡ್, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, ಆಳವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಮತದಾರರಲ್ಲಿ ಭಯದ ವಾತಾವರಣವಿದ್ದು, ಮತದಾನ ಮೇಲೆ ಭಾರಿ ಗಂಭೀರ ಪರಿಣಾಮ ಬೀರಲಿದೆ. ಕಾರಣ ನಗರದ ಎಲ್ಲ ಮತದಾನ ಕೇಂದ್ರಗಳಿಗೆ ಸಶಸ್ತ್ರ ಮಿಲಿಟರಿ, ಮೀಸಲು ಪಡೆಗಳನ್ನು ಭದ್ರತೆಗೆ ನಿಯೋಜಿಸಬೇಕು.
ಹಿಂದೂಪರ ಧ್ವನಿ ಎತ್ತುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ ಅವರ ಸ್ಪರ್ಧೆಯಿಂದ ವಿಜಯಪುರ ನಗರ ರಾಜ್ಯದ ಗಮನ ಸೆಳೆದಿದೆ. ವಿಜಯಪುರ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲೂ ನಗರದಲ್ಲಿ ಗುಂಡಾಗಳ ಹಾವಳಿ ಹೆಚ್ಚಿದ್ದು, ಹಾಡು ಹಗಲೇ ಕೊಲೆ ಮಾಡುವ ಮಟ್ಟಕ್ಕೆ ಪರಿಸ್ಥಿತಿ ಬೆಳೆದು ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದರಿ ಪ್ರಕರಣದಲ್ಲಿ ಹತ್ಯೆಯಾದ ವ್ಯಕ್ತಿ ವಿಧಾನಸಭೆ ಚುನಾವಣೆಯಲ್ಲಿ ಎಂಐಎಂ ಪಕ್ಷದಿಂದ ಸ್ಪರ್ಧಿಸಲು ಬಯಸಿ, ಆ ಪಕ್ಷದ ಅಧ್ಯಕ್ಷ-ಸಂಸದ ಅಸಾದುದ್ದೀನ್ ಓವೈಸಿ ಜೊತೆ ಮಾತನಾಡಿರುವ ಆಡಿಯೋ ನಮಗೆ ಲಭ್ಯವಾಗಿವೆ. ಕೂಡಲೇ ಈ ಆಡಿಯೋಗಳ ಸತ್ಯಾಸತ್ಯತೆ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಆತ ಸದ್ಯ ಕಣದಲ್ಲಿರುವ ಕೆಲವರ ಹೆಸರುಗಳನ್ನು ಹೇಳಿದ್ದು, ಹತ್ಯೆಯ ಬಳಿಕ ಮೃತ ಹೈದರ ಸಹೋದರ ಕೂಡ ಇದರಲ್ಲಿನ ಹೆಸರುಗಳನ್ನು ಹೇಳಿದ್ದಾನೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪಾಲಿಕೆ ಸದಸ್ಯರು, ಹಿಂದೂಪರ ಸಂಘಟನೆಗಳ ಪ್ರಮುಖರು ನಗರದಲ್ಲಿ ಎಸ್ಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.
ಸದರಿ ಪ್ರಕರಣದ ಹತ್ಯೆಗೆ ಪಾಲಿಕೆ ಚುನಾವಣೆ ಸಂಬಂಧದ ಶಂಕೆ ಇದೆ ಎಂದಿರುವ ಎಸ್ಪಿ ಅವರು, ಹತ್ಯೆಗೆ ವಿಧಾನಸಭೆ ಚುನಾವಣೆಗೆ ಸಂಬಂಧವಿಲ್ಲ ಎಂದಿದ್ದರು. ಇದೀಗ ನಾವೇ ದಾಖಲೆ ಒದಗಿಸುತ್ತಿದ್ದು, ಕೂಡಲೇ ತಮ್ಮ ಹೇಳಿಕೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹಿಂದೂಪರ ಧ್ವನಿ ಎತ್ತುತ್ತಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಹೆಚ್ಚಿನ ಭದ್ರತೆ ಕೋಡಬೇಕು. ಈಗಾಗಲೇ ದೇಶದ್ರೋಹಿಗಳಿಂದ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆ ನನಗೆ ನೇರವಾಗಿ ಮಾಹಿತಿ ನೀಡಿದ್ದಾರೆ.
ಕಾರಣ ಆತ್ಮರಕ್ಷಣೆಗೆ ನಾನು ಸೇರಿದಂತೆ ಪಾಲಿಕೆ ಸದಸ್ಯರು, ಹಿಂದೂಪರ ನಾಯಕರಿಗೆ ಅವರು ಹೊಂದಿರುವ ಪರವಾನಿಗೆ ಸಹಿತದ ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡಬೇಕು. ಹಿಂದೂಪರ ಕಾರ್ಯಕರ್ತರು, ಪಾಲಿಕೆ ಸದಸ್ಯರಿಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಬೇಕು ಎಂದು ರಾಘು ಅಣ್ಣಿಗೇರಿ ಆಗ್ರಹಿಸಿದರು.
ವೂಡಾ ಅಧ್ಯಕ್ಷ ಪರಶುರಾಮ ರಜಪೂತ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಪ್ರೇಮಾನಂದ ಬಿರಾದಾರ, ಎಂ.ಎಸ್.ಕರಡಿ, ಕಿರಣ ಪಾಟೀಲ ಸೇರಿದಂತೆ ಇತರರು ಉಪ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.