ಅಗಲಿದ ನಾಯಕಿಗೆ ಗಣ್ಯರ ನಮನ
Team Udayavani, Jul 24, 2018, 2:36 PM IST
ನಾಲತವಾಡ: ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅಗಲಿಕೆಗೆ ಗಣ್ಯರ ನುಡಿನಮನಗಳ ಅರ್ಪಣೆಗಾಗಿ ನಿವಾಸದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ದಪಡಿಸಲಾಗಿತ್ತು.
ವೇದಿಕೆಯಲ್ಲಿ ದಿ| ವಿಮಲಾಬಾಯಿ ದೇಶಮುಖರ ಅಂತಿಮ ದರ್ಶನಕ್ಕೆ ತಂಡೋಪ ತಂಡವಾಗಿ ಆಗಮಿಸಿದ ಮಾಜಿ ಹಾಗೂ ಹಾಲಿ ಸಚಿವರು, ಶಾಸಕರು, ಗಣ್ಯರು ಹಾಗೂ ಶ್ರೀಗಳು ದೇಶಮುಖ ಅವರ ಆತ್ಮಕ್ಕೆ ಶಾಂತಿ ಕೋರಿ ನುಡಿನಮನಗಳನ್ನು ಅರ್ಪಿಸಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಎಂದಿಗೂ ಹಟ ಮಾಡಿ ಅಧಿಕಾರ ಪಡೆಯದ ದೇಶಮುಖ ಮನೆತನದ ಸರಳ, ಸಜ್ಜನಿಕೆ ಇಂದಿನ ರಾಜಕಾರಣಿಗಳು ಕಲಿಯಬೇಕು. ನನಗೂ ದೇಶಮುಖ-ನಾಡಗೌಡ ಕುಟುಂಬಕ್ಕೆ ಅನೋನ್ಯ ಸಂಬಂಧವಿದೆ. ಸಾವಿರಾರು ಎಕರೆ ಜಮೀನು ದಾನ ನೀಡಿ ಇಂದಿಗೂ ಈ ಭಾಗದ 40 ಹಳ್ಳಿಗಳ ಬಡವರ ಪಾಲಿಗೆ ದೇವರೆಂದೇ ಖ್ಯಾತಿಗಳಿಸಿದ ವಿಮಲಾಬಾಯಿ ದೇಶಮುಖ ಅವರ ಅಗಲಿಕೆ ನೋವನ್ನು ನಾಡಗೌಡ-ದೇಶಮುಖ ಮನೆತನಕ್ಕೆ ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುವೆ ಎಂದರು.
ಶಾಕರಾದ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ದೇಶಮುಖ ಅವರ ರಾಜಕೀಯ ಬದುಕು ಮಾದರಿಯಾಗಿದೆ ಎಂದರು. ಮಾಜಿ ಸಚಿವ ಸಿ.ಎಸ್. ನಾಡಗೌಡ ಮಾತನಾಡಿ, ವಿಮಲಾಬಾಯಿ ದೇಶಮುಖ ಅವರ ಅಗಲಿಕೆಯಿಂದ ನಾಡಗೌಡ ಮನೆತನಕ್ಕೆ ಆಘಾತ ಉಂಟಾಗಿದೆ. ಈ ಭಾಗದಲ್ಲೇ ಬಡವರ ಸಮಸ್ಯೆಗಳಿಗೆ ದೇಶಮುಖರ ಮನೆಯೇ ನ್ಯಾಯಾಲಯವಾಗಿತ್ತು ಎಂದರು.
ಶ್ರದ್ಧಾಂಜಲಿ ಸಭೆ ವೇದಿಕೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಿರೂರಿನ ಡಾ| ಬಸವಲಿಂಗ ಮಹಾಸ್ವಾಮಿಗಳು, ಗದಗ ಕಪ್ಪತಗುಡ್ಡದ ಶಿವಕುಮಾರ ಮಹಾಸ್ವಾಮಿಗಳು, ಬಿದರಕುಂದಿಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಹಾದೇವ್ ಶಾಸ್ತ್ರಿಗಳು, ಮಾಜಿ ಸಚಿವ ಮುರುಗೇಶ ನಿರಾಣಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಎಂ.ಬಿ. ನಾವದಗಿ, ಎಂ.ಎ. ಖಾಲೆಬಾಗ್, ಅಡಿವೆಪ್ಪ ಕಡಿ, ಚನ್ನವೀರ ಸಗರನಾಳ, ಅಬ್ದುಲ್ ರಹೆಮಾನ್ ಬಿದರಕುಂದಿ, ಬಿ.ಎಂ. ಹಿರೇಮಠ, ಚಿ.ಎಸ್. ಹಿರೇಮಠ, ಎಲ್.ಆರ್. ಗೊಳಸಂಗಿ, ಸಚಿನ ದೇಶಮುಖ, ಎಂ.ಪಿ. ನಾಡಗೌಡ, ಎಸ್.ಆರ್. ಪಾಟೀಲ, ಮಹಾಂತೇಶ ಕೌಜಲಗಿ, ಮಾಜಿ ಶಿವಪುತ್ರಪ್ಪ ದೇಸಾಯಿ, ಬಿ.ಎಸ್. ಪಾಟೀಲ ಯಾಳಗಿ, ಅರವಿಂದ ಕೊಪ್ಪ, ಮಾಜಿ ಸಚಿವ ಎಸ್.ಆರ್. ಪಾಟೀಲ ಅಂತಿಮ ನುಡಿ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.