ಕೋವಿಡ್ ವಾರಿಯರ್ಗೆ ಸನ್ಮಾನ
Team Udayavani, Jun 27, 2020, 5:44 PM IST
ಇಂಡಿ: ಕೋವಿಡ್ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ರೋಗ ತಡೆಗಟ್ಟಲು ಸರ್ಕಾರ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕರ್ನಾಟಕದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನ ಜಾಗ್ರತೆಯಿಂದ ಇರಬೇಕು ಎಂದು ಜಬ್ಬರ್‌ಅಲಿ ಹಳ್ಳಿ ಹೇಳಿದರು.
ಝಳಕಿ ಗ್ರಾಪಂಯಲ್ಲಿ ಕೋವಿಡ್ ವಾರಿಯರ್ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಜನ ಗುಂಪು ಗುಂಪಾಗಿ ನಿಲ್ಲುವುದು, ಧಾರ್ಮಿಕ ಸಭೆ- ಸಮಾರಂಭ, ಸಂತೆಗಳಂತಹ ಕಾರ್ಯಗಳಿಂದ ದೂರವಿರಬೇಕು. ರೋಗದ ಬಗ್ಗೆ ಪ್ರತಿಯೊಬ್ಬರೂ ಸದಾ ಎಚ್ಚರಿಕೆಯಿಂದ ಇರಬೇಕು. ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ಹೊಡೆದೋಡಿಸಲು ಶ್ರಮಿಸಬೇಕು. ಜತೆಗೆ ಸುರಕ್ಷಾ ಕಿಟ್ ಬಳಸಬೇಕು ಎಂದರು.
ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಗಡಿ ಕಾಯುವ ಸೈನಿಕರು ದೇಶದ ಸರಹದ್ದಿನಲ್ಲಿ ದೇಶ ರಕ್ಷಿಸಿದರೆ, ದೇಶದ ಒಳಗಿರುವ ಕೋವಿಡ್ ಹೆಮ್ಮಾರಿಯಿಂದ ಜನರನ್ನು ರಕ್ಷಿಸುತ್ತಿರುವ ವಾರಿಯರ್ಗಳ ಸೇವೆ ಅನ್ಯೋನ್ಯವಾಗಿದೆ ಎಂದು ಅಭಿನಂದಿಸಿದರು.
ಗ್ರಾಪಂ ಅಧ್ಯಕ್ಷ ಶ್ರೀಶೈಲ ಬನಸೋಡೆ, ಬಿ.ಕೆ ನಂದಗೊಂಡ, ಸದಸ್ಯರಾದ ರಮೇಶ ಬಿರಾದಾರ, ಹಣಮಂತ ಕೋಳಿ, ಹುಸೇನಿ ಪಾಚಂಗೆ, ಲಕ್ಷ್ಮಣ ಸಿಂಧೆ, ಬಸವರಾಜ ಪೂಜಾರಿ, ಆರ್.ಕ್ಷತ್ರಿ, ಚಂದ್ರಕಾಂತ ಮೇತ್ರಿ, ಅಪ್ಪಾಸಾಹೇಬ ಹರಿಜನ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.