ಭೈರಗೊಂಡ, ಎದುರಾಳಿ ತಂಡದ ಮೇಲೆ ಕೋಕಾ ಜಾರಿಗೆ ಚಿಂತನೆ: ಐಜಿಪಿ ರಾಘವೇಂದ್ರ ಸುಹಾಸ್
Team Udayavani, Mar 16, 2021, 3:55 PM IST
ವಿಜಯಪುರ: ಭೀಮಾ ತೀರದ ಮಹಾದೇವ ಭೈರಗೊಂಡ ಹಾಗೂ ಸಹಚರರ ಮೇಲೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭೈರಗೊಂಡ ಹಾಗೂ ಎದುರಾಳಿ ತಂಡಗಳ ಮೇಲೆ ಕೋಕಾ ಕಾಯ್ದೆ ಜಾರಿ ಮಾಡಲು ಚಿಂತನೆ ನಡೆಸಿದ್ದಾಗಿ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾದೇವ ಭೈರಗೊಂಡ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿಗಳನ್ನೆಲ್ಲಾ ಬಂಧಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜು ಚಡಚಣ, ವಿಮಲಾಬಾಯಿ ಚಡಚಣ ಬಂಧನಕ್ಕೆ ಜಾಲ ಬೀಸಲಾಗಿದೆ. ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ. ನಮ್ಮ ಪೊಲೀಸರು ಈ ಇಬ್ಬರು ಆರೋಪಿಗಳಿಗಾಗಿ ಮಹಾರಾಷ್ಟ್ರದ ಮುಂಬೈ ಸೇರಿದಂತೆ ಇತರೆಡೆ ನಮ್ಮ ತನಿಖಾ ತಂಡದ ಪೊಲೀಸರು ಜಾಲಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:14ನೇ ವಯಸ್ಸಿಗೆ ಶಾಲೆ ತೊರೆವ ಮಕ್ಕಳಿಗೂ ಕೌಶಲ್ಯ ತರಬೇತಿ ಅಗತ್ಯ: ಕೆ. ರತ್ನಪ್ರಭಾ
ಉತ್ತರ ವಲಯದಲ್ಲಿಯೇ 150 ಜನ ಗೂಂಡಾ ಕಾಯ್ದೆಯಲ್ಲಿ ಬಂಧಿತರಾಗಿದ್ದಾರೆ. ಮೂವರ ಮೇಲೆ ಕೋಕೊ ಕೇಸ್ ಹಾಕಲಾಗಿದೆ. ನಿರಂತರ ಗೂಂಡಾಗಿರಿ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಇಂಥವರಿಗೆ ಪೊಲೀಸರ ಬಗ್ಗೆ ಭಯವಿರಬೇಕು, ಅದು ಇದ್ದೇ ಇರುತ್ತದೆ ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.