ಹಸರೀಕರಣಕ್ಕೆ ವಿನೂತನ ಪ್ರಯತ್ನ
Team Udayavani, Jun 3, 2018, 3:21 PM IST
ಇಂಡಿ: ಪ್ರಾದೇಶಿಕ ಅರಣ್ಯ ಇಲಾಖೆಯಿಂದ ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿಗೆ ಮತ್ತು ಉತ್ತಮ ತಳಿಯ ಸಸಿಗಳನ್ನು ತಯಾರಿಸುವ ಕಾರ್ಯವನ್ನು ಇಂಡಿ ತಾಲೂಕಿನ ಜೇವೂರ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯವರು ಮಾಡಿದ್ದಾರೆ.
ಒಟ್ಟು 16.93 ಹೆಕ್ಟೇರ್ ಪ್ರದೇಶ ಸ್ಥಳ ಅರಣ್ಯ ಇಲಾಖೆಗೆ ಮೀಸಲಿರಿಸಲಾಗಿದೆ. ಅದರಲ್ಲಿ ಒಂದು ಹೆಕ್ಟೇರ್ ಅಂದರೆ ಸರಿ ಸುಮಾರು 2.5 ಎಕರೆಯಿಂದ 3 ಎಕರೆವರೆಗೆ ನರ್ಸರಿ ಮಾಡಿ ವಿವಿಧ ತಳಿಗಳ ಸಸಿಗಳನ್ನು ತಯಾರಿಸಲಾಗಿದೆ. ನರ್ಸರಿ ಸ್ಥಳದಲ್ಲಿ ಒಂದು ಬೋರ್ವೆಲ್ ಇದೆ. ಆದರೆ ಆ ಬೋರ್ವೆಲ್ ನೀರು ಸಾಕಾಗದೆ ಇರುವುದರಿಂದ ಖಾಸಗಿಯವರ ಬೋರ್ವೆಲ್ ಬಳಸಿ ಸಸಿ ಸಂರಕ್ಷಿಸುವ ಕಾರ್ಯವನ್ನು ಪ್ರಾದೇಶಿಕ ಅರಣ್ಯ ಇಲಾಖೆಯವರು ಮಾಡಿದ್ದಾರೆ.
ಫೆಬ್ರವರಿ ತಿಂಗಳಿನಿಂದಲೇ ಪ್ಲಾಸ್ಟಿಕ್ ಕವರ್ಗಳಲ್ಲಿ ಮಣ್ಣು ತುಂಬಿಸಿ ಅದರಲ್ಲಿ ಬೀಜ ನೆಟ್ಟು ನೀರು ಹಾಕಿ ಆರೈಕೆ ಮಾಡಲಾಗಿದೆ. ಜೂನ್ ತಿಂಗಳಿನಲ್ಲಿ ಮಳೆಯಾದ ತಕ್ಷಣ ರೈತರಿಗೆ ಉಪಯೋಗವಾಗುವ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ. ಸದ್ಯ ನರ್ಸರಿಯಲ್ಲಿ ಸಾಗ್ವಾನಿ, ಹೆಬ್ಬೇವು, ಸೀತಾಫಲ, ಪೆರಲ, ನುಗ್ಗೆ, ಬಾರಿ, ನಿಂಬೆ, ನೇರಳೆ, ನೆಲ್ಲಿ, ಹುಣಸೆ, ಸಿಹಿ ಹುಣಸೆ, ಶಿವಣಿ, ಬನ್ನಿ, ಬಿಲ್ವ ಪತ್ರಿ, ತಪಸ್ವಿ, ಬಸವನಪಾದ, ಗ್ಲೀರಿಸಿಡಿಯಾ, ಹಲಸು, ಹೊಂಗೆ ಸೇರಿದಂತೆ ಇನ್ನಿತರ ಸಸಿಗಳನ್ನು ತಯಾರಿಸಲಾಗಿದೆ.
ತಿಮ್ಮಕ್ಕಗೆ ಗೌರವ: ತಮ್ಮ ಜೀವಮಾನದ ಅವಧಿಯಲ್ಲಿ ಮಕ್ಕಳಿಗಿಂತ ಹೆಚ್ಚಿಗೆ ಕಾಳಜಿ ಮಾಡಿ ಸಾಲು-ಸಾಲಾಗಿ ಸಸಿ ನೆಟ್ಟು ಪರಿಸರ ರಕ್ಷಣೆಯಲ್ಲಿಯೇ ತಮ್ಮ ಇಡಿ ಜೀವನ ಮುಡುಪಾಗಿಟ್ಟ ಸಾಲುಮರದ ತಿಮ್ಮಕ್ಕನನ್ನು ಗೌರವಿಸುವ ಉದ್ದೇಶದಿಂದ ಜೇವೂರ ಗ್ರಾಮದ ನರ್ಸರಿ ಪಕ್ಕದಲ್ಲಿಯೇ 10 ಎಕರೆ ಜಾಗದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಎಂದು ನಾಮಕರಣ ಮಾಡಿ ಅದರಲ್ಲಿ ಮಕ್ಕಳ ಆಟಿಕೆ, ಪ್ಯಾರಾಗೋಲ, ವಾಕಿಂಗ್ ಪಾರ್ಕ್, ವಾಟರ್ ಟ್ಯಾಂಕ್, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಒಂದುವರೆ ಲಕ್ಷ ಸಸಿಗಳನ್ನು ತಯಾರಿಸಲಾಗಿದೆ. ಸಸಿಗಳ ಬೆಲೆ ಕೇವಲ 1, 3, 5 ರೂ. ಇದ್ದು ರೈತರು ತಮಗೆ ಬೇಕಾದ ಸಸಿಗಳನ್ನು ಪಡೆಯಲು ಅರಣ್ಯ ರಕ್ಷಕ ಡಿ.ಎ. ಮುಜಗೊಂಡ (9845703782) ಅವರನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿ¨
ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಸಸಿ ತಯಾರಿಸಿ ರಸ್ತೆ ಬದಿಯಲ್ಲಿ ಸಸಿ ನೆಟ್ಟು ಇಲಾಖೆ ಘೋಷಿಸುತ್ತಿದೆ. ಸಾರ್ವಜನಿಕರು ಸಹ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು.
ಆರ್.ಆರ್. ಚವ್ಹಾಣ, ವಲಯ ಅರಣ್ಯಾಧಿಕಾರಿ
ನಾವು ಜೇವೂರ ನರ್ಸರಿಯಲ್ಲಿ ಇಷ್ಟು ಪ್ರಮಾಣದಲ್ಲಿ ಸಸಿಗಳನ್ನು ತಯಾರಿಸಬೇಕೆಂದರೆ ನಮ್ಮ ಮೇಲಾ ಧಿಕಾರಿಗಳಾದ ಆರ್.ಆರ್. ಚವ್ಹಾಣ ಹಾಗೂ ಜಿಲ್ಲಾ ಉಪವಲಯ ಸಂರಕ್ಷಣಾಧಿಕಾರಿ ಕೆ.ವಿ. ನಾಯಕ ಅವರ ಸಹಕಾರವಿದೆ.
ಡಿ.ಎ. ಮುಜಗೊಂಡ, ಅರಣ್ಯ ರಕ್ಷಕ, ಜೇವೂರ
ನಮ್ಮ ಗ್ರಾಮದ ಹತ್ತಿರವೇ ನರ್ಸರಿ ಮಾಡಿದ್ದಾರೆ. ಪ್ರತಿ ವರ್ಷವೂ ಉತ್ತಮ ಮತ್ತು ಬೇರೆ-ಬೇರೆ ತಳಿ ಸಸಿಗಳನ್ನು
ತಯಾರಿಸುತ್ತಾರೆ. ಹೀಗಾಗಿ ಈ ಭಾಗದಲ್ಲಿ ರೈತರಿಗೆ ಈ ನರ್ಸರಿಂದ ತುಂಬಾ ಅನುಕೂಲವಾಗಿದೆ.
ಶಿವುಗೌಡ ಬಿರಾದಾರ, ಜೇವೂರ ರೈತ
ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.