11 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್
ಕ್ಷೇತ್ರದ ಜನರ ನೆರವಿಗೆ ಮುಂದಾದ ಇಂಡಿ ಶಾಸಕ ಯಶವಂತ್ರಾಯಗೌಡ
Team Udayavani, May 3, 2020, 4:18 PM IST
ಇಂಡಿ: ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ದಿನಸಿ ಕಿಟ್ ತಯಾರಿಕೆಯನ್ನು ವೀಕ್ಷಿಸಿದ ಶಾಸಕ ಯಶವಂತ್ರಾಯಗೌಡ ಪಾಟೀಲ
ಇಂಡಿ: ಕೋವಿಡ್ ಲಾಕ್‌ಡೌನ್ ದಿಂದಾಗಿ ಸಂಕಷ್ಟದಲ್ಲಿರುವ ಕ್ಷೇತ್ರದ ಬಡ ಜನರ ನೆರವಿಗೆ ಶಾಸಕ ಯಶವಂತ್ರಾಯ ಗೌಡ ಪಾಟೀಲ ಮುಂದಾಗಿದ್ದಾರೆ. ಮತಕ್ಷೇತ್ರದ ಪ್ರತಿ ಹಳ್ಳಿಗಳ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಮುಂದಾಗಿದ್ದು, 11 ಸಾವಿರ ಕಿಟ್ ತಯಾರಿ ಭರದಿಂದ ಸಾಗಿದೆ.
ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ಆಹಾರ ಸಾಮಗ್ರಿಗಳ ಪ್ಯಾಕಿಂಗ್ ಕಾರ್ಯ ನಡೆದಿದ್ದು ರವಿವಾರ ಮತ್ತು ಸೋಮವಾರ ಎರಡು ದಿನಗಳಲ್ಲಿ ಇಡೀ ಕ್ಷೇತ್ರದ ಬಡ ಜನರಿಗೆ ಕಿಟ್ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ರವಿವಾರ ಸಾಂಕೇತಿಕವಾಗಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಸಿ ವಿತರಣೆಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ದಿನಸಿ ಕಿಟ್‌ನಲ್ಲಿ 2 ಕೆಜಿ ಗೋದಿ ಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿ ತೊಗರಿಬೇಳೆ, 1 ಕೆಜಿ ಒಳ್ಳೆಣ್ಣೆ, ಚಹಾಪುಡಿ, ಅರಿಷಿಣ, ಸಾಸಿವೆ, ಜೀರಿಗೆ ಇದೆ. ಅಂದಾಜು 33 ಲಕ್ಷ ರೂಪಾಯಿ ವೆಚ್ಚದ ಕಿಟ್ ತಯಾರಾಗಿದ್ದು ಅದನ್ನು ವಿತರಿಸುವ ಕಾರ್ಯ ರವಿವಾರ ಪ್ರಾರಂಭವಾಗಲಿದೆ.
80 ಹಳ್ಳಿಗಳಿಗೆ 8 ಸಾವಿರ ಕಿಟ್, ಇಂಡಿ ನಗರಕ್ಕೆ 1 ಸಾವಿರ ಕಿಟ್, ತಾಂಡಾಗಳಿಗೆ 1 ಸಾವಿರ ಕಿಟ್ ವಿತರಿಸಲು ಯೋಜಿಸ ಲಾಗಿದ್ದು, ಹೆಚ್ಚುವರಿಯಾಗಿ 1 ಸಾವಿರ ಕಿಟ್ ಸೇರಿ ಒಟ್ಟು 11 ಸಾವಿರ ಕಿಟ್ ತಯಾರಿಸಲಾಗುತ್ತಿದೆ. ಈ ಕಿಟ್ ನೀಡುವ ಸಲುವಾಗಿ ಕಾರ್ಯಕರ್ತರ ಸಭೆ ಕರೆದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಬಡ ಜನರ ಅಂಕಿ ಅಂಶವನ್ನು ಅಂದಾಜಿಸಿ ಈ ಕಿಟ್ ತಯಾರಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ ಲಾಕ್ ಡೌನ್ ಮುಂದುವರಿದರೆ ಇನ್ನೊಮ್ಮೆ ಇಂತಹ ಕಿಟ್ ತಯಾರಿಸಿ ಬಡ ಜನರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.