ಕೋವಿಡ್ ಸೋಂಕು ತಡೆಗೆ ಶಾಸಕ ಯಶವಂತ್ರಾಯಗೌಡ ಪಾಟೀಲ ಪಣ

ಕ್ಷೇತ್ರಾದ್ಯಂತ ಸಂಚಾರ - ಅಧಿಕಾರಿಗಳೊಂದಿಗೆ ಸಮನ್ವಯ ; ದಿನಸಿ ಕಿಟ್‌ ವಿತರಣೆ - ಸಿಎಂ ಪರಿಹಾರ ನಿಧಿಗೆ ದೇಣಿಗೆ ; ಹಸಿವು ನೀಗಿಸಿದ ದಾಸೋಹಿ

Team Udayavani, May 9, 2020, 2:00 AM IST

ಕೋವಿಡ್ ಸೋಂಕು ತಡೆಗೆ ಶಾಸಕ ಯಶವಂತ್ರಾಯಗೌಡ ಪಾಟೀಲ ಪಣ

ಇಂಡಿ: ಕೋವಿಡ್ ಮಹಾಮಾರಿ ಭಾರತಕ್ಕೂ ವಕ್ಕರಿಸಿದ ನಂತರ ಇದರ ತಡೆಗಾಗಿ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರಿಂದ ಕೋವಿಡ್ ಸೋಂಕು ಭೀತಿಯೊಂದಿಗೆ ಮತ್ತಷ್ಟು ಸಂಕಷ್ಟವೂ ಎದುರಾಯಿತು.

ಬಡವರು, ಕೂಲಿಕಾರ್ಮಿಕರು, ನಿರ್ಗತಿಕರು, ದಿನದ ದುಡಿಮೆಯನ್ನೇ ನಂಬಿರುವ ಅನೇಕರ ಬದುಕು ದುಸ್ತರವಾಗಿದೆ. ಇದಕ್ಕೆ ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರ ಹೊರತಾಗಿಲ್ಲ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲ ಭೀಮಾತೀರದ ಜನರ ಪಾಲಿಗೆ ಭಗೀರಥರಾಗಿದ್ದಾರೆ.

ಕೋವಿಡ್ ಲಾಕ್‌ಡೌನ್‌ ಘೋಷಣೆಯಾದ ನಂತರ ಕೋವಿಡ್ ಸೋಂಕು ತಡೆಗೆ ಹಾಗೂ ಇಡೀ ಕ್ಷೇತ್ರದ ಜನರ ಸಮಸ್ಯೆಗೆ ಪರಿಹಾರ ಒದಗಿಸಲು ಟೊಂಕಕಟ್ಟಿ ಶ್ರಮಿಸುತ್ತಿದ್ದಾರೆ. ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿದ್ದಾರೆ.

ಹಸಿವು ನೀಗಿಸಿದ ದಾಸೋಹಿ: ಈಗಾಗಲೆ ಮತಕ್ಷೇತ್ರದ 80 ಹಳ್ಳಿಗಳು ಎಲ್ಲ ತಾಂಡಾಗಳು ಮತ್ತು ಇಂಡಿ ನಗರದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಒಂದು ಕೆಜಿ.ಸಕ್ಕರೆ, ಎರಡು ಕೆ.ಜಿ. ಗೋಧಿ ಹಿಟ್ಟು, ಒಂದು ಕೆ.ಜಿ. ಬೇಳೆ, ಒಂದು ಕೆ.ಜಿ. ಒಳ್ಳೆಣ್ಣೆ, ಸಾಸಿವೆ, ಜೀರಿಗೆ, ಅರಿಶಿಣ ಪುಡಿ ಹೀಗೆ ಅಗತ್ಯ ವಸ್ತುಗಳ ಕಿಟ್‌ ತಯಾರಿಸಿ ಮತ ಕ್ಷೇತ್ರದ 11,000 ಕ್ಕೂ ಅಧಿಕ ಮಂದಿಗೆ ವಿತರಿಸಿದ್ದಾರೆ. ಅಲ್ಲದೆ ಈ ಕಾರ್ಯ ಮುಂದುವರಿಸಿದ್ದು, ಜೂನ್‌ ತಿಂಗಳಿನಲ್ಲಿ ಮತ್ತೆ 11,000 ಜನರಿಗೆ ದಿನಸಿ ಕಿಟ್‌ ವಿತರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.


ರೈತರ ಪರ ಧ್ವನಿ ಎತ್ತಿದ ಜನನಾಯಕ:
ಲಾಕ್‌ಡೌನ್‌ನಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್‌ ಆಗಿದ್ದು, ರೈತರು ಬೆಳೆದ ಬೆಳೆ ಖರೀದಿಸಲು ಯಾರೂ ಮುಂದಾಗದೆ ಇರುವ ದುಸ್ಥಿತಿ ಮನಗಂಡ ಶಾಸಕ ಯಶವಂತರಾಯಗೌಡರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ರೈತರಿಗೆ ಸಹಾಯ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿದರು.

ಇಂಡಿ ತಾಲೂಕು ಲಿಂಬೆ ಬೆಳೆಯುವ ಕ್ಷೇತ್ರವಾಗಿದ್ದು ಲಿಂಬೆ ಬೆಳೆಗಾರರಿಗೆ ಮತ್ತು ರೈತರು ಬೆಳೆದ ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಹೂವು, ದಾಳಿಂಬೆ, ದ್ರಾಕ್ಷಿ, ಕರಬೂಜ್‌ಗಳಿಗೆ ಎಕರೆವಾರು ಆವರ್ತ ನಿಧಿಯಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇವರ ಮನವಿ ಪುರಸ್ಕರಿಸಿದ ಮುಖ್ಯಮಂತ್ರಿಗಳು ಬೇಡಿಕೆಗೆ ಸ್ಪಂದಿಸಿದ್ದಾರೆ. ಇದರಿಂದ ಕ್ಷೇತ್ರದ ನೂರಾರು ರೈತರಿಗೆ ಅನುಕೂಲವಾಗಿದೆ.


ಬಡವರ ಸಹಾಯಕ್ಕೆ ಸ್ಥಿತಿವಂತರ ಪ್ರೇರೇಪಣೆ:
ಲಾಕ್‌ಡೌನ್‌ನಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದು, ಉಳ್ಳವರು, ಬಡವರ ನೆರವಿಗೆ ಮುಂದಾಗಿ ಎಂದು ಶಾಸಕರು ಮನವಿ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗ‌ಳು ಎಲ್ಲ ಬಂದ್‌ ಆಗಿದ್ದರಿಂದ ಅಗತ್ಯ ವಸ್ತುಗಳೂ ಸಿಗುತ್ತಿಲ್ಲ. ದುಡಿದು ತಿನ್ನುವವರಿಗೆ ಕೆಲಸವೂ ಇಲ್ಲ. ಹೀಗಾಗಿ ಸ್ಥಿತಿವಂತರು ಬಡವರ ಬದುಕಿಗೆ ಆಸರೆಯಾಗಬೇಕು ಎಂದು ಕರೆ ನೀಡಿದ್ದಾರೆ.

ತಾವು ದಿನಸಿ ಕಿಟ್‌ ವಿತರಿಸಿ ಇತರರರಿಗೆ ಮಾದರಿಯಾಗಿದ್ದಾರಲ್ಲದೆ ಮತ್ತಷ್ಟು ಜನ ಕೋವಿಡ್ ಸಂಕಟದಲ್ಲಿರುವವರ ನೆರವಿಗೆ ಧಾವಿಸುವಂತೆ ಪ್ರೇರೇಪಿಸಿದ್ದಾರೆ. ಶಾಸಕ ಯಶವಂತರಾಯಗೌಡರ ಕರೆಗೆ ನೂರಾರು ಜನ ಸ್ಪಂದಿಸಿದ್ದು, ತಾಲೂಕಿನಾದ್ಯಂತ ದಿನಸಿ, ತರಕಾರಿ ಹಂಚಿದ್ದಲ್ಲದೆ ಅನ್ನ ದಾಸೋಹಕ್ಕೆ ಮುಂದಾಗಿದ್ದಾರೆ.

ಅಧಿಕಾರಿಗಳೊಂದಿಗೆ ಸಭೆ-ಶಹಬ್ಟಾಸ್‌: ಒಂದೆಡೆ ಕ್ಷೇತ್ರದ ಜನರ ಬಡವರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಇನ್ನೊಂದೆಡೆ ಕೋವಿಡ್ ಸೋಂಕು ತಡೆಗಾಗಿ ಶಾಸಕರು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಕೋವಿಡ್ ಸೋಂಕು ‌ ತಡೆಗಟ್ಟಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್‌, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರನ್ನು ಶಾಸಕ ಯಶವಂತ್ರಾಯಗೌಡ ಪಾಟೀಲ ಬೆನ್ನುತಟ್ಟಿ ಹುರಿದುಂಬಿಸುತ್ತಿದ್ದಾರೆ.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಲ್ಲದೆ ಪ್ರತಿದಿನ ಅವರಿಂದ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ. ಕೋವಿಡ್ ಸೋಂಕು ‌ ತಡೆಗಾಗಿ ಅಧಿಕಾರಿಗಳು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೆ ಕೋವಿಡ್ ವಾರಿಯರ್ಸ್‌ಗಳನ್ನು ಸತ್ಕರಿಸಿ ಅವರ ಆತ್ಮಸ್ಥೈರ್ಯ ಇಮ್ಮಡಿಗೊಳಿಸಿದ್ದಾರೆ.

ಕೋವಿಡ್ ಲಾಕ್‌ಡೌನ್‌ ಘೋಷಣೆಯಾದ ನಂತರ ನಿರಂತರ ಕ್ಷೇತ್ರದಲ್ಲಿ ಸಂಚರಿಸುತ್ತ ಜನರ ಕಷ್ಟ ಆಲಿಸಿ ಸ್ಪಂದಿಸುತ್ತ ಬಡವರ ಹಸಿವು ನೀಗಿಸುತ್ತ ರೈತರ ಸಂಕಷ್ಟದ ಬದುಕಿಗೆ ಆಸರೆಯಾಗಿ ಕೋವಿಡ್ ಸೋಂಕು ತಡೆಗಾಗಿ ಶ್ರಮಿಸುತ್ತಿರುವ ಶಾಸಕ ಯಶವಂತರಾಯಗೌಡ್ರ ಪಾಟೀಲ್‌ ಜನಾನುರಾಗಿ ಎಂದು ಕರೆಸಿಕೊಳ್ಳುತ್ತಿದ್ದಾರೆ.


ಕೋವಿಡ್ ಸೋಂಕು ಸಂಕಷ್ಟದಲ್ಲಿ ಜನರ ಪಾಲಿನ ಭಗೀರಥ

ಮತಕ್ಷೇತ್ರದ ಜನರ ಋಣ ತೀರಿಸುವುದು ನನ್ನ ಕರ್ತವ್ಯ. ನಾನು ಈ ಸ್ಥಾನಕ್ಕೆ ಬರಬೇಕಾದರೆ ನನ್ನ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ. ಅವರಿಗೆ ನಾನು ಎಷ್ಟೇ ಸಹಾಯ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ.
ಕಳೆದ 34 ವರ್ಷ ವರ್ಷಗಳಿಂದ ನನ್ನ ಮನೆತನಕ್ಕೆ ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಸಹಾಯ ಮಾಡುತ್ತ ಜನಸೇವೆಯಲ್ಲಿ ತೊಡಗಿದ್ದೇನೆ.
– ಯಶವಂತ್ರಾಯಗೌಡ ಪಾಟೀಲ, ಶಾಸಕರು, ಇಂಡಿ ಮತಕ್ಷೇತ್ರ ಹಾಗೂ ಅಧ್ಯಕ್ಷರು, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಮರಗೂರು

ಶಾಸಕ ಯಶವಂತ್ರಾಯಗೌಡ ಪಾಟೀಲ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವೈಯಕ್ತಿಕವಾಗಿ 5 ಲಕ್ಷ ರೂ, ಭೀಮಾಶಂಕರ ಸಕ್ಕರೆ ಕಾರ್ಖಾನೆಯಿಂದ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕೋವಿಡ್ ಸೋಂಕು ತಡೆಗಾಗಿ ಶ್ರಮಿಸುತ್ತಿರುವ ತಾಲೂಕಾಡಳಿತದ ಅಧಿಕಾರಿ ಸಿಬ್ಬಂದಿಗೆ ಅನುಕೂಲ ಕಲ್ಪಿಸಲು ಹಾಗೂ ಸ್ಯಾನಿಟೈಸರ್‌, ಮಾಸ್ಕ್ ಗಾಗಾಗಿ 7.50 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಬಡವರ ಹಸಿವು ನೀಗಿಸಲು 33 ಲಕ್ಷ ರೂ. ವೆಚ್ಚದಲ್ಲಿ ದಿನಸಿ ಕಿಟ್‌ ವಿತರಿಸಿದ್ದಾರೆ.

ಇಂಡಿ ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ 44 ದಿನಗಳವರೆಗೆ ವೈಯಕ್ತಿಕವಾಗಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಪ್ರತೀ ದಿನ ಸರಾಸರಿ 1100 ಬಡವರು, ನಿರ್ಗತಿಕರು ಅಲ್ಲಿ ಊಟ ಮಾಡಿದ್ದು, ಪ್ರತಿ ದಿನ ಸರಾಸರಿ 12 ಸಾವಿರ ರೂ. ಖರ್ಚು ಮಾಡಿದ್ದಾರೆ. 44 ದಿನಗಳಲ್ಲಿ ಒಟ್ಟೂ 5.28 ಲಕ್ಷ ರೂ ಖರ್ಚು ಮಾಡಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ.


ನಮಗೆ ಅನ್ನ ನೀಡಿದ ಶಾಸಕರ ಹೊಟ್ಟೆ ತಣ್ಣಗಿರಲಿ..

ಒಮ್ಮೆಲೆ ಲಾಕ್‌ಡೌನ್‌ ಘೋಷಣೆಯಾಯಿತು. ಪ್ರತೀ ದಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದ ನಮಗೆ ಅದು ಬಂದ್‌ ಆಗಿದ್ದರಿಂದ ಊಟ ಸಿಗದ ದುಸ್ಥಿತಿ ನಿರ್ಮಾಣವಾಯಿತು. ಎರಡು ದಿನಗಳ ನಂತರ ಇಲ್ಲಿನ ಶಾಸಕರು ಮತ್ತೆ ಊಟದ ವ್ಯವಸ್ಥೆ ಮಾಡಿಸಿದ್ದರು. ಹೀಗಾಗಿ ನಮಗೆ ಮರು ಜೀವ ಬಂದಂತಾಯಿತು. ಪಾನಿಪೂರಿ ಮಾರುತ್ತ ಜೀವನ ನಡೆಸುತ್ತಿರುವ ನಮಗೆ ಸ್ವಂತ ಸೂರಿಲ್ಲ.

ಊಟ ಮಾಡಿ ಕೊಡುವವರೂ ಇಲ್ಲ. ಹೆಚ್ಚಿಗೆ ಹಣ ಕೊಟ್ಟು ನಾವು ಊಟ ಮಾಡಲೂ ಸಾಧ್ಯವಾಗಲ್ಲ. ಸರಕಾರ ಇಂದಿರಾ ಕ್ಯಾಂಟೀನ್‌ ಪ್ರಾರಂಭ ಮಾಡಿದಾಗಿನಿಂದ ಅಲ್ಲೇ ಊಟ ಮಾಡುತ್ತಿದ್ದೆವು. ಮತ್ತೆ ಶಾಸಕರು ಉಚಿತ ಊಟ ನೀಡಿದರು ಹೀಗಾಗಿ ನಮಗೆ ನಮ್ಮ ರಾಜ್ಯಕ್ಕೆ ಹೋಗುವ ಪ್ರಸಂಗ ಬಂದಿಲ್ಲ. ನಮಗೆ ಊಟ ನೀಡಿದ ಶಾಸಕರ ಹೊಟ್ಟೆ ತಣ್ಣಗಿಟ್ಟಿರಲಿ.
– ಮಾಫ್‌ಸಿಂಗ್‌ ರಾಜಸ್ಥಾನಿ, ಪಾನಿಪೂರಿ ಮಾರಾಟಗಾರ


– ಉಮೇಶ ಬಳಬಟ್ಟಿ

ಟಾಪ್ ನ್ಯೂಸ್

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.