ಹೆತ್ತವರ ಸಾಲಕ್ಕೆ ಮಗನಿಗೆ ಕಿರುಕುಳ; ಆತ್ಮಹತ್ಯೆಗೆ ಯತ್ನಿಸಿದ ಯುವಕ
Team Udayavani, Feb 10, 2024, 10:25 PM IST
ವಿಜಯಪುರ : ಪೋಷಕರು ಖಾಸಗಿ ಸಾಲ ಮಾಡಿದ್ದನ್ನು ತೀರಿಸಲು ವಿಳಂಬವಾಗಿದ್ದಕ್ಕೆ ಸಾಲಗಾರರು ಮಗನಿಗೆ ಕಿರುಕುಳ ನೀಡಿದ್ದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ವಿಜಯಪುರ ನಗರದ ಶಾಪೇಟೆ ನಿವಾಸಿ ಶಾರೂಖ್ ಸೌದಾಗರ್ ಎಂಬ ಯುವಕನೇ ಪೋಷಕರ ಸಾಲಕ್ಕೆ ತನಗೆ ನೀಡುತ್ತಿದ್ದ ಕಿರುಕುಳ ತಾಳದೇ ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ವಿಷ ಸೇವಿಸಿ ಆತ್ಮಹತ್ತೆಗೆ ಯತ್ನಿಸಿದ ಶಾರೂಖ್‍ನನ್ನು ಕೂಡಲೇ ಪೋಷಕರು ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.
ರುಬೀನಾ ಎಂಬ ಸ್ಥಳಿಯ ಮಹಿಳೆಯ ಬಳಿ ಶಾರೂಖ್‍ನ ಪೋಷಕರು ಸಾಲ ಪಡೆದಿದ್ದಾರೆ. ಸಾಲ ಪಡೆದ ಬಳಿಕ ಶಾರೂಖ್‍ನ ತಂದೆ ಮೆಹಬೂಬ್‍ಸಾಬ್ ಸಾಲ ಮರುಪಾತಿಸುವಲ್ಲಿ ವಿಳಂಬವಾಗಿದೆ. ಇದರಿಂದ ಕುಪಿತಗೊಂಡ ರುಬೀನಾ, ನಿನ್ನ ಪೋಷಕರು ಮಾಡಿರುವ ಸಾಲವನ್ನು ನೀನು ತೀರಿಸಬೇಕು ಎಂದು ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.
ವಿಷಯ ತಿಳಿಯುತ್ತಲೇ ಸರ್ಕಾರಿ ಆಸ್ಪತ್ರೆಗೆ ಧಾವಿಸಿರುವ ವಿಜಯಪುಎ ಎಪಿಎಂಸಿ ಠಾಣೆ ಪೊಲೀಸರು, ಚಿಕಿತ್ಸೆ ಪಡೆಯುತ್ತಿರುವ ಶಾರುಖ್‍ನಿಂದ ಪ್ರಾಥಮಿಕ ಮಾಹಿತಿ ಪಡೆದಿದ್ದು, ಲಿಖಿತ ದೂರು ಪಡೆಯಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮನೆ ದರೋಡೆ, ಮುಸುಕುಧಾರಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Indi: ಜಂತುಹುಳು ಮಾತ್ರೆ ಸೇವಿಸಿದ 5 ಮಕ್ಕಳು ಅಸ್ವಸ್ಥ
Vijayapura: ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್; ಓರ್ವನಿಗೆ ಗುಂಡೇಟು, ನಾಲ್ವರು ಪರಾರಿ
Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ
Vijayapura: ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಮಹಿಳೆ ಬಚಾವ್, 2 ಮಕ್ಕಳು ಸಾವು
MUST WATCH
ಹೊಸ ಸೇರ್ಪಡೆ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
US visa: ಬೆಂಗಳೂರಿನಲ್ಲೇ ಅಮೆರಿಕ ವೀಸಾ: ಕನಸು ಸನ್ನಿಹಿತ
Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.