ಮರಾಠಿ ನಿಗಮ ರದ್ದಾದರೆ ರಾಜ್ಯದಲ್ಲಿ ದೊಡ್ಡ ಅನಾಹುತವೇ ನಡೆಯಲಿದೆ: ಯತ್ನಾಳ್ ಎಚ್ಚರಿಕೆ

ವಾಟಾಳ್ ಸೇರಿ ಕನ್ನಡ ಪರ ಹೋರಾಟಗಾರರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಕಿಡಿ

Team Udayavani, Nov 20, 2020, 8:45 PM IST

basava-2

ವಿಜಯಪುರ: ಮರಾಠಾ ಅಭಿವೃದ್ಧಿ ನಿಗಮ ರದ್ದು ಮಾಡುವಂತೆ ಆಗ್ರಹಿಸಿ ಡಿ. 5 ರಂದು ಕನ್ನಡ ಪರ ಸಂಘಟನೆಗಳ ಹೆಸರಿನಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲವಿಲ್ಲ. ತಾಕತ್ತಿದ್ದರೆ ವಾಟಾಳ್  ನಾಗರಾಜ್ ಇತರರು ವಿಜಯಪುರ ಬಂದ್ ಮಾಡಿ ತೋರಿಸಲಿ. ಕನ್ನಡದ ಹೆಸರಿನಲ್ಲಿ ನಡೆಸುವ ಇಂಥ ಹುಚ್ಚಾಟಕ್ಕೆ ಮಣಿದು ಮುಖ್ಯಮಂತ್ರಿಗಳು ನಿಗಮ ಆದೇಶವನ್ನು ಹಿಂಪಡೆಯಬಾರದು. ಒಂದೊಮ್ಮೆ ನಿಗಮ ರದ್ದಾದರೆ ಗಂಭೀರ ಪರಿಣಾಮ ಎದರುಸಬೇಕಾಗುತ್ತದೆ ಹಾಗೂ ರಾಜ್ಯದಲ್ಲಿ ದೊಡ್ಡ ಅನಾಹುತವೇ ನಡೆಯಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಎಚ್ಚರಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.5 ರಂದು ಕನ್ನಡಪರ ಸಂಘಟನೆಗಳು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕೆ ಇಳಿದಿರುವುದು ಸರಿಯಲ್ಲ. ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಮರಾಠಿಗರ ಪಾತ್ರ ಸಣ್ಣದೇನದಲ್ಲ. ಇಷ್ಟಕ್ಕೂ ಇದು ಮರಾಠಾ ಭಾಷಿಕ ಅಭಿವೃದ್ಧಿಗೆ ಅಲ್ಲ, ಕರ್ನಾಟಕದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಸ್ಥಾಪನೆ ಆಗಿರುವ ನಿಗಮ. ಸರ್ಕಾರದ ನಿರ್ಧಾರ ಸೂಕ್ತವಾಗಿದ್ದು, ನಮ್ಮ ಬೆಂಬಲವಿದೆ. ಎಂಇಎಸ್ ಸೇರಿದಂತೆ ಮಹಾರಾಷ್ಟ್ರ ನಾಯಕರ ನಡೆಗೆ ನನ್ನ ವಿರೋಧವಿದೆ. ಆದರೆ ಕನ್ನಡದಲ್ಲಿರುವ ಮರಾಠಿಗರ ಅಭಿವೃದ್ಧಿ ವಿಷಯದಲ್ಲಿ ವಿರೋಧ ಮಾಡುವುದು ಸಲ್ಲದ ಕ್ರಮ ಎಂದರು.

ಕನ್ನಡದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಕುಳಿತು ಕೆಲವರು ನಡೆಸುವ ಇಂತಹ ಹೋರಾಟಕ್ಕೆ ಮುಖ್ಯಮಂತ್ರಿಗಳು ಮಣಿಯಬಾರದು ಎಂದು ಆಗ್ರಹಿಸಿದ ಅವರು, ಧೈರ್ಯವಿದ್ದರೆ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ನಾರಾಯಣಗೌಡ ಅವರು ವಿಜಯಪುರ ಬಂದ್ ಮಾಡಿ ತೋರಿಸಲಿ. ಅದು ಹೇಗೆ ವಿಜಯಪುರ ಬಂದ್ ಮಾಡಿಸುತ್ತಾರೆ ನಾನು ನೋಡುತ್ತೇನೆ ಎಂದು ಸವಾಲು ಎಸೆದರು.

ಇದನ್ನೂ ಓದಿ: ಸುಗ್ರಿವಾಜ್ಞೆ ಮೂಲಕ ತಂದ ಕಾಯ್ದೆಗಳನ್ನು ವಿರೋಧಿಸಿ ಸರ್ಕಾರಿ ಕಚೇರಿಗೆ ಮುತ್ತಿಗೆ: ಪಟೇಲ್

ಇಷ್ಟಕ್ಕೂ ಕನ್ನಡ ಪರ ಸಂಘಟನೆಗಳೆಂದರೆ ವಾಟಾಳ್ ನಾಗರಾಜ್  ಹಾಗೂ ನಾರಾಯಣಗೌಡ ಮಾತ್ರವೇ. ಬೆಂಗಳೂರಿನಲ್ಲಿ ಕುಳಿತು ಕನ್ನಡದ ಹೆಸರಿನಲ್ಲಿ ಇವರು ಮಾಡುತ್ತಿರುವ ಕೆಲಸಗಳು ನಮಗೂ ಗೊತ್ತಿದೆ. ಸರ್ಕಾರದಿಂದ 50-60 ಲಕ್ಷ ರೂ. ಅನುದಾನ ಪಡೆದಿರುವ ಇವರು ಮಾತ್ರ ಕನ್ನಡಿಗರೇ, ಉಳಿದ ಎಷ್ಟು ಕನ್ನಡಪರ ಸಂಘಟನೆಗಳಿಗೆ ಸರ್ಕಾರದ ಅನುದಾನ ಸಿಕ್ಕಿದೆ ಹೇಳಿ ಎಂದರು.

ಯಾವುದೋ ಹೊಟೇಲ್‍ನಲ್ಲಿ ಕುಳಿತು ಸಭೆ ಮಾಡುವ, ಜನ ವಿರೋಧಿ ಹೋರಾಟಕ್ಕೆ ಮುಂದಾಗುವ ಇಂಥವರ ಮಾತಿಗೆ ಸರ್ಕಾರ ಮಣಿಯಬಾರದು. ಇಷ್ಟಕ್ಕೂ ವಾಟಾಳ್ ನಾಗರಾಜ್ ಅವರಂಥ ಡೋಂಗಿ ಹೋರಾಟಗಾರರಿಂದ ನಾವು ಕಲಿಯಬೇಕಾದುದು ಏನೂ ಇಲ್ಲ. ನಮಗೂ ಕನ್ನಡ ಅಭಿಮಾನವಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  ತುಂಗಭದ್ರಾ ಪುಷ್ಕರಣೋತ್ಸವ: ಪಂಡಿತರ ಆಗಮನ; ಯಶಸ್ವಿ ತುಂಗಭದ್ರಾರತಿ !

ಟಾಪ್ ನ್ಯೂಸ್

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!

Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ

RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ

Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!

Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.