ಸಾಮಾನ್ಯ ವರ್ಗದ ಸರ್ಕಾರಿ ನೌಕರರಿಗೆ ಅನ್ಯಾಯ
Team Udayavani, Oct 9, 2017, 1:42 PM IST
ವಿಜಯಪುರ: ಬಡ್ತಿ ಮೀಸಲಾತಿಯಲ್ಲಿನ ಅವೈಜ್ಞಾನಿಕ ನೀತಿ-ನಿಯಮಾವಳಿಗಳಿಂದಾಗಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಸರ್ಕಾರಿ ನೌಕರರು ಅನೇಕ ರೀತಿಯ ಅನ್ಯಾಯ ಎದುರಿಸುವಂತಾಗಿದೆ. ಪರಿಣಾಮವಾಗಿ ನೌಕರರು ಮಾನಸಿಕ ನೋವು ಅನುಭವಿಸುತ್ತಿದ್ದಾರೆ ಎಂದು
ಅಹಿಂಸಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಎಂ.ನಾಗರಾಜ ಹೇಳಿದರು.
ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳ ಸರ್ಕಾರಿ ನೌಕರರ ಹಾಗೂ ಸಿಬ್ಬಂದಿ, ನಿವೃತ್ತರ ಹಿತರಕ್ಷಣಾ ಒಕ್ಕೂಟದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇವಲ ಸಂಬಳಕ್ಕಾಗಿ ಸರ್ಕಾರಿ ನೌಕರ ನೌಕರಿ ಮಾಡುವುದಿಲ್ಲ. ಜನಸೇವೆಯನ್ನು ತಮ್ಮ ಧ್ಯೇಯವಾಗಿರಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಘನತೆ ಸಂಪಾದಿಸುವ ದೃಷ್ಟಿಯಿಂದಲೂ ಕಾರ್ಯ ನಿರ್ವಹಿಸುತ್ತಾರೆ. ಆದರೆ ನ್ಯಾಯಯುತವಾಗಿ ದೊರಕಬೇಕಾದ ಬಡ್ತಿ ದೊರಕದೇ ಮನಸ್ಸಿಗೆ ನೋವುಂಟಾಗುವುದಂತೂ ಸತ್ಯ ಎಂದರು.
ತನ್ನೊಡನೆ ಸೇವೆಗೆ ಪದಾರ್ಪಣೆ ಮಾಡಿದ, ತನ್ನಷ್ಟೇ ವಿದ್ಯಾರ್ಹತೆ ಹೊಂದಿದ ಆತನ ಪರಿಶಿಷ್ಟ ಪಂಗಡದ ಸಹುದ್ಯೋಗಿ ಮೇಲಾಧಿಕಾರಿಯಾಗುತ್ತಾನೆ. ಆದರೆ ಸಾಮಾನ್ಯ ವರ್ಗಕ್ಕೆ ಸೇರಿದ ವ್ಯಕ್ತಿ ಮಾತ್ರ ಪ್ರಮೋಷನ್‌ನಿಂದ ವಂಚಿತವಾಗಿ ಕೆಳಹಂತದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದು ಸಹಜವಾಗಿಯೇ ನೌಕರರಲ್ಲಿ ನೋವಿಗೆ ಕಾರಣವಾಗುತ್ತದೆ ಎಂದರು.
ನಾವು ಮೀಸಲಾತಿ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿ ಅವರು, ಸುಪ್ರೀಂಕೋರ್ಟ್ ಸಹ ಮೀಸಲಾತಿ ಅವಶ್ಯಕತೆ ಒತ್ತಿ ಹೇಳಿದೆ. ನೇಮಕಾತಿ ಸಂದರ್ಭದಲ್ಲಿ, ಶೈಕ್ಷಣಿಕ ಸೇವೆ ಪಡೆದುಕೊಳ್ಳುವಲ್ಲಿ ಮೀಸಲಾತಿ ಇರಬೇಕು. ಆದರೆ ಬಡ್ತಿ ಸಮಯದಲ್ಲಿ ಮೀಸಲಾತಿ ಇರಬೇಕಾಗಿರುವುದು ಅವಶ್ಯವಲ್ಲ
ಎಂಬುದು ನಮ್ಮ ಪ್ರತಿಪಾದನೆ ಎಂದರು.
ಅವೈಜ್ಞಾನಿಕ ಬಡ್ತಿ ಮೀಸಲಾತಿ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದಲ್ಲ. 1978ರಿಂದಲೂ ನಿರಂತರವಾಗಿ ಈ ಬಡ್ತಿ ಮೀಸಲಾತಿ ವಿರುದ್ಧ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್‌ಗೆ ಹೋಗಿ ನ್ಯಾಯ ಪಡೆದುಕೊಳ್ಳಲಾಗಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನದ ಹೊಣೆ ಹೊತ್ತ ಸರ್ಕಾರಗಳು ಮಾತ್ರ ಸುಪ್ರೀಂ ಆದೇಶ ಪಾಲಿಸಲಿಲ್ಲ. ಬದಲಾಗಿ ಹಿಂಬಡ್ತಿ ಪಡೆದ ಪರಿಶಿಷ್ಟ ಪಂಗಡ ಅಧಿಕಾರಿಗಳು ಆಡಳಿತ ಯಂತ್ರಕ್ಕೆ ಒತ್ತಡದಿಂದಾಗಿ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಮಸೂದೆ ಅಂಗೀಕರಿಸಲಾಗಿದೆ ಎಂದರು.
ಇದು ನಮಗೆ ಹಿನ್ನೆಡೆಯಾದರೂ ಸಹ ನಾವು ಹೋರಾಟ ಮಾತ್ರ ಕೈ ಬಿಡಲಿಲ್ಲ. ಸರ್ವೋತ್ಛ ನ್ಯಾಯಾಲಯದ ತೀರ್ಪು ಅಸಿಂಧು ಗೊಳಿಸುವ ಕಾರಣದಿಂದಾಗಿಯೇ ಬಡ್ತಿ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಲಯ ಗಮನ ಹರಿಸಬೇಕು ಎಂಬ ವಿಷಯವನ್ನೇ ಕೇಂದ್ರಿಕರಿಸಿ ಪುನಃ ಸುಪ್ರೀಂಗೆ ಅರ್ಜಿ ಸಲ್ಲಿಸಿದೆವು. ಅದರೊಂದಿಗೆ ನ್ಯಾಯಾಂಗ ನಿಂದನೆ ಸಹ ದಾಖಲಿಸಲಾಯಿತು ಎಂದು ಕಾನೂನು ಹೋರಾಟದ ಕುರಿತು ವಿವರಿಸಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು, ಯರನಾಳ ವಿರಕ್ತಮಠದ ಸಂಗನಬಸವ ಶ್ರೀಗಳು, ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮೀ, ಬುರಾಣಪುರ ಆರೂಢಾಶ್ರಮದ ಮಾತೋಶ್ರೀ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಪೀಟರ್ ಅಲೆಕ್ಸಾಂಡರ್, ವಿಶ್ವನಾಥ ಭಾವಿ ಇದ್ದರು. ಸಂಘಟನೆ ಅಧ್ಯಕ್ಷ ವಿಜಯಕುಮಾರ ಹಲಕುಡೆ
ಪ್ರಾಸ್ತಾವಿಕ ಮಾತನಾಡಿದರು. ಮೆಹತಾಬ್ ಕಾಗವಾಡ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.